ಸಾಂದರ್ಭಿಕ ಚಿತ್ರ 
ಜೀವನಶೈಲಿ

ಲಿಪ್‏ಸ್ಟಿಕ್, ಮಹಿಳೆಯರಿಗೆ ಕೊಡುತ್ತೆ ಕಿಕ್!

ಲಿಪ್ ಸ್ಟಿಕ್ ಹಚ್ಚಿಕೊಳ್ಳುವುದೆಂದರೆ ಸಾಮಾನ್ಯವಾಗಿ ಹೆಣ್ಣುಮಕ್ಕಳಿಗೆ ಬಲು ಇಷ್ಟ. ಅದು ಸಣ್ಣಪುಟ್ಟ ...

ನವದೆಹಲಿ; ಲಿಪ್ ಸ್ಟಿಕ್ ಹಚ್ಚಿಕೊಳ್ಳುವುದೆಂದರೆ ಸಾಮಾನ್ಯವಾಗಿ ಹೆಣ್ಣುಮಕ್ಕಳಿಗೆ ಬಲು ಇಷ್ಟ. ಅದು ಸಣ್ಣಪುಟ್ಟ ಕಾರ್ಯಕ್ರಮಗಳಿರಬಹುದು ಅಥವಾ ದೊಡ್ಡ ಸಮಾರಂಭವಿರಲಿ ಲಿಪ್ ಸ್ಟಿಕ್ ಹಾಕಿಕೊಂಡು ಹೊರಗಡೆ ಹೋಗುವುದನ್ನು ಮಹಿಳೆಯರು ಮತ್ತು ಪುಟ್ಟ ಹುಡುಗಿಯರು ಕೂಡ ಇಷ್ಟಪಡುತ್ತಾರೆ. ಇದು ನಮ್ಮ ಮುಖದ ಅಂದವನ್ನು ಹೆಚ್ಚಿಸುತ್ತದೆ. ಸ್ಟೈಲಿಶ್ ಲುಕ್ ನೀಡುತ್ತದೆ.

ಲಿಪ್ ಸ್ಟಿಕ್ ನಿಂದ ಇನ್ನೂ ಹಲವು ಉಪಯೋಗಗಳಿವೆ ಎಂದು ವೂನಿಕ್ ಮತ್ತು ವಿಶಾಲ್ ಮುದ್ಗಲ್ ನ ಮುಖ್ಯ ಸ್ಟೈಲಿಶ್ ಹಾಗೂ ವಿಎಲ್ ಸಿಸಿ ಮೇಕಪ್ ತಜ್ಞೆ ಭವ್ಯ ಚಾವ್ಹಾ ಹೇಳಿದ್ದಾರೆ.

- ಉತ್ತಮ ಗುಣಮಟ್ಟದ ಲಿಪ್ ಸ್ಟಿಕ್ ಗಳಲ್ಲಿ ಸೂರ್ಯನ ಪ್ರಕಾಶಮಾನವಾದ ಕಿರಣಗಳಿಂದ ರಕ್ಷಿಸುವ ವಸ್ತುಗಳಿರುತ್ತವೆ. ಅದರಿಂದ ನಮ್ಮ ತುಟಿಗೆ ಹಾನಿಕರವಾದ ಯುವಿ ಕಿರಣಗಳಿಂದ ರಕ್ಷಿಸುತ್ತದೆ.

-ಲಿಪ್ ಸ್ಟಿಕ್ ನಲ್ಲಿ ಅಲೊವೆರಾ ಮತ್ತು ವಿಟಮಿನ್ ಇ ಯಂತಹ ಅಂಶಗಳು ಸೇರ್ಪಡೆಯಾಗಿರುವುದರಿಂದ ಚರ್ಮದಲ್ಲಿ ನೀರನ್ನು ಹೀರಿಕೊಳ್ಳುವಂತೆ ಮಾಡುತ್ತದೆ.

-ಲಿಪ್ ಸ್ಟಿಕ್ ಗಳು ತುಟಿಗೆ ಹೊಳಪು ಮತ್ತು ಅಂದವನ್ನು ನೀಡಿ ನಿಮ್ಮ ಮುಖದಲ್ಲಿ ಮುಗುಳುನಗೆ ಮೂಡುವಂತೆ ಮಾಡುತ್ತದೆ.

