ಸ್ನಾನ 
ಜೀವನಶೈಲಿ

ಪದೇಪದೇ ಸ್ನಾನ ಮಾಡುವುದರಿಂದ ದೇಹದಲ್ಲಿನ ಪ್ರತಿರೋಧಕ ಶಕ್ತಿ ಕುಗ್ಗುತ್ತದೆ!

ದಿನಂ ಪ್ರತಿ ಸ್ನಾನ ಮಾಡುವುದರಿಂದ ದೇಹ ಮತ್ತು ಮನಸ್ಸು ಚೈತನ್ಯತೆಯಿಂದ ಕೂಡಿರುತ್ತದೆ ಎಂಬುದೇನೋ ನಿಜ. ಆದರೆ ಅತಿಯಾಗಿ ಸ್ನಾನ ಮಾಡಿದರೆ...

ಲಂಡನ್: ದಿನಂ ಪ್ರತಿ ಸ್ನಾನ ಮಾಡುವುದರಿಂದ ದೇಹ ಮತ್ತು ಮನಸ್ಸು ಚೈತನ್ಯತೆಯಿಂದ ಕೂಡಿರುತ್ತದೆ ಎಂಬುದೇನೋ ನಿಜ. ಆದರೆ ಪದೇಪದೇ ಸ್ನಾನ ಮಾಡಿದರೆ ಅನಾರೋಗ್ಯಕ್ಕೀಡಾಗುತ್ತೀರ ಎಂಬ ಅಂಶವನ್ನು ಉಟಾ ಯೂನಿವರ್ಸಿಟಿಯ ಸಂಶೋಧಕರು ತಿಳಿಸಿದ್ದಾರೆ. 
ಕೆಲ ದಿನ ಸ್ನಾ ಮಾಡದಿದ್ದರೆ ಅಬ್ಬಬ್ಬಾ ಅಂದರೆ ಮೈ ವಾಸನೆ ಬರಬಹುದು. ಆದರೆ ಅತಿಯಾದ ಸ್ನಾನ ಮಾಡಿದರೆ ಅನೇಕ ಆರೋಗ್ಯ ತೊಂದರೆಗಳಿಗೆ ಸಿಲುಕಬೇಕಾಗುತ್ತದೆ ಎಂದು ಜೆನೆಟಿಕ್ ಸೈನ್ಸ್ ಸೆಂಟರ್ ವಿಶ್ವವಿದ್ಯಾಲಯದ ಸಂಶೋಧಕರು ಎಚ್ಚರಿಸಿದ್ದಾರೆ. 
ನಮ್ಮ ದೇಹದಲ್ಲಿರುವ ಬ್ಯಾಕ್ಟೀರಿಯಾ, ವೈರಸ್ ಮತ್ತಿತರ ಮೈಕ್ರೋಬ್(ಜೀವಾಣು)ಗಳು ದೇಹ ವಿವಿಧ ಪ್ರಕ್ರಿಯೆಗಳಿಗೆ ಪೂರಕವಾಗಿ ಕೆಲಸ ಮಾಡುತ್ತವೆ. ಅನಾರೋಗ್ಯವನ್ನು ತಡೆಗಟ್ಟುವ ಶಕ್ತಿ ಈ ಸೂಕ್ಷ್ಮಜೀವಿಗಳಿಗಿರುತ್ತವೆ. ನಾವು ಹೆಚ್ಚೆಚ್ಚು ಸ್ನಾನ ಮಾಡಿದರೆ ಈ ಜೀವಾಣುಗಳ ವ್ಯವಸ್ಥೆ ಏರುಪೇರಾಗುತ್ತದೆ. ಇದರಿಂದ ನಮ್ಮ ದೇಹದ ರೋಗನಿರೋಧಕ ವ್ಯವಸ್ಥೆ, ಜೀರ್ಣಕ್ರಿಯೆಗೆ ತೊಂದರೆಯಾಗಬಹುದು. ಹೃದಯದ ತೊಂದರೆಗೂ ಎಡೆ ಮಾಡಿಕೊಡಬಹುದು ಎಂದು ಸಂಶೋಧಕರು ಹೇಳುತ್ತಾರೆ. 
ಸಂಶೋಧಕರು ತಮ್ಮ ಸಂಶೋಧನೆಗಾಗಿ ಅಮೆಜಾನ್ ನ ಯಾನೋಮಾಮಿ ಜನರ ಮೇಲೆ ಅಧ್ಯಯನ ನಡೆಸಿದ್ದರು. ದಕ್ಷಿಣ ಅಮೆರಿಕದ ಅಮೆಜಾನ್ ವ್ಯಾಪ್ತಿಯಲ್ಲಿರುವ ಯಾನೋಮಾಮಿ ಎಂಬ ಗ್ರಾಮದ ಜನರು ತೀರಾ ಅಪರೂಪಕ್ಕೆ ಸ್ನಾನ ಮಾಡುತ್ತಾರೆ. ಬಹಳ ಸಮೃದ್ಧ ಸೂಕ್ಷ್ಮಜೀವಿಗಳ ಆವಾಸಸ್ಥಾನವಾಗಿತ್ತು ಅವರ ದೇಹ. ಅಷ್ಟೇ ಅಲ್ಲ, ಅವರ ದೈಹಿಕ ಆರೋಗ್ಯ ಕೂಡ ಅತ್ಯುತ್ತಮವಾಗಿತ್ತು ಎಂಬುದನ್ನು ಪತ್ತೆಹಚ್ಚಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel