ಸಾಂದರ್ಭಿಕ ಚಿತ್ರ 
ಜೀವನಶೈಲಿ

ಬೆಳಗಿನ ತಿಂಡಿ ಬಿಟ್ಟುಬಿಡಿ, ತೂಕ ಇಳಿಸಿಕೊಳ್ಳಿ: ಅಧ್ಯಯನ

ನಿಮ್ಮ ದೇಹ ತೂಕವನ್ನು ಬೇಗನೆ ಇಳಿಸಬೇಕೆಂದಿದ್ದರೆ ಬೆಳಗಿನ ಉಪಹಾರವನ್ನು ಬಿಟ್ಟುಬಿಡಿ. ಮಧ್ಯಾಹ್ನ....

ವಾಷಿಂಗ್ಟನ್: ನಿಮ್ಮ ದೇಹ ತೂಕವನ್ನು ಬೇಗನೆ ಇಳಿಸಬೇಕೆಂದಿದ್ದರೆ ಬೆಳಗಿನ ಉಪಹಾರವನ್ನು ಬಿಟ್ಟುಬಿಡಿ. ಮಧ್ಯಾಹ್ನ ಊಟದವರೆಗೆ ಏನೂ ತಿನ್ನದೆ ಉಪವಾಸವಿದ್ದರೆ ಪ್ರತಿನಿತ್ಯ ಸುಮಾರು 353 ರಷ್ಟು ಕಡಿಮೆ ಕ್ಯಾಲೊರಿ ಆಹಾರ ಸೇವಿಸಬಹುದು ಮತ್ತು ಇದರಿಂದ ದೇಹದ ತೂಕವನ್ನು ಇಳಿಸಬಹುದು ಎಂದು ಅಧ್ಯಯನವೊಂದು ಹೇಳುತ್ತದೆ.
ನಾವು ಸೇವಿಸುವ ಆಹಾರದಲ್ಲಿ ಬೆಳಗಿನ ಉಪಹಾರ ಅತ್ಯಂತ ಪ್ರಮುಖ ಎಂಬ ಸಾಮಾನ್ಯ ನಂಬಿಕೆ ನಮ್ಮಲ್ಲಿದೆ. ಆದರೆ ಇಂದಿನ ಜೀವನಕ್ರಮದಲ್ಲಿ ಹಲವು ದೇಶಗಳಲ್ಲಿ ಮೂರರಲ್ಲಿ ಒಬ್ಬರು ಮಕ್ಕಳು ಮತ್ತು ವಯಸ್ಕರು ಬೆಳಗಿನ ಉಪಹಾರ ಸೇವಿಸುವುದಿಲ್ಲ ಎನ್ನುತ್ತಾರೆ ಅಧ್ಯಯನದ ಲೇಖಕ ಡಾ.ಕೀತ್ ಟೋಲ್ಫ್ರೆ.
ಉಪವಾಸ ಮಾಡುವ ಮೂಲಕ ದೇಹದ ತೂಕವನ್ನು ಇಳಿಸುವುದರಿಂದ ಕ್ಯಾಲೊರಿಗಳನ್ನು ಕಡಿಮೆ ಮಾಡಬಹುದು. ಇದರಿಂದ ಕಾಲ ಕ್ರಮೇಣ ವ್ಯಕ್ತಿಯು ಸೇವಿಸುವ ಆಹಾರದ ಕ್ಯಾಲೊರಿ ಪ್ರಮಾಣ ಕಡಿಮೆಯಾಗುತ್ತದೆಯಲ್ಲದೆ ಕೊಬ್ಬಿನ ಶೇಖರಣೆಯಲ್ಲಿ ತೊಡಗಿಸಿಕೊಂಡಿರುವ ಹಾರ್ಮೋನುಗಳನ್ನು ನಿಯಂತ್ರಿಸುತ್ತದೆ ಎಂದು ಅಮೆರಿಕಾದ ಲೌಬರೋ ಮತ್ತು ಬೆಡ್ಫೋರ್ಡ್ಶೈರ್ ವಿಶ್ವವಿದ್ಯಾಲಯಗಳು ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.
ಅಧ್ಯಯನ ತಂಡ 11ರಿಂದ 15 ವರ್ಷದೊಳಗಿನ 40 ಹೆಣ್ಣು ಮಕ್ಕಳ ಮೇಲೆ ಅಧ್ಯಯನ ನಡೆಸಿದೆ. ಅಧ್ಯಯನದಲ್ಲಿ ಭಾಗಿಯಾದವರು ಮೂರು ದಿನಗಳವರೆಗೆ ಬೆಳಗಿನ ಉಪಹಾರ ಸೇವಿಸಿರಲಿಲ್ಲ. ಹಗುರವಾಗಿ ಹಾಲು, ಜ್ಯೂಸ್ ಇತ್ಯಾದಿಗಳನ್ನು ಮಾತ್ರ ಸೇವಿಸಿದ್ದರು. ಆದರೆ ಅವರ ದೈಹಿಕ ಚಟುವಟಿಕೆಗಳಲ್ಲಿ ಯಾವುದೇ ಕುಂಠಿತವಾಗಿರಲಿಲ್ಲ. ಅಲ್ಲದೆ ಬೆಳಗಿನ ಉಪಹಾರವನ್ನು ಬಿಡುವುದರಿಂದ ಇಡೀ ದಿನದಲ್ಲಿ ಸೇವಿಸುವ ಒಟ್ಟಾರೆ ಆಹಾರ ಪ್ರಮಾಣದಲ್ಲಿ 353 ಕ್ಯಾಲೊರಿಗಳಷ್ಟು ಕಡಿಮೆಯಾಗುತ್ತಿದ್ದು ಇದರಿಂದ ದೇಹದ ತೂಕವನ್ನು ಕಡಿಮೆ ಮಾಡಬಹುದು ಎಂದು ಅಧ್ಯಯನ ಹೇಳುತ್ತದೆ.
ಸಾಮಾನ್ಯವಾಗಿ ಜನರು 115 ಕ್ಯಾಲೊರಿಗಳಷ್ಟನ್ನು ಬೆಳಗಿನ ಉಪಹಾರದಿಂದ ಪಡೆದರೆ ಮಧ್ಯಾಹ್ನದ ಊಟವೊಂದರಿಂದಲೇ 468 ಕ್ಯಾಲೊರಿಗಳು ಸಿಗುತ್ತದೆ.ಬೆಳಗಿನ ಉಪಹಾರ ಸೇವನೆಯನ್ನು ದೇಹದ ತೂಕ ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿ ಬಳಸಬಹುದು ಎಂದು ಡಾ.ಟೊಲ್ಫ್ರಿ ಹೇಳುತ್ತಾರೆ.
ಈ ಅಧ್ಯಯನ ನ್ಯೂಟ್ರಿಶನ್ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

SCROLL FOR NEXT