ಜೀವನಶೈಲಿ

ಸಂಗೀತ ಕೇಳುವುದರಿಂದ ದೀರ್ಘಾವಧಿ ವ್ಯಾಯಾಮ ಸಾಧ್ಯ!

Srinivas Rao BV
ನ್ಯೂಯಾರ್ಕ್: ವ್ಯಾಯಾಮ ಮಾಡುವಾಗ ಸಂಗೀತ ಕೇಳುವ ಅಭ್ಯಾಸ ಹೊಂದಿದ್ದರೆ ಹೆಚ್ಚು ಸಮಯ ವ್ಯಾಯಾಮ ಮಾಡುವುದಕ್ಕೆ ಸಾಧ್ಯಗಲಿದೆ. 
ನಮ್ಮ ಮನಸ್ಥಿತಿಯ ಮೇಲೆ ಸಂಗೀತ ಪರಿಣಾಮ ಬೀರಲಿದ್ದು, ಸಂಗೀತ ಕೇಳುವುದರಿಂದ ಮೆದುಳಿನ ಶಕ್ತಿ ಹೆಚ್ಚಿಸುವ ರಾಸಾಯನಿಕಗಳು ಉತ್ಪತ್ತಿಯಾಗುತ್ತವೆ. ಸಂಗೀತ ಕೇಳುವುದು ಹೆಚ್ಚು  ವ್ಯಾಯಾಮ ಮಾಡುವುದಕ್ಕೆ ಸ್ಪೂರ್ತಿಯಾಗಲಿದೆ ಎಂದು  ಟೆಕ್ಸಾಸ್ ಟೆಕ್ ವಿಶ್ವವಿದ್ಯಾನಿಲಯದ ಆರೋಗ್ಯ ವಿಜ್ಞಾನದ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. 
ಸಂಗೀತ ಕೇಳುತ್ತಾ ವ್ಯಾಯಾಮ ಮಾಡುವುದರ ಬಗೆಗಿನ ಅಧ್ಯಯನ ವರದಿ ಒರ್ಲ್ಯಾಂಡೊ ನಲ್ಲಿ ನಡೆಯಲಿರುವ 67 ನೇ ವಾರ್ಷಿಕ ವೈಜ್ಞಾನಿಕ ಅಧಿವೇಶನದಲ್ಲಿ ಮಂಡಿಸಲಾಗುತ್ತದೆ. 
ಸುಮಾರು 127 ಹೃದಯ ರೋಗಿಗಳನ್ನು ಎರಡು ಪ್ರತ್ಯೇಕ ತಂಡಗಳನ್ನಾಗಿಸಿ ಎಲೆಕ್ಟ್ರೋಕಾರ್ಡಿಯೋಗ್ರಾಮ್ ಥ್ರೆಡ್ ಮಿಲ್ ಸ್ಟ್ರೆಸ್ ಟೆಸ್ಟ್ (ಇಸಿಜಿ) ಸಮೀಕ್ಷೆಗೆ ಒಳಪಡಿಸಿ ಸಂಗೀತ ಕೇಳುತ್ತಾ ವ್ಯಾಯಾಮ ಮಾಡಲು ಸೂಚಿಸಲಾಗಿತ್ತು, ಮತ್ತೊಂದು ತಂಡಕ್ಕೆ ಸಂಗೀತ ಕೇಳದೆಯೇ ವ್ಯಾಯಾಮ ಮಾಡಲು ಸೂಚಿಸಲಾಗಿತ್ತು. ಸಂಗೀತ ಕೇಳುತ್ತ ವ್ಯಾಯಾಮ ಮಾಡಿದವರು ಕೇಳದೇ ಮಾಡಿದವರಿಗಿಂತ 50.6 ಸೆಕೆಂಡ್ ಗಳಷ್ಟು ಹೆಚ್ಚು ಸಮಯ ವ್ಯಾಯಾಮ ಮಾಡಿದ್ದರು ಎಂದು ವರದಿ ಹೇಳಿದೆ.
SCROLL FOR NEXT