ಜೀವನಶೈಲಿ

ಪ್ರತಿ ದಿನ 10 ನಿಮಿಷದ ಧ್ಯಾನದಿಂದ ಉತ್ತಮ ಏಕಾಗ್ರತೆ ಸಾಧ್ಯ

Srinivas Rao BV
ಏಕಾಗ್ರತೆಯ ಕೊರತೆಯೇ? ಹಾಗಾದರೆ ಪ್ರತಿದಿನ 10 ನಿಮಿಷಗಳ ಕಾಲ ಧ್ಯಾನ ಮಾಡಿ, ಹೀಗೆ ಮಾಡುವುದರಿಂದ ಮನಸ್ಸಿನ ಚಂಚಲತೆ ಹಾಗೂ ಪದೇ ಪದೇ ಎದುರಾಗುವ ಆಲೋಚನೆಗಳನ್ನು ತಡೆಗಟ್ಟಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. 
ಧ್ಯಾನ ಮಾಡುವುದರಿಂದ, ಒಂದೇ ಉದ್ದೇಶಕ್ಕಾಗಿ ಗಮನ ಹರಿಸುವುದು ಸುಲಭವಾಗಲಿದ್ದು, ಗುರಿಯನ್ನು ತಲುಪಿ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯವಾಗಲಿದೆ ಎಂಬ ಅಂಶವನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಧ್ಯಾನ ತರಬೇತಿಯಿಂದ ಚಂಚಲ ಮನಸ್ಸಿನ ಮೇಲೆ ಪರಿಣಾಮ ಬೀರಿ ಚಂಚಲತೆಯನ್ನು ನಿಯಂತ್ರಣ ಮಾಡಲು ಸಾಧ್ಯವಿದೆ ಎಂಬುದನ್ನು ನಮ್ಮ ಸಂಶೋಧನೆಯ ಫಲಿತಾಂಶಗಳು ತೋರಿಸುತ್ತಿವೆ ಎಂದು ಕೆನಡಾದ ವಾಟರ್ಲೂ ವಿಶ್ವವಿದ್ಯಾನಿಲಯದ ಸಂಶೋಧಕ, ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ. 
ಧ್ಯಾನ ಮಾಡುವುದರಿಂದ ಆ ಕ್ಷಣದ ಸಮಸ್ಯೆಗಳಿಂದ ಮನಸ್ಸಿಗೆ ಉಂಟಾಗುತ್ತಿರುವ ಚಿಂತೆಗಳನ್ನೂ ಸಹ ದೂರ ಮಾಡಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದು, ಈ ಕುರಿತ ವರದಿ ಪ್ರಜ್ಞೆ ಮತ್ತು ಸಂವೇದನೆಗೆ ಸಂಬಂಧಿಸಿದ ಜರ್ನಲ್ ನಲ್ಲಿ ಪ್ರಕಟವಾಗಿದೆ. 
SCROLL FOR NEXT