ಸಾಂದರ್ಭಿಕ ಚಿತ್ರ 
ಜೀವನಶೈಲಿ

ಮನೆ ಅಡುಗೆ ಸೇವನೆ, ಆಹಾರ ಸೇವಿಸುವಾಗ ಟಿವಿ ವೀಕ್ಷಿಸದವರಲ್ಲಿ ಬೊಜ್ಜು ಸಮಸ್ಯೆ ಕಡಿಮೆ

ಮನೆಯಲ್ಲಿಯೇ ಅಡುಗೆ ಮಾಡಿ ತಿಂದರೆ ಮತ್ತು ಊಟ, ತಿಂಡಿ ಮಾಡುವಾಗ ಟಿವಿ, ವಿಡಿಯೋಗಳನ್ನು...

ವಾಷಿಂಗ್ಟನ್: ಮನೆಯಲ್ಲಿಯೇ ಅಡುಗೆ ಮಾಡಿ ತಿಂದರೆ ಮತ್ತು ಊಟ, ತಿಂಡಿ ಮಾಡುವಾಗ ಟಿವಿ, ವಿಡಿಯೋಗಳನ್ನು ವೀಕ್ಷಿಸದವರಲ್ಲಿ ಬೊಜ್ಜು ಕಾಣಿಸಿಕೊಳ್ಳುವುದು ಕಡಿಮೆ ಎನ್ನುತ್ತದೆ ಅಧ್ಯಯನವೊಂದು. ಅಮೆರಿಕಾದ ಒಹಿಯೊ ಸ್ಟೇಟ್ ಯೂನಿವರ್ಸಿಟಿಯ ಸಂಶೋಧಕರು 12,842 ಮಂದಿ ಮೇಲೆ ಅಧ್ಯಯನ ನಡೆಸಿದ್ದರು. ಅಧ್ಯಯನಕ್ಕೊಳಪಟ್ಟವರು ತಮ್ಮ ಸಂದರ್ಶನಕ್ಕೆ ಮುನ್ನ ವಾರಕ್ಕೊಮ್ಮೆಯಾದರೂ ಕುಟುಂಬದವರ ಜೊತೆ ಸೇರಿ ಊಟ ಮಾಡುತ್ತಿದ್ದರು.
ಸ್ಥೂಲಕಾಯ 30 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಲ್ಲಿ ಕಾಣುವ ಭೌತಿಕ ದ್ರವ್ಯರಾಶಿ ಸೂಚಿ(body mass index).ಇದನ್ನು ವ್ಯಕ್ತಿಯ ಎತ್ತರದ ಆಧಾರದ ಮೇಲೆ ತೂಕವನ್ನು ಅಳೆಯಲಾಗುತ್ತದೆ. ಅಧ್ಯಯನಕ್ಕೊಳಪಟ್ಟ ವಯಸ್ಕರಲ್ಲಿ, ಕುಟುಂಬದವರ ಜೊತೆ ಸೇರಿ ಊಟ ಮಾಡುವಾಗ ಟಿವಿ, ವಿಡಿಯೋ ವೀಕ್ಷಣೆ ಮಾಡದೆ ಆಹಾರದ ಮೇಲೆ ಗಮನ ನೀಡಿ, ಅಕ್ಕಪಕ್ಕದವರ ಜೊತೆ ಮಾತನಾಡುತ್ತಾ ತಿಂದರೆ ಸ್ಥೂಲಕಾಯ ಸಮಸ್ಯೆ ಕಡಿಮೆ ಕಾಣಿಸಿಕೊಳ್ಳುತ್ತದೆ.   
ಅಲ್ಲದೆ ಹೊರಗಿನ ಆಹಾರವನ್ನು ಆದಷ್ಟು ಕಡಿಮೆ ಮಾಡಿ ಮನೆಯಲ್ಲಿ ತಯಾರಿಸಿದ ಆಹಾರ ತಿಂದರೆ ಕೂಡ ಬೊಜ್ಜು ಉಂಟಾಗುವ ಸಾಧ್ಯತೆ ಕಡಿಮೆ. ಕುಟುಂಬದವರ ಜೊತೆ ಎಷ್ಟು ಸಲ ತಿನ್ನುತ್ತೀರಿ ಎಂಬುದು ಮುಖ್ಯವಾಗುವುದಿಲ್ಲ ಬದಲಿಗೆ ಆಹಾರ ತಿನ್ನುವಾಗ ಎಷ್ಟು ತಿನ್ನುತ್ತೀರಿ, ಏನು ತಿನ್ನುತ್ತೀರಿ ಎನ್ನುವುದು ಕೂಡ ಮುಖ್ಯವಾಗುತ್ತದೆ ಎಂದು ಒಹಿಯೊ ರಾಜ್ಯ ವಿಶ್ವವಿದ್ಯಾಲಯದ ರಚೆಲ್ ಟುಮಿನ್ ಹೇಳುತ್ತಾರೆ.
ಹೆಚ್ಚಾಗಿ ಹೊರಗಿನ ಹೊಟೇಲ್ ಆಹಾರ ತಿನ್ನುವವರಲ್ಲಿ ಸ್ಥೂಲಕಾಯದ ಸಮಸ್ಯೆ ಅಧಿಕವಾಗಿ ಕಂಡುಬರುತ್ತದೆ. ಮನುಷ್ಯನ ಜೀವನಶೈಲಿಯೂ ಕಾರಣವಾಗುತ್ತದೆ ಎಂದು ಒಹಿಯೊ ರಾಜ್ಯ ವಿಶ್ವವಿದ್ಯಾಲಯದ ಸರಹ್ ಆಂಡೆರ್ಸನ್ ಹೇಳುತ್ತಾರೆ. ಅಕಾಡೆಮಿ ಆಫ್ ನ್ಯೂಟ್ರಿಶನ್ ಅಂಡ್ ಡಯಟೆಟಿಕ್ಸ್ ಪತ್ರಿಕೆಯಲ್ಲಿ ಅಧ್ಯಯನ ಪ್ರಕಟವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಜೂನ್ 30ರೊಳಗೆ ಮುಗಿಸಿ: ರಾಜ್ಯ ಸರ್ಕಾರಕ್ಕೆ 'ಸುಪ್ರೀಂ' ಗಡುವು

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

ಟಿ20 ವಿಶ್ವಕಪ್: 'ಅಲ್ಲಿ ಬೇಡ ಅಂದ್ರೆ ಇಲ್ಲಿ ಆಡಿ..': ಬಾಂಗ್ಲಾದೇಶಕ್ಕೆ ಹೊಸ ಮೈದಾನಗಳ ಸೂಚಿಸಿದ ICC

ಕ್ರಿಕೆಟ್ ಇತಿಹಾಸದಲ್ಲೇ ಮೊದಲು: ಅಂತಾರಾಷ್ಟ್ರೀಯ ಕ್ರಿಕೆಟ್ ಲೀಗ್ ನಲ್ಲಿ ಜೊತೆಯಾಗಿ ಕಣಕ್ಕಿಳಿದ ಅಪ್ಪ-ಮಗ.. ಯಾರಿವರು?

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

SCROLL FOR NEXT