ಜೀವನಶೈಲಿ

ಡ್ಯಾನ್ಸ್ ಮತ್ತು ದೈಹಿಕ ಚಟುವಟಿಕೆಯಿಂದ ವಯಸ್ಸಾದರೂ ಉತ್ಸಾಹ ಕಮ್ಮಿಯಾಗದು!

Srinivas Rao BV
ವಾಷಿಂಗ್ ಟನ್ ಡಿಸಿ: ಡ್ಯಾನ್ಸ್ ಹಾಗೂ ದೈಹಿಕ ಚಟುವಟಿಕೆಯಿಂದ ವಯಸ್ಸಾದವರಲ್ಲಿ ಉತ್ಸಾಹವನ್ನು ಹೆಚ್ಚಿಸಬಹುದು ಎಂದು ಪ್ರಮುಖವಾಗಿ ನೃತ್ಯದಿಂದ ಉತ್ಸಾಹವನ್ನು ಇಮ್ಮಡಿಗೊಳಿಸಬಹುದು ಎಂದು  ಹೊಸ ಅಧ್ಯಯನ ವರದಿಯೊಂದು ಹೇಳಿದೆ. 
ವಯಸ್ಸು ಹೆಚ್ಚಾದಂತೆ ಮಾನಸಿಕ ಹಾಗೂ ದೈಹಿಕ ಫಿಟ್ ನೆಸ್ ಕಡಿಮೆಯಾಗುತ್ತದೆ ಅಷ್ಟೇ ಅಲ್ಲದೇ ಆಲ್ಝೈಮರ್ ನಂತಹ ಸಮಸ್ಯೆಗಳೂ ಎದುರಾಗುತ್ತದೆ. ಇಂತಹ ಸಮಸ್ಯೆಗಳನ್ನು ತಡೆಗಟ್ಟಲು ಡ್ಯಾನ್ಸ್ ಹಾಗೂ ದೈಹಿಕ ಚಟುವಟಿಕೆಯಿಂದ ತಡೆಗಟ್ಟಬಹುದು ಎಂದು ಅಧ್ಯಯನ ವರದಿಯನ್ನು ಪ್ರಕಟಿಸಿರುವ ಜರ್ಮನಿಯ ಮ್ಯಾಗ್ಡೆಬರ್ಗ್ ನ್ಯೂರೋ ಡಿಜೆನೆರೆಟಿವ್ ಡಿಸೀಸಸ್ ಗಾಗಿ ಇರುವ ಕೇಂದ್ರದ ಡಾ. ಕ್ಯಾಥರಿನ್ ರೆಹ್ಫೆಲ್ಡ್ ಹೇಳಿದ್ದಾರೆ. 
68 ವರ್ಷದ ವೃದ್ಧರನ್ನು ಅಧ್ಯಯನ ವರದಿಯಲ್ಲಿ ಸಮೀಕ್ಷೆಗೊಳಪಡಿಸಲಾಗಿದ್ದು, ದೈಹಿಕ ಚಟುವಟಿಕೆ ಹಾಗೂ ಡ್ಯಾನ್ಸ್ ನಂತಹ ಚಟುವಟಿಕೆಯಲ್ಲಿ ತೊಡಗಿಸಲಾಗಿದೆ. ಮತ್ತೊಂದು ಗುಂಪಿನ ವೃದ್ಧರನ್ನು ನೃತ್ಯದಲ್ಲಿ ಮಾತ್ರ ತೊಡಗಿಸಲಾಗಿದೆ. ಎರಡೂ ಗುಂಪಿನ ವೃದ್ಧರಿಗೆ ದೈಹಿಕ ಚಟುವಟಿಕೆಯಿಂದ ಮಾನಸಿಕ, ದೈಹಿಕ ಆರೋಗ್ಯ ಸುಧಾರಿಸಿದ್ದು, ನೃತ್ಯದಲ್ಲಿ ತೊಡಗಿದ್ದವರಿಗೆ ಹೆಚ್ಚಿನ ಸುಧಾರಣೆ ಕಂಡುಬಂದಿದೆ ಎಂದು ಜರ್ಮನಿಯ ಮ್ಯಾಗ್ಡೆಬರ್ಗ್ ಕೇಂದ್ರ ಹೇಳಿದೆ. ಹ್ಯೂಮನ್ ನ್ಯೂರೋಸೈನ್ಸ್ ನ ಜರ್ನಲ್ ನಲ್ಲಿ ಇದಕ್ಕೆ ಸಂಬಂಧಿಸಿದ ಅಧ್ಯಯನ ವರದಿ ಪ್ರಕಟವಾಗಿದೆ. 
SCROLL FOR NEXT