ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ವಿಧಾನಸಭೆ ಚುನಾವಣೆಗೆ ಸಿದ್ಧವಾಗಿ: ಬಿಜೆಪಿ ಪ.ಕಾರ್ಯದರ್ಶಿಗಳಿಗೆ ಪ್ರಧಾನಿ ಸೂಚನೆ

ಪ್ರಧಾನಮಂತ್ರಿ ನರೇಂದ್ರ...

Lingaraj Badiger
Updated On : 31 May 2014, 5:23 am

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ತಮ್ಮ ನಿವಾಸದಲ್ಲಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿಗಳನ್ನು ಭೇಟಿ ಮಾಡಿದ್ದು, ಇನ್ನು ಕೆಲವೇ ತಿಂಗಳಲ್ಲಿ ನಡೆಯಲಿರುವ ಕೆಲವು ಪ್ರಮುಖ ರಾಜ್ಯಗಳ ವಿಧಾಸಭೆ ಚುನಾವಣೆಗೆ ಸಿದ್ಧವಾಗುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಪಕ್ಷದ 10 ಪ್ರಧಾನ ಕಾರ್ಯದರ್ಶಿಗಳೊಂದಿಗೆ ಪಕ್ಷ ಸಂಘಟನೆ ಕುರಿತು ಸುಮಾರು 1 ಗಂಟೆಗಳ ಕಾಲ ಚರ್ಚಿಸಿದರು. ಈ ವೇಳೆ ಪಕ್ಷ ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವಂತೆ ನಾಯಕರಿಗೆ ಸಲಹೆ ನೀಡಿದರು.

ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ನರೇಂದ್ರ ಮೋದಿ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿಗಳ ಸಭೆ ಕರೆದಿದ್ದರು. ಸಭೆಯಲ್ಲಿ ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್, ಪ್ರಧಾನ ಕಾರ್ಯದರ್ಶಿಗಳಾದ ರಾಮ್ ಲಾಲ್, ಅಮಿತ್ ಶಾ, ಅನಂತ್ ಕುಮಾರ್, ಧರ್ಮೇಂದ್ರ ಪ್ರಧಾನ್, ವರುಣ್ ಗಾಂಧಿ, ರಾಜೀವ್ ಪ್ರಧಾಪ್ ರೂಡಿ, ಥಾವರ್‌ಚಂದ್ ಗೆಹ್ಲೋಟ್, ಜೆ.ಪಿ,ನಡ್ಡಾ, ತಪಿರ್ ಗೋವಾ ಹಾಗೂ ಮುರಳಿಧರ್ ರಾವ್ ಅವರು ಉಪಸ್ಥಿತರಿದ್ದರು.

ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಇದೇ ವರ್ಷ ವಿಧಾಸಭೆ ಚುನಾವಣೆ ನಡೆಯಲಿದೆ ಮತ್ತು ಜಾರ್ಖಂಡ್ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement