ಜೀವನಶೈಲಿ

ಸಾಮಾಜಿಕ ಮಾಧ್ಯಮದಿಂದ ಯುವ ಪೀಳಿಗೆಯ ಮೇಲೆ ದುಷ್ಪರಿಣಾಮ; ಮೊದಲ ಸ್ಥಾನದಲ್ಲಿ ಇನ್ಸ್ಟಾಗ್ರಾಮ್!

Srinivas Rao BV
ಲಂಡನ್: ಯುವಕರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ವಿಷಯದಲ್ಲಿ ಇನ್ಸ್ಟಾಗ್ರಾಮ್ ಮೊದಲ ಸ್ಥಾನದಲ್ಲಿದೆ. 
ಬ್ರಿಟನ್ ನ ರಾಯಲ್ ಸೊಸೈಟಿ ಫಾರ್ ಪಬ್ಲಿಕ್ ಹೆಲ್ತ್ ನಡೆಸಿರುವ ಸಮೀಕ್ಷೆಯಲ್ಲಿ 14-24 ವಯಸ್ಸಿನ 1,479 ಯುವಜನತೆ ಪಾಲ್ಗೊಂಡಿದ್ದು, ಯೂಟ್ಯೂಬ್, ಇನ್ಸ್ಟಾ ಗ್ರಾಮ್, ಸ್ನ್ಯಾಪ್ ಚಾಟ್, ಫೆಸ್ ಬುಕ್ ಹಾಗೂ ಟ್ವಿಟರ್ ನಂತಹ ಸಾಮಾಜಿಕ ಮಾಧ್ಯಮಗಳು ಯುವಪೀಳಿಗೆಯ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 
ಸಮೀಕ್ಷೆಯಲ್ಲಿ ಭಾಗವಹಿಸಿದ್ದವ ಮಾನಸಿಕ ಆರೋಗ್ಯ ಹಾಗೂ ನಡಾವಳಿಕೆಗೆ ಸಂಬಂಧಿಸಿದಂತೆ  14 ರೀತಿಯ ಪ್ರಶ್ನೆಗಳಿಗೆ ಉತ್ತರಿಸಿದ್ದು, ಅತ್ಯಂತ ಸಕಾರಾತ್ಮಕ ಪರಿಣಾಮ ಬೀರುವ ಪಟ್ಟಿಯಲ್ಲಿ ಯೂಟ್ಯೂಬ್ ಮೊದಲ ಸ್ಥಾನದಲ್ಲಿದ್ದರೆ ಫೇಸ್ ಬುಕ್, ಟ್ವಿಟರ್ ನಂತರದ ಸ್ಥಾನಗಳಲ್ಲಿವೆ ಎಂದು ಬಿಬಿಸಿ ವರದಿ ಪ್ರಕಟಿಸಿದೆ. 
ಸಕಾರಾತ್ಮಕ ಪರಿಣಾಮ ಬೀರುವ ಪಟ್ಟಿಯಲ್ಲಿ ಸ್ನ್ಯಾಪ್ ಚಾಟ್ ಹಾಗೂ ಇನ್ಸ್ಟಾ ಗ್ರಾಮ್ ಗೆ ಅತ್ಯಂತ ಕಡಿಮೆ ಅಂಕ ನೀಡಲಾಗಿದ್ದು, ಯುವಕರ ಮಾನಸಿಕ ಆರೋಗ್ಯದ ಮೇಲೆ ಸಾಮಾಜಿಕ ಜಾಲತಾಣಗಳು ಪರಿಣಾಮ ಬೀರುತ್ತಿವೆ ಎಂದು ಸಂಶೋಧನೆಯ ವರದಿ ಎಚ್ಚರಿಸಿದೆ. ಉಳಿದ ವಯಸ್ಸಿನ ಗುಂಪಿನ ಜನರಿಗಿಂತ ಶೇ.90 ರಷ್ಟು ಯುವಜನತೆ ಸಾಮಾಜಿಕ ಜಾಲತಾಣಗಳನ್ನು ಹೆಚ್ಚು ಬಳಕೆ ಮಾಡುತ್ತಿದ್ದಾರೆ. 
SCROLL FOR NEXT