ವಿಶ್ವ ಏಡ್ಸ್ ದಿನ: ಹೆಚ್ ಐವಿ ಕುರಿತ 6 ತಪ್ಪು ಗ್ರಹಿಕೆ
ಡಿ.1 ವಿಶ್ವ ಏಡ್ಸ್ ದಿನ. ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಘಟನೆ (ಎನ್ಎಸಿಒ) 2017 ರ ಪ್ರಕಾರ 21.40 ಲಕ್ಷ ಜನರು ಭಾರತದಲ್ಲಿ ಏಡ್ಸ್ ಗೆ ತುತ್ತಾಗಿದ್ದಾರೆ. ಏಡ್ಸ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಮುಂದಾಗಿರುವ ಡಬ್ಲ್ಯೂ ಹೆಚ್ ಒ ಈ ಬಾರಿ ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಐವಿಯನ್ನು ಪರೀಕ್ಷಿಸಿಕೊಳ್ಳುವುದಕ್ಕೆ ಜನತೆಗೆ ಕರೆ ನೀಡಿದೆ.
ಡಬ್ಲ್ಯೂ ಹೆಚ್ ಒಯಿಂದ Know Your Status ಎಂಬ ಅಭಿಯಾನ ಪ್ರಾರಂಭಿಸಲಾಗಿದ್ದು ಜನಜಾಗೃತಿಯನ್ನು ಹಮ್ಮಿಕೊಳ್ಳಲಾಗಿದೆ.
ಸರಿಪಡಿಸಿಕೊಳ್ಳಬೇಕಾದ ಹೆಚ್ ಐ ವಿ ಕುರಿತಾದ 6 ತಪ್ಪುಗ್ರಹಿಕೆಗಳು
- 1.ಹೆಚ್ ಐವಿ ಸ್ಪರ್ಶದಿಂದ ಹರಡುವುದಿಲ್ಲ: ಹೆಚ್ ಐ ವಿ ಬೆವರು, ಕಣ್ಣೀರಿನಿಂದ ಹರಡುವುದಿಲ್ಲ, ಆದ್ದರಿಂದ ಏಡ್ಸ್ ರೋಗಿಯನ್ನು ಸ್ಪರ್ಶಿಸುವುದು, ಹಸ್ತಲಾಘವ ನೀಡುವುದರಿಂದ ಸಮಸ್ಯೆ ಉಂಟಾಗುವುದಿಲ್ಲ.
- 2. ಓರಲ್ ಸೆಕ್ಸ್: ಓರಲ್ ಸೆಕ್ಸ್ ನಿಂದ ಹೆಚ್ ಐ ವಿ ಹರಡುತ್ತದೆ ಎಂಬುದು ತಪ್ಪು ತಿಳುವಳಿಕೆ, ಓರಲ್ ಸೆಕ್ಸ್ ನಿಂದ ಹೆಚ್ ಐ ವಿ ಹರಡುವುದಿಲ್ಲ.
- 3. ಸೊಳ್ಳೆ ಕಚ್ಚುವುದರಿಂದ ಹೆಚ್ ಐವಿ ಹರಡುವುದಿಕೆ: ಹೆಚ್ ಐ ವಿ ಸೋಂಕು ಇರುವ ವ್ಯಕ್ತಿಗಳಿಗೆ ಕಚ್ಚಿದ ಸೊಳ್ಳೆ ಕಚ್ಚಿದರೆ ಹೆಚ್ ಐವಿ ಸೋಂಕು ತಗುಲುವುದಿಲ್ಲ
- 4. ಹೆಚ್ ಐವಿ ಸೋಂಕು ಪೀಡಿತ ವ್ಯಕ್ತಿಗಳು ಬಳಸಿದ ಶೌಚಾಲಯಗಳನ್ನು ಬಳಕೆ ಮಾಡಬಹುದಾಗಿದೆ.
- 5. ಚಿಕಿತ್ಸೆ ವೇಳೆ ವೈರಾಣು ಕಡಿಮೆಯಾದಂತೆ ಕಾಣುತ್ತದೆ. ಆದರೆ ವಾಸ್ತವದಲ್ಲಿ ಕಡಿಮೆಯಾಗಿರುವುದಿಲ್ಲ
- 6. ನೀವು ಹೆಚ್ಐವಿ ಪೀಡಿತ ತಾಯಿಯಾಗಿದ್ದರೆ ಹುಟ್ಟಲಿರಿವ ಮಗುವಿಗೆ ಹೆಚ್ ಐ ವಿ ಸೋಂಕು ಹರಡುವುದನ್ನು ತಡೆಗಟ್ಟಬಹುದಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos