ಜೀವನಶೈಲಿ

ಆಯಾಸವಾಗಿದ್ದಾಗಲೇ ಜಂಕ್ ಫುಡ್ ತಿನ್ನಬೇಕೆಂಬ ಬಯಕೆಯಾಗುತ್ತದೆ ಏಕೆ?

Shilpa D
ಲಂಡನ್: ನಮಗೆ ಸುಸ್ತಾಗಿದ್ದಾಗ, ಹಣ್ಣಿನಂತಹ ಆರೋಗ್ಯಯುತ ಆಹಾರಗಳು ನಮ್ಮ ಎದುರಿಗಿದ್ದರೂ ನಮಗೆ ಚಾಕೋಲೇಟ್ ಬಾರ್ ಮತ್ತು ಬಿಸ್ಕಿಟ್ಸ್ ಪ್ಯಾಕೆಟ್ ಗಳೇ ಹೆಚ್ಚು ಇಷ್ಟವಾಗುತ್ತವೆ ಏಕೆ ಎಂಬ ಪ್ರಶ್ನೆಗೆ ಸಂಶೋಧಕರು ಉತ್ತರ ಕಂಡು ಹಿಡಿದಿದ್ದಾರೆ.
ಸ್ಯಾನ್ ಫ್ರಾನ್ಸಿಸ್ಕೋದ ಅರಿವಿನ ನ್ಯುರೊಸೈನ್ಸ್ ಸೊಸೈಟಿ ವಾರ್ಷಿಕ ಸಭೆಯಲ್ಲಿ ಚಿಕಾಗೋದ ನಾರ್ತ್ ವೆಸ್ಟರ್ನ್ ಯುನಿವರ್ಸಿಟಿಯ ರಿಸೇರ್ಚರ್ಸ್ ಸ್ಕೂಲ್ ಆಫ್ ಫೈನ್ ಬರ್ಗ್ ಸಂಶೋಧಕರು, ಹೆಚ್ಚು ಕ್ಯಾಲರಿ ಇರುವ ಆಹಾರ ಸೇವನೆಯಿಂದಾಗಿ ನಿದ್ದೆಯ ಮೇಲೆ ಪರಿಣಾ ಬೀರುತ್ತದೆ ಎಂದು ವರದಿ ಮಾಡಿದೆ.
ಇದರಲ್ಲಿ ಭಾಗಿಯಾಗಿದ್ದವರಿಗೆ ವಿವಿಧ ಸಮಯದಲ್ಲಿ ನಿದ್ದೆ ಮಾಡಲು ಅವಕಾಶ ನೀಡಲಾತ್ತು. 8 ಗಂಟೆ ಮತ್ತು ನಾಲ್ಕು ಗಂಟೆಗಳ ಕಾಲ ನಿದ್ರಿಸಲು ಗಡುವು ನೀಡಲಾಗಿತ್ತು. 
ಒಂದು ವಾರದ ನಂತರ ನಿದ್ರೆ ಮಾಡಿದವರನ್ನು ಬೇರ್ಪಡಿಸಲಾಯಿತು, ಅದರಲ್ಲಿ ಕಡಿಮೆ ನಿದ್ರೆ ಮಾಡಿದವರ ಮಿದುಳಿಗೆ, ಹೆಚ್ಚು ಕ್ಯಾಲರಿ ಇರುವ ಆಹಾರ,  ಸಿಹಿ ತಿನಿಸು, ಚಿಪ್ಸ್ ಮತ್ತು ದಾಲ್ಚಿನ್ನಿ ರೋಲ್ ನಂತಹ ಜಂಕ್ ಫುಡ್ ಗಳು ಇಷ್ಟವಾಯಿತು ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.
ಕಡಿಮೆ ನಿದ್ರಿಸುವವರ ಮಿದುಳಿಗೆ ಹೆಚ್ಚೆಚ್ಚು ತಿನ್ನಬೇಕು ಎನಿಸುತ್ತದೆ. ಜೊತೆಗೆ ಜಂಕ್ ಫುಡ್ ತಿನ್ನು ಇಚ್ಚೆಯಾಗುತ್ತದೆ. ಆದರೆ ರಾತ್ರಿಯಲ್ಲಿ ಉತ್ತಮವಾಗಿ ನಿದ್ರಿಸುವವರಿಗೆ ಇಂಥಹ ಸಮಸ್ಯೆ ಇರುವುದಿಲ್ಲ. 
ಕಡಿಮೆ ನಿದ್ರಿಸುವವರು ಹೆಚ್ಚಿನ ಆಹಾರ ತಿನ್ನುತ್ತಾರೆ, ಹೀಗಾಗಿ ಅವರ ದೇಹದ ತೂಕವು ಹೆಚ್ಚುತ್ತದೆ ಎಂದು ಅಧ್ಯಯನ ಹೇಳಿದೆ, ಒಂದು ವೇಳೆ ನೀವು ಪ್ರತಿದಿನ ಹೆಚ್ಚೆಚ್ಚು ಚಾಕೋಲೆಟ್ ತಿನ್ನುತ್ತಿದ್ದರೇ ನೀವು ಹೆಚ್ಚುವರಿ ಸಮಯ ನಿದ್ರೆ ಮಾಡುವ ಅವಶ್ಯಕತೆಯಿದೆ. 
SCROLL FOR NEXT