ಜೀವನಶೈಲಿ

ಚಿಟಿಕೆಯಷ್ಟು ಮೆಣಸು ಬಳಸಿ, ಸ್ಥೂಲಕಾಯಕ್ಕೆ ಹೇಳಿ ಗುಡ್ ಬೈ!

Srinivas Rao BV
ನವದೆಹಲಿ: ಭಾರತೀಯ ಆಹಾರ ಪದ್ಧತಿ ನಾಲಿಗೆಗೆ ರುಚಿ ನೀಡುವುದು ಮಾತ್ರವಲ್ಲದೇ ಆರೋಗ್ಯಕ್ಕೂ ಉತ್ತಮವಾಗಿರುತ್ತದ್ದು,  ಕರಿ ಮೆಣಸು ರುಚಿಗೂ, ಆರೋಗ್ಯಕ್ಕೂ ಉತ್ತಮವಾಗಿರುವ ಪ್ರಮುಖ  ಪದಾರ್ಥಗಳಲ್ಲಿ ಒಂದಾಗಿದೆ. 
ವಿಟಮೀನ್ ಎ, ಸಿ ಹಾಗೂ ಕೆ, ಖನಿಜಾಂಶಗಳನ್ನು ಹೊಂದಿರುವ ಕರಿ ಮೆಣಸನ್ನು ಆಹಾರ ಪದಾರ್ಥಗಳಲ್ಲಿ ಬಳಕೆ ಮಾಡುವುದರಿಂದ ಸ್ಥೂಲಕಾಯ ಬಾರದಂತೆ ತಡೆಗಟ್ಟಬಹುದಾಗಿದೆ. ವಿಟಮೀನ್ ಗಳಷ್ಟೇ ಅಲ್ಲದೇ ಆರೋಗ್ಯಕರ ಕೊಬ್ಬಿನಾಮ್ಲಗಳು,  ನೈಸರ್ಗಿಕ ಚಯಾಪಚಯ ಬೂಸ್ಟರ್ ಅಂಶಗಳನ್ನೂ ಹೊಂದಿದ್ದು, ತೂಕ ಕಡಿಮೆ ಮಾಡುವುದಕ್ಕೆ ಸಹಕಾರಿಯಾಗಿದೆ. 
ಕರಿ ಮೆಣಸನ್ನು ನಿಯಮಿತವಾಗಿ ಬಳಸುವುದರಿಂದ ಕ್ಯಾಲೊರಿಗಳನ್ನು ಕಡಿಮೆ ಮಾಡಬಹುದಾಗಿದ್ದು, ಕೊಬ್ಬಿನ ಅಂಶವಿರುವ ಹೊಸ ಸೆಲ್ ಕೋಶಗಳನ್ನು ನಾಶ ಮಾಡುವುದಕ್ಕೆ ಸಹಕಾರಿಯಾಗಿದೆ. ಕ್ಲಿನಿಕಲ್ ಆಹಾರ ಪದ್ಧತಿ ಮತ್ತು ಪೌಷ್ಟಿಕಾಂಶ ತಜ್ಞ ಅಗರ್ವಾಲ್ ಈ ಬಗ್ಗೆ ಮಾಹಿತಿ ನೀಡಿದ್ದು, ಮೆಣಸನ್ನು ಹೇಗೆ ಸೇವಿಸಬೇಕೆಂಬ ಬಗ್ಗೆ ಸಲಹೆ ನೀಡಿದ್ದಾರೆ. 
  • ಮೆಣಸನ್ನು ನುಂಗಬಹುದು ಅಥವಾ ಅಗಿಯಬಹುದು: ಪ್ರತಿದಿನ ಬೆಳಿಗ್ಗೆ 1-2 ಕಾಳು ಮೆಣಸನ್ನು ಸೇವಿಸಬಹುದಾಗಿದೆ. 
  • ಕರಿ ಮೆಣಸಿನ ಟೀ: ಬ್ಲಾಕ್ ಪೆಪ್ಪರ್ ಟೀ ಸೇವಿಸುವುದೂ ಸಹ ಅರೋಗ್ಯಕ್ಕೆ ಉತ್ತಮವಾಗಿದೆ. 
  • ಹಣ್ಣುಗಳಿಗೆ ಕಾಳು ಮಣಸನ್ನು ಹಾಕಿ ಸೇವಿಸುವುದರಿಂದ ರುಚಿ ಹಾಗೂ ಆರೋಗ್ಯಕ್ಕೆ ಸಕಾರಾತ್ಮಕವಾಗಿರುತ್ತದೆ. 
  • ಬೇಸಿಗೆಯಲ್ಲಿ ಮೆಣಸನ್ನು ಸೇರಿಸಿದ ಮಜ್ಜಿಗೆ ಕುಡಿಯುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದಾಗಿದೆ, 
  • ಬ್ಲ್ಯಾಕ್ ಪೆಪ್ಪರ್ ಆಯಿಲ್: ಬೆಳಗಿನ ಉಪಹಾರಕ್ಕೂ ಮುನ್ನ ಶುದ್ಧ ಬ್ಲ್ಯಾಕ್ ಪೆಪ್ಪರ್ ಆಯಿಲ್ ನ್ನು ನೀರಿಗೆ ಹಾಕಿ ಸೇವಿಸುವುದೂ ಸಹ ಆರೋಗ್ಯಕ್ಕೆ ಉತ್ತಮವಾಗಿದೆ. 
SCROLL FOR NEXT