ನವದೆಹಲಿ: ನಲವತ್ತು ವರ್ಷದ ನಂತರ ಜೀವನ ಆರಂಭವಾಗುತ್ತದೆ ಎಂಬ ಮಾತಿದೆ. ಆದರೆ 40 ವರ್ಷದ ನಂತರ ವ್ಯಕ್ತಿಗೆ ಹಲವು ಗಂಭೀರ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ನಿರಂತರ ಆರೋಗ್ಯ ಪರೀಕ್ಷೆ, ಸಕ್ರಿಯ ಜೀವನ ಶೈಲಿಯಿಂದಾಗಿ ಉತ್ತಮ ಆರೋಗ್ಯ ವನ್ನು ನಿರ್ವಹಿಸಬಹುದಾಗಿದೆ.
ಒತ್ತಡದ ಜೀವನ ಶೈಲಿ, ಆರೋಗ್ಯದ ಬಗ್ಗೆ ನಿರ್ಲಕ್ಷ್ಯ, ಅನಾರೋಗ್ಯದಿಂದ ಕೂಡಿದ ಹವ್ಯಾಸಗಳಿಂದಾಗಿ ಹೆಚ್ಚಿನ ಜನ ರಕ್ತದೊತ್ತಡ, ಮಧುಮೇಹ ಹಾಗೂ ಹೃದಯ ಕಾಯಿಲೆಗಳಂತ ಗಂಭೀರ ಸಮಸ್ಯೆಯಿಂದ ಬಳಲುತ್ತಿರುತ್ತಾರೆ.
30 ವರ್ಷದ ನಂತರ ಪುರುಷಷರು ಸಾಧಾರಣಾ ಹೆಲ್ತ್ ಚೆಕ್ ಅಪ್ ಮಾಡಿಕೊಳ್ಳಬೇಕಾಗುತ್ತದೆ. ಆದರೆ 40 ವರ್ಷದ ನಂತರ ಕಡ್ಡಾಯವಾಗಿ ಪುರುಷರು ತಮ್ಮ ಆರೋಗ್ಯದಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ ಎಂದು ಡಾ. ರಮಾನಂದ ಶ್ರೀಕಂಠಯ್ಯ ನಾಡಿಗ್ ಹೇಳಿದ್ದಾರೆ.
ನಿಯಮಿತವಾಗಿ ಆರೋಗ್ಯ ಪರೀಕ್ಷೆ ಮಾಡಿಕೊಳ್ಳುವುದರಿಂದ ಯಾವುದೇ ಕಾಯಿಲೆ ಕೂಡ ಅಧಿಕ ಪ್ರಮಾಣದಲ್ಲಿ ಉಲ್ಬಣಗೊಳ್ಳಲು ಸಾಧ್ಯವಿರುವುದಿಲ್ಲ, ತಮ್ಮ ಕುಟುಂಬಸ್ಥರಿಗಿರುವ ವಂಶವಾಹಿ ಕಾಯಿಲೆಗಳ ಬಗ್ಗೆ ವೈದ್ಯರಿಗೆ ಪೂರ್ಣ ಮಾಹಿತಿ ನೀಡುವುರಿಂದ ನಿಮಗೆ ಯಾವ ರೀತಿಯ ಔಷಧ ನೀಡಬೇಕೆಂಬುದು ವೈದ್ಯರಿಗೆ ಸುಲಭವಾಗತ್ತದೆ. ಇದರಿಂದ ಅಪಾಯದಿಂದ ತಪ್ಪಿಸಿಕೊಳ್ಳಬಹುದಾಗಿದೆ.
ಹೆಚ್ಚನ ಸಮಯ ಕೆಲಸ ಮಾಡುವುದರಿಂದ 40 ವರ್ಷಧ ನಂತರ ಸಾಧಾರಣವಾಗಿ ಮಂಡಿ ನೋವು, ಬೆನ್ನು ನೋವು, ಸ್ಪಾಂಡಿಲಿಟಿಸ್ ಕಾಣಿಸಿಕೊಳ್ಳುತ್ತದೆ.ನಿರಂತರವಾಗಿ ನೀವು ಕೆಲವೊಂದು ವ್ಯಾಯಾಮ ಮಾಡಿದರೇ ಈ ಸಮಸ್ಯೆಯಿಂದ ಮುಕ್ತರಾಗಬಹುದು.
ಒತ್ತಡ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ, ಹಣಕಾಸಿನ ನಿರ್ವಹಣೆ, ಕುಟುಂಬ ಹಾಗೂ ಮಕ್ಕಳು , ವೃದ್ದ ತಂದೆ ತಾಯಿಗಳ ಬಗ್ಗೆ ಗಮನ ಇವೆಲ್ಲ ಒತ್ತಡಕ್ಕೆ ಕಾರಣವಾಗುತ್ತದೆ, ಇದರ ನಡುವೆ ನಿಮಗಾಗಿ ಸ್ವಲ್ಪ ಸಮಯ ಮೀಸಲಿಡಬೇಕಾಗುತ್ತದೆ, ಇದರಿಂದ ನಿಮ್ಮ ದೇಹ ಹಾಗೂ ಮನಸ್ಸು ಫಿಟ್ ಆಗಿರುತ್ತದೆ, ಆಧುನಿಕವಾದ ದೈಹಿಕ ವ್ಯಾಯಾಮ ಮಾಡುವ ರೀತಿಯನ್ನು ಅಳವಡಿಸಿಕೊಳ್ಳಿ, ಉದಾಹರಣೆಗೆ ಸೈಕ್ಲಿಂಗ್, ಸ್ವಿಮ್ಮಿಂಗ್ ಘಲನ್ನು ದಿನನಿತ್ಯ ಮಾಡುವುದರಿಂದ ರಾತ್ರಿ ಚೆನ್ನಾಗಿ ನಿದ್ದೆ ಬರುತ್ತದೆ. ಜೊತೆಗೆ ಯೋಗ ಹಾಗೂ ಧ್ಯಾನ ಮಾಡುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ.
ಹೆಚ್ಚಿನ ಜನರಲ್ಲಿ ರಕ್ತದೊತ್ತಡ ಹಾಗೂ ಕೊಬ್ಬಿನ ಸಮಸ್ಯೆ ಕಾಣಿಸಿಕೊಳ್ಳವುದು ಸಾಮಾನ್ಯ, ಈ ವಯಸ್ಸಿನಲ್ಲಿ ನೀವು ಇದನ್ನು ಸರಿಯಾಗಿ ನಿರ್ವಹಿಸದೇ ಹೋದರೇ ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದ ತೊಂದರೆ ಅನುಭವಿಸಬೇಕಾಗುತ್ತದೆ. ಜೊತೆಗೆ ಸ್ವಲ್ಪ ವಯಸ್ಸಾದ ನಂತರ ಹೃದಯಾಘಾತ ಮತ್ತು ಸ್ಟ್ರೋಕ್ ಉಂಟಾಗುವ ಸಾಧ್ಯತೆಗಳಿವೆ, ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡುವುದರಿಂದ ಈ ತೊಂದರೆಗಳನ್ನು ತಪ್ಪಿಸಬಹುದಾಗಿದೆ, 40 ವರ್ಷದ ನಂತರ ಪ್ರತಿ 5 ವರ್ಷಕ್ಕೊಮ್ಮೆ ನಿಯಮಿತವಾಗಿ ಕೊಬ್ಬಿನ ಪರೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.
40 ವರ್ಶದ ನಂತರ ಮೂಳೆಗಳಲ್ಲಿ ರಂದ್ರ ಕಾಣಿಸಿಕೊಳ್ಳುವುದನ್ನು ಅಸ್ಥಿ ರಂದ್ರತೆ ಎಂದು ಕರೆಯಲಾಗುತ್ತದೆ,. ಮೂಳೆಯ ತೂಕ ಕಡಿಮೆಯಾಗುತ್ತದೆ. ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಕೊರತೆಯಿಂದ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹವಾ ನಿಯಂತ್ರಕ ಯಂತ್ರಗಳನ್ನು ಬಳಸುವವರು ಪ್ರತಿ ದಿನ ಸುಮಾರು ಅರ್ಧ ಗಂಟೆಯಷ್ಟು ಕಾಲ ಸೂರ್ಯನಿಗೆ ತಮ್ಮ ದೇಹವನ್ನು ಒಡ್ಜಿಕೊಳ್ಳಬೇಕಾಗುತ್ತದೆ.
ಬೊಜ್ಜು, ಮಧುಮೇಹ ಸಮಸ್ಯೆ ಆನಾರೋಗ್ಯಕರ ಆಹಾರ ಪದ್ಧತಿಯಿಂದ ಬರುತ್ತದೆ,. 45 ರಿಂದ 65 ವರ್ ವಯೋಮಾನದವರಿಗೆ ಇದು ಬಹಳ ದೊಡ್ಡ ರಿಸ್ಕ್ ಆಗಿದೆ, ಸಮತೋಲನ ಆಹಾರ ಸಕ್ರಿಯವಾದ ಜೀವನ ಶೈಲಿಯಿಂದಾಗಿ ಈ ಸಮಸ್ಯೆ ದೂರ ಇಡಬಹುದಾಗಿದೆ, 45 ವರ್ಷದ ನಂತರ ಪ್ರತಿ ಮೂರು ವರ್ಷಗಳಿಗೊಮ್ಮೆ ಮಧುಮೇಹ ಪರೀಕ್ಷೆ ಮಾಡಿಸುವುದು ಉತ್ತಮ.