ಪರಿಣಾಮಕಾರಿ ಸಂವಹನ ಕಲೆಗೆ 5 ಸೂತ್ರಗಳು 
ಜೀವನಶೈಲಿ

ಪರಿಣಾಮಕಾರಿ ಸಂವಹನ ಕಲೆಗೆ 5 ಸೂತ್ರಗಳು

ದಿನನಿತ್ಯದ ಜೀವನಕ್ಕೆ, ನಮ್ಮ ವೃತ್ತಿ ಬದುಕಿಗೆ ಎಲ್ಲದಕ್ಕೂ ಸಂವಹ ಕೌಶಲ ಅತ್ಯಂತ ಮುಖ್ಯವಾದದ್ದು. ಆಧುನಿಕ ಯುಗದಲ್ಲಿ ಸಂವಹನ ಅತೀ ಮುಖ್ಯ ಪಾತ್ರವಹಿಸುತ್ತದೆ. ಸಂವಹನವು ನಮ್ಮ ಜೀವನ ಶೈಲಿಗೆ ಅತ್ಯಂತ ಮುಖ್ಯ...

ದಿನನಿತ್ಯದ ಜೀವನಕ್ಕೆ, ನಮ್ಮ ವೃತ್ತಿ ಬದುಕಿಗೆ ಎಲ್ಲದಕ್ಕೂ ಸಂವಹ ಕೌಶಲ ಅತ್ಯಂತ ಮುಖ್ಯವಾದದ್ದು. ಆಧುನಿಕ ಯುಗದಲ್ಲಿ ಸಂವಹನ ಅತೀ ಮುಖ್ಯ ಪಾತ್ರವಹಿಸುತ್ತದೆ. ಸಂವಹನವು ನಮ್ಮ ಜೀವನ ಶೈಲಿಗೆ ಅತ್ಯಂತ ಮುಖ್ಯ. 
ಪರಿಣಾಮಕಾರಿ ಸಂವಹನ ಕಲೆ ಸಮಾಜದಲ್ಲಿ ನಮಗೆ ಒಳ್ಳೆಯ ಬೆಲೆಯನ್ನು ತಂದುಕೊಡುತ್ತದೆ. ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಮಾತನ್ನು ಕೇಳಿರಬಹುದು. ಉತ್ತಮ ಸಂವಹನವು ಸಮಾಜದಲ್ಲಿ ನಮ್ಮ ಬೆಲೆಯನ್ನೂ ಹೆಚ್ಚಿಸುತ್ತದೆ. 
ಆದರೆ, ಈ ಸಂವಹನ ಕೌಶಲ್ಯ ಎಲ್ಲರಲ್ಲೂ ಒಂದೇ ಮಟ್ಟದಲ್ಲಿರುವುದಿಲ್ಲ. ಕೆಲವರು ಮಾತನಾಡುವ ಶೈಲಿಯಿಂದ ನಕಾರಾತ್ಮಕ ಅನಿಸಿಕೆ, ಅನುಭವಗಳು ಆಗುತ್ತವೆ. ನಾವು ಅಭಿಪ್ರಾಯಗಳನ್ನು, ಭಾವನೆಗಳನ್ನು ವ್ಯಕ್ತಪಡಿಸುವ ರೀತಿಯಿಂದ ಇತರರಿಗೆ ಬೇಸರ, ಕಿರಿಕಿರಿ ಉಂಟಾಗಿ, ನಕಾರಾತ್ಮಕ ಭಾವನೆಗಳು ಮೂಡುವಂತಾಗಿ ಹೋಗುತ್ತವೆ. 
ಈ ಸಂದರ್ಭದಲ್ಲಿ ನಮ್ಮಲ್ಲಿನ ಮಾತಿನ ಕೌಶಲ್ಯವನ್ನು ಹೇಗೆ ಹಿಡಿತದಲ್ಲಿಟ್ಟುಕೊಳ್ಳಬೇಕೆಂಬುದು ನಮಗೆ ತಿಳಿದಿರಬೇಕು. ಕಿಂಗ್ಸ್ ಲರ್ನಿಂಗ್ ನ ಸಂಸ್ಥಾಪಕ ಮತ್ತು ಸಿಇಒ ಅರ್ಶನ್ ವಕೀಲ್, ಜಾಬ್ಸ್‏ಫಾರ್‏ಹರ್ ನ ಸಂಸ್ಥಾಪಕ ಮತ್ತು ಸಿಇಒ ನೇಹಾ ಬಗಾರಿಯಾ ಅವರು ಪರಿಣಾಮಕಾರಿ ಸಂವಹನಕ್ಕೆ ಇಲ್ಲಿ ಕೆಲವು ಸಲಹೆ ನೀಡಿದ್ದಾರೆ.
ಏಕಾಭಿಪ್ರಾಯ ಹೊಂದಿರುವ ಜನರೊಂದಿಗೆ ಸಂಪರ್ಕ ಹೊಂದಿ
ಸ್ಥಳೀಯ ಸಂಸ್ಥೆಗಳೊಂದಿಗೆ ಕೈಜೋಡಿಸಬೇಕು. ಇದರಿಂದ ನಮ್ಮಲ್ಲಿರುವ ಅಭಿಪ್ರಾಯಗಳನ್ನು ಮನಬಿಚ್ಚಿ ಮಾತನಾಡುವುದರಿಂದ ಸಂವಹನ ಕೌಶಲ್ಯ ಹೆಚ್ಚುತ್ತದೆ. 
ಸ್ವಯಂ-ಕಲಿಕೆ ತಂತ್ರಜ್ಞಾನ ಬಳಕೆ
ಯಾವುದೇ ಮಾಹಿತಿಯನ್ನು ಕಲೆ ಹಾಕುವಾಗ ಅಥವಾ ಮಾಹಿತಿಗಳನ್ನು ತಿಳಿದುಕೊಳ್ಳುವಾಗ ಇತರರನ್ನು ಅವಲಂಬಿಸದಿರಿ. ಇತ್ತೀಚಿನ ದಿನಗಳಲ್ಲಿ ಸೆಲ್ಫ್ ಲರ್ನಿಂಗ್ ಕಮ್ಯುನಿಕೇಷನ್ ಆ್ಯಪ್ ಗಳು ಪ್ಲೇಸ್ಟೋರ್ ಗಳಲ್ಲಿ ಲಭ್ಯವಿದೆ. ಇಂತಹ ಆ್ಯಪ್ ಗಳನ್ನು ಬಳಕೆ ಮಾಡುವ ಮೂಲಕ ಮಾಹಿತಿಗಳನ್ನು ತಿಳಿದುಕೊಳ್ಳಿ. 
ವಿಷಯ, ವಿಚಾರಗಳನ್ನು ತಿಳಿದು ಮಾತನಾಡಿ
ಯಾವುದೇ ವಿಚಾರ, ವಿಷಯಗಳ ಕುರಿತು ಮಾತನಾಡುವುದಕ್ಕೂ ಮುನ್ನ ಅವುಗಳ ಬಗ್ಗೆ ಪೂರ್ಣ ಪ್ರಮಾಣದಲ್ಲಿ ಮಾಹಿತಿ ತಿಳಿದುಕೊಳ್ಳಲು ಪ್ರಯತ್ನಿಸಿ. ತಿಳಿದುಕೊಂಡು ಮಾತನಾಡುವುದರಿಂದ ನಿಮ್ಮ ಜನರಲ್ಲಿ ಧನಾತ್ಮಕ ಭಾವನೆಗಳು ಮಾಡುತ್ತವೆ. ನಿಮ್ಮ ಸಂವಹನ ಕೌಶಲ್ಯವೂ ಹೆಚ್ಚುತ್ತದೆ. 
ಅಭ್ಯಾಸ ಮುಖ್ಯ 
ವಿವಿಧ ರೀತಿಯ ಜನರೊಂದಿಗೆ ಬೆರೆಯುತ್ತಿದ್ದ ಸಂದರ್ಭದಲ್ಲಿ ಯೋಚನೆ ಮಾಡಿ ಮಾತನಾಡಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳು, ಸಭೆಗಳಲ್ಲಿ ಮಾತನಾಡುವುದಕ್ಕೂ ಮುನ್ನ ಹಲವು ಭಾರಿ ಏನನ್ನೂ ಮಾತನಾಡಬೇಕೆಂಬುದನ್ನು ಅಭ್ಯಾಸ ಮಾಡಿಕೊಳ್ಳಬೇಕು. 
ಸಕ್ರಿಯವಾಗಿ ಆಲಿಸಿರಿ
ಸಂವಹನ ಕೌಶಲವನ್ನು ಉತ್ತಮಗೊಳಿಸುವಲ್ಲಿ ಸಕ್ರಿಯವಾಗಿ ಆಲಿಸುವು ಅತ್ಯಂತ ಮುಖ್ಯವಾಗುತ್ತದೆ. ಇತರರು ನೀಡುವ ಸಂದೇಶವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡು ನಂತರ ಮಾತನಾಡುವುದು ಉತ್ತಮ. 
ವಿಚಲಿತಗೊಳ್ಳದಿರಿ
ಎಲ್ಲಿ ಅಥವಾ ಯಾವುದೇ ಸಂದರ್ಭದಲ್ಲಿಯ ಮಾತನಾಡುತ್ತಿರುವಾಗ ವಿಚಲಿತರಾಗಬಾರದು. ನಮ್ಮ ಗಮನ ಮಾತನಾಡುವತ್ತ ಇರಬೇಕು. ಹಲವು ಬಾರಿ ಮಾತನಾಡುತ್ತಿದ್ದ ಸಂದರ್ಭದಲ್ಲಿಯೇ ಯಾವುದೋ ವಿಚಾರದ ಬಗ್ಗೆ ಯೋಚನೆ ಮಾಡುತ್ತಾರೆ. ನಂತರ ಏನನ್ನು ಮಾತನಾಡುತ್ತಿದ್ದರು ಎಂಬುದನ್ನು ಮರೆತು ಬಿಟ್ಟಿರುತ್ತಾರೆ. ಇದು ಸಂವಹನ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT