ಜೀವನಶೈಲಿ

2018ರಲ್ಲಿ ಉತ್ತಮ ಸೆಕ್ಸ್ ಲೈಫ್ ಬೇಕೇ? ಇಲ್ಲಿವೆ ಕೆಲವು ಟಿಪ್ಸ್!

Srinivas Rao BV
ಹೊಸ ವರ್ಷಕ್ಕೆ ಪ್ರತಿಯೊಬ್ಬರೂ ಸಹ ಒಂದೊಂದು ರೆಸೆಲ್ಯೂಷನ್ ಕೈಗೊಳ್ಳುತ್ತಾರೆ. ಈ ಬಾರಿಯ ಹೊಸ ವರ್ಷವನ್ನು ಜೀವನ ಶೈಲಿಗೆ ಸಂಬಂಧಿಸಿದಂತೆ ರೆಸೆಲ್ಯೂಷನ್ ಕೈಗೊಳ್ಳಬಹುದಾಗಿದೆ. 
ನ್ಯೂ ಇಯರ್ ಗೆ ಒಬ್ಬೊಬ್ಬರೂ ಒಂದೊಂದು ರೀತಿಯಲ್ಲಿ ರೆಸೆಲ್ಯೂಷನ್ ಮಾಡುತ್ತಾರೆ, ಈ ತರಹೆವಾರಿ ರೆಸೆಲ್ಯೂಷನ್ ಗಳ ಪೈಕಿ ಕಾಯವನ್ನು ಸದೃಢಗೊಳಿಸುವುದೂ ಒಂದಾಗಿದ್ದು, ಫಿಸಿಕಲ್ ಫಿಟ್ನೆಸ್ ಗರ್ಭಧಾರಣೆಯಲ್ಲಿಯೂ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಸಂಶೋಧಕರ ಪ್ರಕಾರ ಗರ್ಭಧಾರಣೆ ಮಾಡಬೇಕಾದರೆ ದೇಹ ಫಿಟ್ ಆಗಿರುವುದು ಮುಖ್ಯ. ಈ ಹಿನ್ನೆಲೆಯಲ್ಲಿ ಆರೋಗ್ಯಕರ ಜೀವನ ಶೈಲಿಯೂ ಮಹತ್ವ ಪಡೆದಿದೆ. 
ಐವಿಎಫ್ ತಜ್ಞರಾದ ಡಾ.ಶೋಭಾ ಗುಪ್ತ ಈ ಬಗ್ಗೆ ಮಾಹಿತಿ ನೀಡಿದ್ದು, ಆರೋಗ್ಯಕರ ಸೆಕ್ಸ್ ಗೆ ಯಾವೆಲ್ಲಾ ಆಹಾರಗಳನ್ನು ಸೇವಿಸಬೇಕೆಂಬುದರ ಬಗ್ಗೆ ಮಾಹಿತಿ ನೀಡಿದ್ದಾರೆ.  
ಹಲವರು ಆಹಾರವನ್ನು ತಡವಾಗಿ ಸೇವಿಸುತ್ತಿದ್ದಾರೆ. ರಾತ್ರಿ ಮಲಗುವುದು ವಿಶ್ರಾಂತಿ ತೆಗೆದುಕೊಳ್ಳುವುದಕ್ಕೇ ಹೊರತು, ಕೇವಲ ಆಹಾರವನ್ನು ಜೀರ್ಣ ಮಾಡಿಕೊಳ್ಳುವುದಕ್ಕಲ್ಲ. ಆಹಾರ ಸರಿಯಾದ ಸಮಯದಲ್ಲಿ ಸೇವಿಸುವುದೂ ಸಹ ಮುಖ್ಯವಾಗಿದ್ದು, ಆಹಾರ ಸಮತೋಲನ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. 
ಮಹಿಳೆಯರು ಗರ್ಭ ಧರಿಸಬೇಕಾದರೆ ವಿಟಮಿನ್ ಸಿ ಅತ್ಯವಶ್ಯವಾಗಿದ್ದು, ಗರ್ಭಧಾರಣೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ. 
ಪ್ರೊಟೀನ್ ಅಂಶ ಹೆಚ್ಚಿರುವ ಆಹಾರದಿಂದ ರಕ್ತದಲ್ಲಿ ಸಕ್ಕರೆ ಅಂಶವನ್ನು ಸಮತೋಲನದಲ್ಲಿಟ್ಟುಕೊಳ್ಳಲು ಸಹಕಾರಿಯಾಗಿದೆ. 
ಹೆಚ್ಚು ವಾಕಿಂಗ್ ಮಾಡಿ 
ಆರೋಗ್ಯಕರ ಸೆಕ್ಸ್ ಗೆ ಹೆಚ್ಚು ವಾಕಿಂಗ್ ಮಾಡುವುದೂ ಸಹಕಾರಿಯಾಗಿದೆ. 
ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಿ 
ಸಮುದ್ರದ ಅಲೆಗಳು, ಜಲಪಾತ ಹೀಗೆ ಮನಸ್ಸಿನ ಒತ್ತಡ ನಿವಾರಿಸುವ, ಮನಸ್ಸಿಗೆ ಹಿತವಾದ ಶಬ್ದ ಕೇಳುವುದು ಆರೋಗ್ಯಕರ ಸೆಕ್ಸ್ ಗೆ ಪೂರಕವಾಗಿದೆ. 
SCROLL FOR NEXT