ದುಬಾರಿ ಮದುವೆಗೆ ತೆರಿಗೆ: ಸರ್ಕಾರದ ಚಿಂತನೆಗೆ ಹೈಕಮಾಂಡ್ ಬ್ರೇಕ್
ಅದ್ಧೂರಿ ಅಥವಾ ವೈಭವೋಪೇತ ದುಬಾರಿ ಮದುವೆಗೆ ತೆರಿಗೆ ವಿಧಿಸಲು ಮುಂದಾಗಿದ್ದ ರಾಜ್ಯ ಸರ್ಕಾರದ ನಿರ್ಧಾರಕ್ಕೆ..
ನವದೆಹಲಿ: ಅದ್ಧೂರಿ ಅಥವಾ ವೈಭವೋಪೇತ ದುಬಾರಿ ಮದುವೆಗೆ ತೆರಿಗೆ ವಿಧಿಸಲು ಮುಂದಾಗಿದ್ದ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಕಾಂಗ್ರೆಸ್ ಹೈಕಮಾಂಡ್ ಶನಿವಾರ ಬ್ರೇಕ್ ಹಾಕಿದೆ.
ಮದುವೆ ಎನ್ನುವುದು ಜನರ ಖಾಸಗಿ ಸಮಾರಂಭ ಮತ್ತು ವೈಯಕ್ತಿಕ ವಿಚಾರ. ಈ ವಿಚಾರದಲ್ಲಿ ಜನರ ಭಾವನೆಗಳಿಗೆ ಧಕ್ಕೆ ತರುವಂತೆ ನಡೆದುಕೊಳ್ಳಬೇಡಿ ಮತ್ತು ಯಾವುದೇ ಕಾರಣಕ್ಕೂ ಇಂತಹ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಕಾಂಗ್ರೆಸ್ ಹೈಕಮಾಂಡ್ ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಅಲ್ಲದೆ ಮೂಲ ಸೌಕರ್ಯ ಕಲ್ಪಿಸುವತ್ತ ಗಮನಕೊಡಿ ಎಂದು ಸೂಚಿಸಿದೆ.
ಐದು ಲಕ್ಷ ರುಪಾಯಿಗಳಿಗಿಂತ ಹೆಚ್ಚು ಖರ್ಚು ಮಾಡಿದರೆ ಹಾಗೂ ಒಂದು ಸಾವಿರಕ್ಕಿಂತ ಹೆಚ್ಚು ಮಂದಿ ಪಾಲ್ಗೊಂಡರೆ ಅದನ್ನು ವೈಭವೋಪೇತ ಮದುವೆ ಎಂದು ಪರಿಗಣಿಸಿ ಅದಕ್ಕೆ ತೆರಿಗೆ ವಿಧಿಸುವ ಚಿಂತನೆ ಇಂದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಅವರು ಹೇಳಿದ್ದರು.
ರ್ನಾಟಕ ವಿವಾಹ ನಿಯಂತ್ರಣ ಕಾಯಿದೆ- 1976ಕ್ಕೆ ತಿದ್ದುಪಡಿ ತಂದು ತೆರಿಗೆ ವಿಧಿಸುವುದು ಅವರ ಚಿಂತನೆಯಾಗಿತ್ತು. ಅದ್ಧೂರಿ ವಿವಾಹಗಳಿಂದ ಸಂಗ್ರಹವಾಗುವ ತೆರಿಗೆ ಹಣಕ್ಕೆ 'ಮಾಂಗಲ್ಯನಿಧಿ' ಎಂದು ಹೆಸರಿಸಿ, ಈ ಹಣವನ್ನು ಬಡವರ ಸಾಮೂಹಿಕ ವಿವಾಹಕ್ಕೆ ನೀಡುವುದು ಸರ್ಕಾರದ ಉದ್ದೇಶವಾಗಿತ್ತು.