ಕಸ ವಿಲೇವಾರಿ: ಗ್ರಾಮಸ್ಥರಲ್ಲಿ ೬ ತಿಂಗಳ ಕಾಲಾವಕಾಶ ಕೇಳಿದ ಮೇಯರ್
ಮಂಡೂರಿನಲ್ಲಿ ಡಂಪಿಂಗ್ ಯಾರ್ಡ್ನಲ್ಲಿ ಕಸ ವಿಲೇವಾರಿ ಮಾಡದಂತೆ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನಾಕಾರರ ಮನವೊಲಿಸಲು...
ಬೆಂಗಳೂರು: ಮಂಡೂರಿನಲ್ಲಿ ಡಂಪಿಂಗ್ ಯಾರ್ಡ್ನಲ್ಲಿ ಕಸ ವಿಲೇವಾರಿ ಮಾಡದಂತೆ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನಾಕಾರರ ಮನವೊಲಿಸಲು ಬಿಬಿಎಂಪಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ನಡೆಸಿದ ಪ್ರಯತ್ನ ವಿಫಲವಾಗಿದೆ.
ಬೆಳಗ್ಗೆಯಿಂದಲೇ ಮಂಡೂರು ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದು, ಪ್ರಾಣ ಬೇಕಾದರೂ ಬಿಟ್ಟೇವು ಆದರೆ ಕಸ ಹಾಕಲು ಬಿಡುವುದಿಲ್ಲ ಎಂದು ಘರ್ಜಿಸಿದ್ದಾರೆ. ಮಂಡೂರಿಗೆ ಸಚಿವ ರಾಮಲಿಂಗಾ ರೆಡ್ಡಿ, ಮಾಜಿ ಸಚಿವ ಅರವಿಂದ್ ಲಿಂಬಾವಳಿ ಹಾಗೂ ಮೇಯರ್ ಕಟ್ಟೆ ಸತ್ಯನಾರಾಯಣ ಭೇಟಿ ನೀಡಿ ಸಂಧಾನ ಮಾತುಕತೆ ನಡೆಸಿದರು.
ಈ ವೇಳೆ ಮಾತನಾಡಿದ ಲಿಂಬಾವಳಿ, ಪಕ್ಷಾತೀತವಾಗಿ ನಾವು ಮಂಡೂರಿನ ಸಮಸ್ಯೆ ಬಗೆಹರಿಸಲು ಸಿದ್ಧರಾಗಿದ್ದೇವೆ ಅದಕ್ಕಾಗಿ ಇಲ್ಲಿಗೆ ಬಂದಿದ್ದು. ಕಸ ವಿಲೇವಾರಿಗೆ ಬೇರೆ ಕಡೆ ಸ್ಥಳ ನಿಗದಿಯಾಗುವವರೆಗೆ ಬಿಬಿಎಂಪಿಗೂ ಸ್ವಲ್ಪ ಕಾಲಾವಕಾಶ ನೀಡಿ ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿಕೊಂಡದರು. ಆದರೆ ಸಚಿವರ ಹಾಗೂ ಮೇಯರ್ರ ಆಶ್ವಾಸನಗಳಿಗೆ ಜನತೆ ಜಗ್ಗಲಿಲ್ಲ ಇದರಿಂದ ಅಲ್ಲಿಂದ ತೆರಳಿದ ಸಚಿವರು, ಮೇಯರ್ ಮಹದೇವಪುರದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದರು.
ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೇಯರ್ ಬಿ.ಎಸ್. ಸತ್ಯನಾರಾಯಣ, ಮಂಡೂರು ಗ್ರಾಮಸ್ಥರಿಗೆ ಬಿಬಿಎಂಪಿ ಮೇಲೆ ವಿಶ್ವಾಸ ಹೋಗಿದೆ. ಆದರೆ ಸಮಸ್ಯೆ ಉಲ್ಬಣಕ್ಕೆ ಹಾಸ್ಪದ ಕೊಡುವುದಿಲ್ಲ. ಕೂಡಲೆ 4 ಯೋಜನೆಗಳನ್ನು ಬಿಬಿಎಂಪಿ ಕೊಳ್ಳಲಿದ್ದು, ಮುಂದಿನ ದಿನಗಳಲ್ಲಿ ಮಂಡೂರಿನಲ್ಲಿ ಕಸ ಸುರಿಯುದಿಲ್ಲ. ಈ ಸಮಸ್ಯೆ ಪರಿಹಾರಕ್ಕಾಗಿ ೬ ತಿಂಗಳ ಕಾಲಾವಕಾಶಬೇಕು. ಏಕಾಏಕಿ ಮಂಡೂರಿನ ಡಂಪಿಂಗ್ ಯಾರ್ಡ್ನಲ್ಲಿ ಕಸ ವಿಲೇವಾರಿ ನಿಲ್ಲಿಸಿದರೆ ಬೆಂಗಳೂರು ನಗರದಲ್ಲಿ ಕಸದ ಸಮಸ್ಯೆ ತಲೆದೋರುತ್ತದೆ ಎಂದರು.