- ಲಿಪ್ ಸ್ಟಿಕ್ ಹಚ್ಚಿಕೊಂಡು ಆಫೀಸಿಗೆ, ಕಚೇರಿಗಳಿಗೆ ಹೋದರೆ ವೃತ್ತಿಯಲ್ಲಿ ನಿಮಗೊಂದು ಗತ್ತು,  ನೋಟವನ್ನು ನೀಡುತ್ತದೆ. ಇನ್ನು ನಿಮ್ಮ ಬಾಯ್ ಫ್ರೆಂಡ್ ಜೊತೆ ಡೇಟಿಂಗ್ ನೈಟ್ ಗೆ ಹೋಗುವುದಿದ್ದರೆ ಲಿಪ್ ಸ್ಟಿಕ್ ಹಚ್ಚಿಕೊಂಡರೆ ಇನ್ನೂ ಸುಂದರವಾಗಿ ಕಾಣಿಸುತ್ತೀರಿ.

ಲಿಪ್ ಸ್ಟಿಕ್ ಹಚ್ಚಿಕೊಂಡ ಮಹಿಳೆಯರಲ್ಲಿ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಉಳಿದವರಿಗಿಂತ ಹೆಚ್ಚು ಉತ್ತಮವಾಗಿ ಕಾಣಿಸಿಕೊಳ್ಳುವುದರಿಂದ ಬೇರೆಯವರ ಆಕರ್ಷಣೆಗೆ ಒಳಗಾಗುತ್ತಾರೆ.

-ಮನಸ್ಸಿನ ಭಾವನೆಗಳನ್ನು ಲಿಪ್ ಸ್ಟಿಕ್ ಹೆಚ್ಚು ಮಾಡುತ್ತದೆ. ನಮ್ಮ ವರ್ತನೆಯಲ್ಲಿ ಹೆಚ್ಚು ಬಲ ಬಂದಂತೆ ಭಾಸವಾಗುತ್ತದೆ. ಉತ್ಸಾಹ ಮೂಡಿಸುತ್ತದೆ.

-ಒಬ್ಬ ಮಹಿಳೆಯ ವ್ಯಕ್ತಿತ್ವವನ್ನು ಲಿಪ್ ಸ್ಟಿಕ್ ನಿಂದಲೂ ಅಳೆಯಬಹುದು. ಸಾಮಾನ್ಯವಾಗಿ ಲಿಪ್ ಸ್ಟಿಕ್ ಹಚ್ಚುವ ಮಹಿಳೆಯರಲ್ಲಿ 3ರಿಂದ 4 ಅತಿ ಹೆಚ್ಚು ಇಷ್ಟಪಡುವ ಬಣ್ಣಗಳಿರುತ್ತದೆ. 10ರಿಂದ 12 ಲಿಪ್ ಸ್ಟಿಕ್ ಬಣ್ಣಗಳನ್ನು ಅವರು ತಮ್ಮ ಮೇಕಪ್ ಕಿಟ್ ನಲ್ಲಿ ಇಟ್ಟುಕೊಂಡಿರುತ್ತಾರೆ.

-ಮೈಬಣ್ಣಕ್ಕೆ, ಧರಿಸಿದ ಉಡುಪಿನ ಬಣ್ಣಕ್ಕೆ ಸರಿಯಾದ ಲಿಪ್ ಸ್ಟಿಕ್ ಹಚ್ಚಿಕೊಂಡರೆ ಮಹಿಳೆಯರು ಇನ್ನೂ ಚೆನ್ನಾಗಿ ಕಾಣಿಸುತ್ತಾರೆ.

ಜುಲೈ 29ನ್ನು ರಾಷ್ಟ್ರೀಯ ಲಿಪ್ ಸ್ಟಿಕ್ ದಿನ ಎಂದು ಆಚರಿಸಲಾಗುತ್ತದೆ. ಈ ದಿನವನ್ನು ಸೌಂದರ್ಯವರ್ಧಕ ಉತ್ಪನ್ನಗಳ ಬಳಕೆ ಮತ್ತು ಪ್ರಚಾರಗಳಿಗೆ ಮೀಸಲಿಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT