ಜೀವನಶೈಲಿ

ಬಲಿಷ್ಠ ವ್ಯಕ್ತಿಗಳಲ್ಲಿ ಮೆದುಳು ಚುರುಕಾಗಿರುತ್ತದೆ: ಅಧ್ಯಯನ ವರದಿ

Srinivas Rao BV
ಲಂಡನ್: ಸದೃಢ ದೇಹದಿಂದ ಮೆದುಳೂ ಚುರುಕಾಗಿರುತ್ತದೆ ಎಂದು ಆಸ್ಟ್ರೇಲಿಯಾದ ವೆಸ್ಟ್ರನ್ ಸಿಡ್ನಿ ವಿಶ್ವವಿದ್ಯಾನಿಲಯದ ಅಧ್ಯಯನ ವರದಿ ಹೇಳಿದೆ. 
ಸ್ನಾಯುಗಳ ಶಕ್ತಿಯಿಂದ ಮೆದುಳು ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನೂ ತಿಳಿಯಬಹುದಾಗಿದೆ, ದೇಹದ ಸದೃಢತೆಗೂ ಮೆದುಳಿನ ಆರೋಗ್ಯಕ್ಕೂ ಸ್ಪಷ್ಟವಾದ ಸಂಬಂಧವಿದೆ ಎಂದು ಅಧ್ಯಯನ ನಡೆಸಿರುವ ವಿಶ್ವವಿದ್ಯಾನಿಲಯದ ಸಿಬ್ಬಂದಿ ಜೋಸೆಫ್ ಫಿರ್ತ್ ಹೇಳಿದ್ದಾರೆ. 
ಬ್ರಿಟನ್ ಮೂಲದ ಸುಮಾರು 475,397 ಮಂದಿಯಿಂದ ಡಾಟಾ ಸಂಗ್ರಹಣೆ ಮಾಡಿರುವ ವಿಶ್ವವಿದ್ಯಾನಿಲಯ, ಅಷ್ಟೂ ಜನರ ಪೈಕಿ ದೇಹ ಸದೃಢವಾಗಿದ್ದವರು ಮೆದುಳಿಗೆ ಸಂಬಂಧಿಸಿದ ಟಾಸ್ಕ್( ಕೆಲಸ) ಗಳಲ್ಲಿ ಉತ್ತಮವಾದ ಫಲಿತಾಂಶ ಪಡೆದಿರುವುದನ್ನು ಗಮನಿಸಿದ್ದಾರೆ.  ಈ ಹಿನ್ನೆಲೆಯಲ್ಲಿ ಮೆದುಳು ಚುರುಕಾಗಿರಲು ಸದೃಢ ಕಾಯವೂ ಮುಖ್ಯ ಎಂದು ಹೇಳಲಾಗುತ್ತಿದೆ. 
ಇದೇ ತಂಡದ ಮತ್ತೊಂದು ಸಂಶೋಧನೆಯ ಪ್ರಕಾರ  ಏರೋಬಿಕ್ ವ್ಯಾಯಾಮದಿಂದ ಮೆದುಳಿನ ಆರೋಗ್ಯವನ್ನು ಉತ್ತಮಗೊಳಿಸಬಹುದೆಂಬುದು ಈಗಾಗಲೇ ಸಾಬೀತಾಗಿದೆ.  ಆದರೆ ನಮ್ಮ ದೇಹವನ್ನು ಸದೃಢಗೊಳಿಸಲುವುದಕ್ಕಾಗಿ ಆಯ್ಕೆ ಮಾಡಿಕೊಳ್ಳುವ ಮಾರ್ಗಗಳನ್ನೇ ಮೆದುಳನ್ನು ಚುರುಕು, ಆರೋಗ್ಯಪೂರ್ಣಗೊಳಿಸುವುದಕ್ಕೂ ಆಯ್ಕೆ ಮಾಡಿಕೊಳ್ಳಬಹುದೇ ಎಂಬುದರ ಬಗ್ಗೆ ಹೆಚ್ಚಿನ ಅಧ್ಯಯನ ಅಗತ್ಯವಿದೆ ಎನ್ನುತ್ತಾರೆ ಸಂಶೋಧಕರು. 
SCROLL FOR NEXT