ಜೀವನಶೈಲಿ

ಇಂಟರ್‏ನೆಟ್ ಸಂಪರ್ಕ ಕಟ್ ಮಾಡಿದ್ರೂ ಕೆಲವರಿಗೆ ಹೃದಯ ಬಡಿತ, ಬಿಪಿ ಹೆಚ್ಚಾಗಬಹುದು!

Sumana Upadhyaya
ಲಂಡನ್: ಡ್ರಗ್ ಸೇವಿಸುವ ವ್ಯಸನ ಇರುವವರ ಬಳಿಯಿಂದ ಡ್ರಗ್ ಕಿತ್ತುಕೊಂಡರೆ ಹೇಗೆ ಅವರಿಗೆ ಸಿಟ್ಟು, ಬೇಸರವಾಗುತ್ತದೆಯೋ ಅದೇ ರೀತಿ ಇಂಟರ್ ನೆಟ್ ಬಳಸುವವರ ಬಳಿಯಿಂದ ಅದನ್ನು ಕಿತ್ತುಕೊಂಡರೆ ಮಾನಸಿಕ ಬದಲಾವಣೆಗಳುಂಟಾಗುತ್ತವೆ. ಹೃದಯ ಬಡಿತ, ಬಿಪಿ ಜಾಸ್ತಿಯಾಗುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.
ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಾಗಿ ಡಿಜಿಟಲ್ ಸಾಧನಗಳ ವ್ಯಸನಿಗಳಾಗುತ್ತಿದ್ದಾರೆ. ಅದನ್ನು ಬಳಸದಂತೆ ತಡೆದರೆ ಅವರಲ್ಲಿ ಮಾನಸಿಕ ಅಸಮತೋಲನ, ಕಾತರ, ಉದ್ವೇಗಗಳುಂಟಾಗುತ್ತದೆ ಎಂದು ಬ್ರಿಟನ್ ನ ಸ್ವನ್ಸಿ ವಿಶ್ವ ವಿದ್ಯಾಲಯ ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.
ಅಧ್ಯಯನದಲ್ಲಿ 18ರಿಂದ 33 ವರ್ಷದೊಳಗಿನ 144 ಮಂದಿ ಭಾಗವಹಿಸಿದ್ದರು. ಇಂಟರ್ ನೆಟ್ ಬಳಕೆಗೆ ಮುನ್ನ ಮತ್ತು ನಂತರ ಅವರ ಹೃದಯ ಬಡಿತ ಮತ್ತು ಬಿಪಿಯನ್ನು ಪರೀಕ್ಷಿಸಲಾಯಿತು. ಅವರ ಕಾತರತೆ ಮತ್ತು ಇಂಟರ್ ನೆಟ್ ಬಳಕೆಯ ವ್ಯಸನದ ಸ್ವ ವರದಿಯನ್ನು ಪರೀಕ್ಷೆ ಮಾಡಲಾಯಿತು.
ಇಂಟರ್ನೆಟ್ ನ್ನು  ಅಧ್ಯಯನಕ್ಕೊಳಗಾದವರ ಬಳಿಯಿಂದ ಕಿತ್ತೊಗೆದ ನಂತರ ಶಾರೀರಿಕ ಪ್ರಚೋದನೆ ಉಂಟಾಗಿದೆ. ಶೇಕಡಾ 3ರಿಂದ 4 ರಷ್ಟು ಹೃದಯ ಬಡಿತ ಸರಾಸರಿ ಜಾಸ್ತಿಯಾಗಿದ್ದು ಇನ್ನೂ ಕೆಲವರಲ್ಲಿ ಅದಕ್ಕಿಂತ ಹೆಚ್ಚಾಗಿದೆ ಎಂದು ಪ್ಲೊಸ್ ವನ್ ಎಂಬ ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿ ತಿಳಿಸಿದೆ.
ಈ ಬದಲಾವಣೆ ಜೀವಕ್ಕೆ ಅಪಾಯಕಾರಿಯಾಗದಿದ್ದರೂ ಕೂಡ ಇದರಿಂದ ಕಾತರ, ಹಾರ್ಮೊನ್ ನಲ್ಲಿ ಏರುಪೇರುಗಳುಂಟಾಗುತ್ತವೆ. 
ಇಂತಹ ಬದಲಾವಣೆ ಆಲ್ಕೋಹಾಲ್, ಮಾದಕ ವಸ್ತು ಸೇವಿಸುವವರಲ್ಲಿ ಜಾಸ್ತಿಯಾಗಿರುತ್ತದೆ. 
SCROLL FOR NEXT