ಚೆನ್ನೈ: ಇಂದು ಏನೇ ಮಾಹಿತಿ ಬೇಕಾದರೂ ಜನರು ಇಂಟರ್ನೆಟ್ ಮೊರೆ ಹೋಗುತ್ತಾರೆ. ಗೂಗಲ್ ನಲ್ಲಿ ಹುಡುಕಿದರೆ ಸಿಗದೇ ಇರುವ ವಿಷಯಗಳೇ ಇಲ್ಲ ಎನ್ನಬಹುದು. ಹೀಗಿರುವ ಇಂಟರ್ನೆಟ್ ನಿಂದ ಪ್ರಯೋಜನವೂ ಇದೆ, ಪ್ರಭಾವಶಾಲಿ ಮನಸ್ಸುಗಳಿಗೆ ಶೋಷಣೆಯನ್ನು ಕೂಡ ಉಂಟುಮಾಡುತ್ತದೆ ಎಂದು ಅಧ್ಯಯನ ಹೇಳುತ್ತದೆ.
ಇಂದು ಇಂಟರ್ ನೆಟ್ ನಲ್ಲಿ ಆತ್ಮಹತ್ಯೆಗೆ ಪ್ರಚೋದಿಸುವ ತಾಣಗಳು ಅತ್ಯಂತ ಅಪಾಯಕಾರಿಯಾಗಿವೆ. ಕಳೆದ ತಿಂಗಳು 31ರಂದು ಮುಂಬೈಯಲ್ಲಿ 14 ವರ್ಷದ ಬಾಲಕನೊಬ್ಬ ಬ್ಲೂ ವೇಲ್ ಗೇಮ್ ನಲ್ಲಿ ಭಾಗವಹಿಸಿ ಆತ್ಮಹತ್ಯೆ ಮಾಡಿಕೊಂಡ ದುರಂತ ಇನ್ನೂ ಹಚ್ಚಹಸಿರಾಗಿದೆ. ಇಂದು ಅಂತರ್ಜಾಲದಲ್ಲಿ ಆತ್ಮಹತ್ಯೆಗೆ ಪ್ರಚೋದಿಸುವ ತಾಣಗಳು ಇರುತ್ತವೆ. ಡೀಪ್ ವೆಬ್ ನಂತಹ ಕರಾಳ ತಾಣಗಳು ಕಾಣಸಿಗುತ್ತವೆ. ಅವು ಮೇಲ್ನೋಟಕ್ಕೆ ಯಾವುದೇ ಅಪಾಯಕಾರಿ ಎಂದು ಅನಿಸದಿದ್ದರೂ ಕೂಡ ಮನುಷ್ಯನ ಮನಸ್ಸಿನ ಮೇಲೆ ಉಂಟು ಮಾಡುವ ಪರಿಣಾಮ ಮಾತ್ರ ವ್ಯತಿರಿಕ್ತ. ಅಂತಹ ತಾಣಗಳನ್ನು ತೆಗೆದುಹಾಕುವ ಯಾವುದೇ ಯಾಂತ್ರಿಕ ವ್ಯವಸ್ಥೆಯಿಲ್ಲ ಎನ್ನುತ್ತಾರೆ ಸೈಬರ್ ಕಾನೂನು ತಜ್ಞ ಪವನ್ ದುಗ್ಗಲ್.
ಇದು ಇಂದಿನ ವಾಸ್ತವವಾಗಿದ್ದು, ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ. ಸರ್ಕಾರಕ್ಕೆ ಅಂತರ್ಜಾಲದ ನಿಗಾವಹಿಸುವುದು ಕಷ್ಟ. ಆದರೆ ಅಂತರ್ಜಾಲ ಸೇವೆ ಒದಗಿಸುವವರು ಅಥವಾ ಮಧ್ಯವರ್ತಿಗಳ ಮೂಲಕ ಇಂತಹ ಆತ್ಮಹತ್ಯೆ ಪ್ರಚೋದಿತ ವಿಷಯಗಳನ್ನು ತೆಗೆದುಹಾಕಬಹುದು. ಜನಪ್ರಿಯ ಮಾಧ್ಯಮಗಳು ಕೂಡ ಈ ಅವ್ಯವಸ್ಥೆಗೆ ಕಾರಣವಾಗಿದೆ. ಆತ್ಮಹತ್ಯೆಯನ್ನು ವೈಭವೀಕರಿಸುವುದಕ್ಕೆ ಏಕೆ ಟೀಕೆ ಮಾಡಲಾಗುತ್ತದೆ ಎಂಬುದಕ್ಕೆ ನೆಟ್ ಫಿಕ್ಸ್ 13 ಕಾರಣಗಳನ್ನು ತೋರಿಸುತ್ತದೆ. ಚೆನ್ನೈಯಲ್ಲಿ 17 ವರ್ಷದ ಹುಡುಗಿಯೊಬ್ಬಳು ತನ್ನ ಕೈಗಳನ್ನು ಕತ್ತರಿಸಿಕೊಳ್ಳಲು ಆರಂಭಿಸಿದಳು, ನೋವು ಆಕೆಗೆ ವಿಚಿತ್ರ ಖುಷಿ ನೀಡಲು ಆರಂಭಿಸಿತು.
ಅಂತರ್ಜಾಲಕ್ಕೆ ನಿರ್ಬಂಧ ಹೇರಲು ಸಾಧ್ಯವಿಲ್ಲ ಎನ್ನುತ್ತಾರೆ ಮನಃಶಾಸ್ತ್ರಜ್ಞೆ ಸ್ಮೃತಿ ನಾಯರ್. ಮಕ್ಕಳಿಗೆ ಯಾವುದೇ ಮಾನಸಿಕ ಒತ್ತಡ, ಖಾಯಿಲೆಗಳು ಬಂದರೆ ಅವರನ್ನು ತಕ್ಷಣ ಮನಃಶಾಸ್ತ್ರಜ್ಞರ ಬಳಿಗೆ ಕರೆದುಕೊಂಡು ಹೋಗಬೇಕು. ಮಕ್ಕಳ ಮಾನಸಿಕ ರೋಗದ ಬಗ್ಗೆ ನಿರ್ಲಕ್ಷ ವಹಿಸಬಾರದು ಎನ್ನುತ್ತಾರೆ ಆಪ್ತ ಸಮಾಲೋಚಕಿ ಸ್ನೇಹ ಹಿಂದೊಚ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos