ಜೀವನಶೈಲಿ

2025ರ ಹೊತ್ತಿಗೆ ವಿಶ್ವದಲ್ಲಿ 268 ದಶಲಕ್ಷ ಮಕ್ಕಳಲ್ಲಿ ಸ್ಥೂಲಕಾಯ ಸಮಸ್ಯೆ: ಅಧ್ಯಯನ

Sumana Upadhyaya
ಲಂಡನ್: 2025ರ ಹೊತ್ತಿಗೆ ವಿಶ್ವದಲ್ಲಿ 5ರಿಂದ 17 ವರ್ಷದೊಳಗಿನ 268 ದಶಲಕ್ಷ ಮಕ್ಕಳು ಸ್ಥೂಲಕಾಯ ಹೊಂದಿರಬಹುದು ಎಂದು ಸಂಶೋಧನೆಯೊಂದು ಹೇಳಿದೆ.
ವಿಶ್ವ ಬ್ಯಾಂಕ್ ನೀಡಿದ ಅಂಕಿಅಂಶದ ಪ್ರಕಾರ 2010ರಲ್ಲಿ ವಿಶ್ವದಲ್ಲಿ ಈ ವಯಸ್ಸಿನ 219 ದಶಲಕ್ಷ ಮಕ್ಕಳು ಸ್ಥೂಲಕಾಯ ಹೊಂದಿದ್ದು, 2025ರ ವೇಳೆಗೆ 268 ದಶಲಕ್ಷವಾಗಿದೆ ಎಂದು ಪೀಡಿಯಾಟ್ರಿಕ್ ಒಬೆಸಿಟಿ ಎಂಬ ನಿಯತಕಾಲಿಕೆಯಲ್ಲಿ ಅಧ್ಯಯನ ಪ್ರಕಟಗೊಂಡಿದೆ.
ಈ ಅಂಕಿಅಂಶ ಆರೋಗ್ಯ ಸೇವೆ ವೃತ್ತಿಪರರಲ್ಲಿ ಆತಂಕವನ್ನುಂಟು ಮಾಡಿದೆ. ಇದಕ್ಕೆ ಅವರು ಪರಿಹಾರ ಕಂಡುಹಿಡಿಯಬೇಕಾಗಿದೆ ಎನ್ನುತ್ತಾರೆ ಅಧ್ಯಯನದ ಸಹ ಲೇಖಕ ವಿಶ್ವ ಬೊಜ್ಜು ಒಕ್ಕೂಟದ ಟಿಮ್ ಲೊಬ್ಸ್ಟೈನ್.
ಅಕ್ಟೋಬರ್ 11 ವಿಶ್ವ ಬೊಜ್ಜು ದಿನವಾಗಿದ್ದು ಬೊಜ್ಜು ಮತ್ತು ಅದರಿಂದ ಮಕ್ಕಳ ಆರೋಗ್ಯದ ಮೇಲೆ ಉಂಟಾಗುವ ದುಷ್ಟರಿಣಾಮದ ಬಗ್ಗೆ ಎಚ್ಚರಿಕೆ ನೀಡಿದೆ.
2025ರ ಹೊತ್ತಿಗೆ 12 ದಶಲಕ್ಷ ಮಕ್ಕಳು ಗ್ಲುಕೋಸ್ ಟಾಲರೆನ್ಸ್, ಮಧುಮೇಹ, ರಕ್ತದೊತ್ತಡ, ಯಕೃತ್ತಿನ ಸಮಸ್ಯೆ, ಕೊಬ್ಬು ಸಂಗ್ರಹ ಇತ್ಯಾದಿ ಸಮಸ್ಯೆಗಳಿಂದ ಬಳಲಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
SCROLL FOR NEXT