ಜೀವನಶೈಲಿ

ಗಂಡಸರೇ ಎಚ್ಚರ, ಗಾಂಜಾ ಚಟ ’ಅದಕ್ಕೆ' ಮಾರಕ!

Srinivas Rao BV
ಗಾಂಜಾ ಸೇದುವುದರಿಂದ ವೀರ್ಯಾಣು ಉತ್ಪಾದನೆ ಕಮ್ಮಿ ಆಗಲಿದೆ ಎಂಬುದು ಈಗಾಗಲೇ ಸಂಶೋಧನೆಯಲ್ಲಿ ದೃಢಪಟ್ಟಿದೆ. ಈಗ ಗಾಂಜಾ ಹಾಗೂ ಪುರುಷರಿಗೆ ಸಂಬಂಧಿಸಿದಂತೆ ಮತ್ತೊಂದು ಅಧ್ಯಯನ ನಡೆದಿದ್ದು, ಗಾಂಜಾ ಸೇದುವುದು ವೀರ್ಯಾಣುಗಳ ಸ್ವರೂಪವನ್ನೇ ಬದಲಾವಣೆ ಮಾಡಬಹುದು ಎಂದು ಹೇಳಿದೆ. 
ಡ್ಯೂಕ್ ವಿವಿಯಲ್ಲಿ ನಡೆದ ಸಂಶೋಧನೆಯನ್ನು ಎಪಿಜೆನೆಟಿಕ್ಸ್ ಜರ್ನಲ್ ನಲ್ಲಿ ಈ ಅಧ್ಯಯನ ವರದಿಯನ್ನು ಪ್ರಕಟಿಸಲಾಗಿದ್ದು ಗಾಂಜಾ ಚಟ ವೀರ್ಯಾಣುಗಳ ಸಂಖ್ಯೆ ಕಡಿಮೆ ಮಾಡುವುದಷ್ಟೇ ಅಲ್ಲದೇ ವೀರ್ಯಾಣುಗಳ ಮೇಲೆ ಇನ್ನಿತರ ಪರಿಣಾಮಗಳನ್ನೂ ಹೊಂದಿದೆ ಎಂದು ತಿಳಿಸಿದೆ. 
ಇಲಿ ಹಾಗೂ ಮನುಷ್ಯರನ್ನು ಸಂಶೋಧನೆಗೊಳಪಡಿಸಿಕೊಳ್ಳಲಾಗಿದ್ದು, ಗಾಂಜಾ ಸೇವನೆ ಮಾಡಿಸಲಾಗಿದ್ದ ಇಲಿಗಳ ವೀರ್ಯಾಣು ಜೀವಕೋಶಗಳ ಮೇಲೆ ಪರಿಣಾಮ ಬೀರಿದ್ದು ಅನುವಂಶಿಕ ಧಾತುಗಳ ಕಾರ್ಯನಿರ್ವಹಣೆ ಬದಲಾವಣೆಯಾಗಿರುವುದು ಕಂಡುಬಂದಿದೆ. ಇದೇ ಮಾದರಿಯಲ್ಲಿ ಮನುಷ್ಯರ ಮೇಲೂ ಪ್ರಯೋಗ ನಡೆದಿದೆ. ಗಾಂಜಾ ಸೆದದೇ ಇರುವವರು, ಹಾಗೂ ಜೀವಿತಾವಧಿಯಲ್ಲಿ 10 ಕ್ಕಿಂತ ಹೆಚ್ಚು ಬಾರಿ ಗಾಂಜಾ ಸೇದದೇ ಇರುವವರು ಹಾಗೂ ಪ್ರತಿ ವಾರಾ ಗಾಂಜಾ ಸೇದುವವರೆಂಬ ವಿಭಾಗಗಳನ್ನಾಗಿ ಮಾಡಿ ಸಂಶೋಧನೆ ನಡೆಸಲಾಗಿದೆ. ಗಾಂಜಾ ಸೇದಿದ ವ್ಯಕ್ತಿಗಳ ವೀರ್ಯಾಣು ಜೀವಕೋಶಗಳ ಮೇಲೆ ಗಾಂಜಾ ಪರಿಣಾಮ ಇದ್ದು ಅನುವಂಶಿಕ ಧಾತುಗಳ ಕಾರ್ಯನಿರ್ವಹಣೆ ಬದಲಾವಣೆಯಾಗಿರುವುದು ಸಂಶೋಧನೆಯಲ್ಲಿ ದೃಢಪಟ್ಟಿದೆ. 
ನಮ್ಮ ದೇಹದಲ್ಲಿರುವ ಮೀಥೈಲ್ ಗ್ರೂಪ್ಸ್ ಎಂಬ ಕೆಮಿಕಲ್ ಟ್ಯಾಗ್ ಗಳ ಮೇಲೆ ಗಾಂಜಾ ಋಣಾತ್ಮಕ ಪರಿಣಾಮ ಬೀರಲಿದೆ. ಅಷ್ಟೇ ಅಲ್ಲದೇ ಕ್ಯಾನ್ಸರ್ ಟ್ಯೂಮರ್ ಗಳನ್ನು ಪ್ರತಿರೋಧಿಸುವಂತಹ ಹಾಗೂ ಅಂಗಾಂಗಗಳು ಪೂರ್ಣಪ್ರಮಾಣದಲ್ಲಿ ಬೆಳೆಯುವುದಕ್ಕೆ ಸಹಾಯ ಮಾಡುವ ಅನುವಂಶಿಕ ಧಾತುಗಳ ಮೇಲೆಯೂ ಗಾಂಜಾ ಕೆಟ್ಟ ಪರಿಣಾಮ ಬೀರಲಿದೆ ಎಂದು ಸಂಶೋಧಕರು ಹೇಳಿದ್ದಾರೆ. 
SCROLL FOR NEXT