ಸಾಂದರ್ಭಿಕ ಚಿತ್ರ 
ಜೀವನಶೈಲಿ

ಐರೋಪ್ಯ ರಾಷ್ಟ್ರಗಳ ಮೈಕ್ರೊವೇವ್ ವಿಕಿರಣಗಳು 7 ದಶಲಕ್ಷ ಕಾರುಗಳು ಬಿಡುವ ಇಂಗಾಲಕ್ಕೆ ಸಮ!

ಇನ್ನು ಮುಂದೆ ಮೈಕ್ರೊವೇವ್ ನಲ್ಲಿ ಆಹಾರ ಪದಾರ್ಥಗಳನ್ನು ಬಿಸಿ ಮಾಡುವ ಮುನ್ನ ....

ವಾಷಿಂಗ್ಟನ್: ಇನ್ನು ಮುಂದೆ ಮೈಕ್ರೊವೇವ್ ನಲ್ಲಿ ಆಹಾರ ಪದಾರ್ಥಗಳನ್ನು ಬಿಸಿ ಮಾಡುವ ಮುನ್ನ ಎಚ್ಚರಿಕೆಯಿಂದಿರಿ. 
 ಐರೋಪ್ಯ ಒಕ್ಕೂಟದಾದ್ಯಂತ ಮೈಕ್ರೊವೇವ್ ಹೊರಸೂಸುವ ವಿಕಿರಣಗಳು ಏಳು ದಶಲಕ್ಷ ಕಾರುಗಳು ಹೊರಸೂಸುವ ಕಾರ್ಬನ್ ಡೈಆಕ್ಸೈಡ್ ಗೆ ಸಮನಾದದ್ದು ಎಂದು ಅಧ್ಯಯನದಿಂದ ತಿಳಿದುಬಂದಿದೆ.ಇಂಗ್ಲೆಂಡ್ ನ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದ ಸಂಶೋಧಕರು ಮೈಕ್ರೊವೇವ್ ಗಳ ಪರಿಸರಿಕ ಪರಿಣಾಮಗಳ ಕುರಿತು ವಿಸ್ತಾರವಾದ ಅಧ್ಯಯನ ನಡೆಸಿದ್ದು ಮನುಷ್ಯರ ಸಂಪೂರ್ಣ ಜೀವನದ ಮೇಲೆ ಉಂಟಾಗುವ ಪರಿಣಾಮ ಬಗ್ಗೆ ಅಧ್ಯಯನ ನಡೆಸಿದ್ದಾರೆ.
ಐರೋಪ್ಯ ಒಕ್ಕೂಟವೊಂದರಲ್ಲಿಯೇ ಮೈಕ್ರೊವೇವ್ ಗಳು ಹೊರಸೂಸುವ 7.7. ದಶಲಕ್ಷ ಟನ್ ಗಳಷ್ಟು ವಿಕಿರಣಗಳನ್ನು ಪ್ರತಿವರ್ಷ ಹೊರಸೂಸುತ್ತದೆ. ಅದು ಪ್ರತಿವರ್ಷ ಹೊರಸೂಸುವ 6.8 ದಶಲಕ್ಷ ಕಾರುಗಳ ಕಾರ್ಬನ್ ಡೈ ಆಕ್ಸೈಡ್ ಗೆ ಸಮವಾಗಿದೆ.ಐರೋಪ್ಯ ಒಕ್ಕೂಟದುದ್ದಕ್ಕೂ ಅಂದಾಜು 9.4 ಟೆರಾವಾಟ್ಸ್ ವಿದ್ಯುತ್ ನ್ನು ಪ್ರತಿ ಗಂಟೆಗೆ ಹೊರಸೂಸುತ್ತದೆ. 
ಇದು ಮೂರು ದೊಡ್ಡ ಗ್ಯಾಸ್ ವಿದ್ಯುತ್ ಘಟಕಗಳು ಹೊರಸೂಸುವ ವಿದ್ಯುತ್ ಗೆ ಸಮವಾಗಿದೆ. ರಾಸಾಯನಿಕ ಎಂಜಿನಿಯರಿಂಗ್ ಮತ್ತು ಆನಾಲಿಟಿಕಲ್ ಸೈನ್ಸ್ ನ ಡಾ.ಅಲೆಜಾಂಡ್ರೊ ಗಲ್ಲೆಗೊ-ಸ್ಚ್ ಮಿಡ್, ವೇಗವಾಗಿ ತಾಂತ್ರಿಕ ಬೆಳವಣಿಗೆಗಳು ಮತ್ತು ಬೆಲೆಗಳು ಕುಸಿಯುತ್ತಿರುವುದು ವಿದ್ಯುತ್ ಮತ್ತು ವಿದ್ಯುದೀಕರಣ ಸಾಮಗ್ರಿಗಳ ಖರೀದಿಗೆ ಪ್ರೇರೇಪಿಸುತ್ತದೆ ಎನ್ನುತ್ತಾರೆ.ವಿದ್ಯುದೀಕರಣ ವಸ್ತುಗಳು ಜನರ ಪ್ರತಿಷ್ಠೆಯ ವಿಷಯವಾಗಿ ಮಾರ್ಪಾಡಾಗಿರುವುದರಿಂದ ಗ್ರಾಹಕರು ಹೊಸ ಹೊಸ ಉತ್ಪನ್ನಗಳನ್ನು ಖರೀದಿಸಲು ಮುಂದಾಗುತ್ತಾರೆ ಎನ್ನುತ್ತಾರೆ ಗಲ್ಲೆಗೊ.
ಲೈಫ್ ಸೈಕಲ್ ಅಸ್ಸೆಸ್ಸ್ ಮೆಂಟ್ ಎಂಬ ಅಧ್ಯಯನದಲ್ಲಿ ಮೈಕ್ರೊವೇವ್ ನಿಂದ ಮನುಷ್ಯನ ಆರೋಗ್ಯದ ಮೇಲಾಗುವ ಹಾನಿ ಕುರಿತು ಅಧ್ಯಯನ ನಡೆಸಲಾಗಿದೆ. ಅಧ್ಯಯನಕಾರರು 12 ವಿವಿಧ ಪಾರಿಸರಿಕ ಅಂಶಗಳನ್ನು ಪತ್ತೆಹಚ್ಚಿದ್ದು ಅದರಲ್ಲಿ ಹವಾಮಾನ ಬದಲಾವಣೆ, ನೈಸರ್ಗಿಕ ಸಂಪನ್ಮೂಲಗಳ ಸವಕಳಿ ಮತ್ತು ಪರಿಸರದ ಮೇಲೆ ವಿಷ ಕಾರುವ ಅಂಶ ತಿಳಿದುಬಂದಿದೆ. 
ಉತ್ಪಾದನೆ ಪ್ರಕ್ರಿಯೆಗಳು ನೈಸರ್ಗಿಕ ಸಂಪನ್ಮೂಲಗಳ ಸವಕಳಿ ಮತ್ತು ಹವಾಮಾನ ಬದಲಾವಣೆಗೆ ಶೇಕಡಾ 20ರಷ್ಟು ಕಾರಣವಾಗುತ್ತದೆ. ಮೈಕ್ರೊವೇವ್ 573 ಕಿಲೊವ್ಯಾಟ್ ವಿದ್ಯುತ್ ನ್ನು 8 ವರ್ಷದಲ್ಲಿ ಬಳಸುತ್ತಿದ್ದು, ಅದು 7 ವ್ಯಾಟ್ ಎಲ್ಇಡಿ ಲೈಟ್ ಬಲ್ಬ್ ಬೆ ಸಮನಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?