ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ರಾಹುಲ್‌ರನ್ನು 'ಜೋಕರ್ ತಂಡದ ಅಧ್ಯಕ್ಷ' ಎಂದಿದ್ದ ಶಾಸಕನ ಅಮಾನತು

Vishwanath S
Updated On : 1 Jun 2014, 4:48 am

ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು 'ಜೋಕರ್‌ಗಳ ತಂಡದ ಅಧ್ಯಕ್ಷ' ಎಂದು ಲೇವಡಿ ಮಾಡಿದ್ದ ರಾಜಸ್ಥಾನ ಕಾಂಗ್ರೆಸ್ ಶಾಸಕ ಭನ್ವಾರ್ ಲಾಲ್ ಶರ್ಮಾ ಅವರನ್ನು ಭಾನುವಾರ ಪಕ್ಷದಿಂದ ಹೈಕಮಾಂಡ್ ಅಮಾನತುಗೊಳಿಸಿದೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿದ ಬೆನ್ನಲ್ಲೆ ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಕೇರಳ ಕಾಂಗ್ರೆಸ್ ನಾಯಕ ಟಿ.ಎಚ್ ಮುಸ್ತಫಾ ಅವರು ರಾಹುಲ್ ಅವರನ್ನು 'ಜೋಕರ್‌' ಎಂದು ಕರೆದಿದ್ದರು. ಈ ಹೇಳಿಕೆಯಿಂದಾಗಿ ಮುಸ್ತಫಾ ಅವರು ಹೈಕಮಾಂಡ್ ಕೆಂಗಣ್ಣಗೆ ಗುರಿಯಾಗಿ ಅಮಾನತ್ತುಗೊಂಡಿದ್ದರು. ಮುಸ್ತಫಾ ನಂತರ ಇದೀಗ ಶಾಸಕ ಭನ್ವಾರ್ ಲಾಲಾ ಶರ್ಮಾ ಅಮಾನುತುಗೊಂಡಿದ್ದಾರೆ.

ರಾಹುಲ್ ಅವರಿಂದಾಗಿ ಕಾಂಗ್ರೆಸ್ ಅತ್ಯಂತ ಸಂಕಷ್ಟದ ದಿನಗಳನ್ನು ನೋಡುತ್ತಿದೆ. ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ಅವರು ಪುತ್ರನ ಮೇಲೆ ಮಮತೆ ತೋರುವ ಬದಲಿಗೆ ಕಾಂಗ್ರೆಸ್ ಬಲಪಡಿಸುವತ್ತ ಗಮನಹಿಸಬೇಕು ಎಂದು ಭನ್ವಾರ್ ಲಾಲ್ ಶರ್ಮಾ ಆಗ್ರಹಿಸಿದ್ದರು. ಅಲ್ಲದೆ ರಾಹುಲ್ ಗಾಂಧಿಗೆ ಗೊತ್ತು-ಗುರಿ ಇಲ್ಲ. ಯಾವುದೇ ನೀತಿಯೂ ಅವರಿಗಿಲ್ಲ ಚುನಾವಣೆಯಲ್ಲಿ ಪಕ್ಷ ಮುಖಭಂಗ ಅನುಭವಿಸಲು ರಾಹುಲ್ ಹಾಗೂ ಅವರ ಸಲಹೆಗಾರರೇ ಕಾರಣ. ರಾಹುಲ್ ಗಾಂಧಿಗೇನು ಬಾರಿ ಜನಬೆಂಬಲವೇನೂ ಇಲ್ಲ ಟೀಕಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement