ಸಾಂದರ್ಭಿಕ ಚಿತ್ರ 
ಜೀವನಶೈಲಿ

ಪ್ರತಿಯೊಬ್ಬ ವ್ಯಕ್ತಿಯ ಬಳಿ ಒಂದು ಸಲಕ್ಕೆ 13 ರಹಸ್ಯಗಳು ಇರುತ್ತವೆ!

ಗುಟ್ಟು ಬಚ್ಚಿಟ್ಟುಕೊಳ್ಳದ ವ್ಯಕ್ತಿ ಯಾರಿರುತ್ತಾರೆ ಹೇಳಿ? ಆಯಾ ಕಾಲ, ಸಂದರ್ಭದಲ್ಲಿ ಪ್ರತಿಯೊಬ್ಬರೂ ಗುಟ್ಟು...

ಗುಟ್ಟು ಬಚ್ಚಿಟ್ಟುಕೊಳ್ಳದ ವ್ಯಕ್ತಿ ಯಾರಿರುತ್ತಾರೆ ಹೇಳಿ? ಆಯಾ ಕಾಲ, ಸಂದರ್ಭದಲ್ಲಿ ಪ್ರತಿಯೊಬ್ಬರೂ ಗುಟ್ಟು ಇಟ್ಟುಕೊಂಡಿರುತ್ತಾರೆ. ತಮ್ಮ ಪರಮಾಪ್ತರಲ್ಲಿ ಕೂಡ ಕೆಲವೊಂದನ್ನು ಹಂಚಿಕೊಳ್ಳುತ್ತಾರಷ್ಟೆ.
ಈ ರಹಸ್ಯದ ಬಗ್ಗೆ ಅಧ್ಯಯನ ನಡೆಸಿದ ಮನಃ ಶಾಸ್ತ್ರಜ್ಞರು ಒಬ್ಬ ಮನುಷ್ಯನಲ್ಲಿ ಒಂದು ಸಲಕ್ಕೆ 13 ರಹಸ್ಯಗಳು ಅಡಗಿರುತ್ತವಂತೆ. ಅವುಗಳಲ್ಲಿ ಐದು ಗುಟ್ಟುಗಳನ್ನು ಬೇರೊಬ್ಬ ವ್ಯಕ್ತಿಗೆ ಯಾವತ್ತೂ ಹೇಳುವುದಿಲ್ಲವಂತೆ. 
ಅಮೆರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯದ ಸಂಶೋಧಕರು 10 ವಿಭಿನ್ನ ಅಧ್ಯಯನಗಳ ಮೂಲಕ 13,000 ರಹಸ್ಯಗಳನ್ನು ಸಂಶೋಧನೆ ಮಾಡಿದ್ದಾರೆ. 38 ಅತ್ಯಂತ ಸಾಮಾನ್ಯ ವಿಭಾಗಗಳ ರಹಸ್ಯಹಗಳಾಗಿವೆ.
ಆರ್ಥಿಕ ರಹಸ್ಯಗಳಿಂದ ಹಿಡಿದು ದಾಂಪತ್ಯ ದ್ರೋಹದವರೆಗೆ ಅಧ್ಯಯನಕ್ಕೊಳಗಾದವರು ಯಾವೆಲ್ಲಾ ರಹಸ್ಯಗಳನ್ನು ಬಿಟ್ಟುಕೊಡುವುದೇ ಇಲ್ಲ ಎಂದು ನೋಡಲಾಯಿತು.
ಪರ್ಸನಾಲಿಟಿ ಅಂಡ್ ಸೋಷಿಯಲ್ ಸೈಕಾಲಜಿಯಲ್ಲಿ ಈ ಅಧ್ಯಯನ ಪ್ರಕಟಗೊಂಡಿದ್ದು ಒಂದು ಸಲಕ್ಕೆ ವ್ಯಕ್ತಿಯೊಬ್ಬ 13 ರಹಸ್ಯಗಳನ್ನು ಇಟ್ಟುಕೊಂಡಿರುತ್ತಾನೆ ಅವುಗಳಲ್ಲಿ ಐದು ರಹಸ್ಯಗಳನ್ನು ಯಾರ ಜೊತೆಯೂ ಯಾರೊಟ್ಟಿಗೂ ಹಂಚಿಕೊಂಡಿರುವುದಿಲ್ಲ.
ಸಾಮಾನ್ಯವಾಗಿ ಯಾರೊಟ್ಟಿಗೂ ಹಂಚಿಕೊಳ್ಳದಿರುವ ರಹಸ್ಯಗಳೆಂದರೆ ಅನೈತಿಕ ರೋಮ್ಯಾಂಟಿಕ್ ಬಯಕೆ, ಲೈಂಗಿಕ ನಡವಳಿಕೆ ಮತ್ತು ಸುಳ್ಳುಗಳನ್ನು ಯಾವತ್ತೂ ಯಾರೊಟ್ಟಿಗೂ ಹಂಚಿಕೊಂಡಿರುವುದಿಲ್ಲ ಎಂದು ಅಟ್ಲಾಂಟಿಕ್ ವರದಿ ಮಾಡಿದೆ.
ರಹಸ್ಯಗಳನ್ನು ರಹಸ್ಯವಾಗಿಟ್ಟುಕೊಳ್ಳುವುದು ಮೂಲಭೂತವಾಗಿ ಒಂದು ಏಕಾಂಗಿ ಅನುಭವ. ಜನರು ತಮ್ಮ  ರಹಸ್ಯಗಳ ಬಗ್ಗೆ ಯೋಚನೆ ಮಾಡಿದಾಗ ಶಾರೀರಿಕ ಹೊರೆಯಾದಂತೆ ಭಾವಿಸುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT