ಜೀವನಶೈಲಿ

ಜನರು ಸುಳ್ಳು ನಂಬಿಕೆಗಳಿಗೆ ಜೋತುಬೀಳುವುದು ಏಕೆ?

Srinivas Rao BV
ಜನರು ಸುಳ್ಳು ನಂಬಿಕೆಗಳಿಗೇಕೆ ಜೋತು ಬೀಳುತ್ತಾರೆ ಯಾಕೆ ಎಂದು ಯಾವಾಗಾದರೂ ಯೋಚನೆ ಮಾಡಿದ್ದೀರಾ? ಇದಕ್ಕೆ ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ-ಬರ್ಕ್ಲಿ ವಿಶ್ವವಿದ್ಯಾನಿಲಯ ಉತ್ತರ ಕಂಡುಕೊಂಡಿದೆ. 
ಕೆಲವೊಂದು ಸುಳ್ಳು ನಂಬಿಕೆಗಳಿಗೆ ತದ್ವಿರುದ್ಧವಾದ ಸಾಕ್ಷ್ಯಗಳು ಕಣ್ಮುಂದೆಯೇ ಇದ್ದರೂ,  ಸಾಕ್ಷ್ಯಗಳಿಗಿಂತಲೂ ವ್ಯಕ್ತವಾಗುವ ಪ್ರತಿಕ್ರಿಯೆಗಳಿಗೆ ಹೆಚ್ಚು ಮಹತ್ವ ನೀಡುತ್ತಾರೆ ಆದ್ದರಿಂದ ಬಹುತೇಕ ಬಾರಿ ಸುಳ್ಳು ನಂಬಿಕೆಗಳಿಗೇ ಜೋತು ಬೀಳುತ್ತಾರೆ ಎಂದು ವಿವಿಯ ಸಂಶೋಧಕರು ಹೇಳಿದ್ದಾರೆ. 
ಹೊಸ ವಿಷಯಗಳನ್ನು ಕಲಿಯುವಾಗ ಸುಳ್ಳು ನಂಬಿಕೆಗಳಿಗೆ ತದ್ವಿರುದ್ಧವಾದ ಸಾಕ್ಷ್ಯಗಳು ಸಿಗುತ್ತವೆ, ಆದರೆ ಜನರು ಕಲಿಕೆಯ ಪ್ರಕ್ರಿಯೆಯಲ್ಲಿ ವ್ಯಕ್ತವಾಗುವ ಪ್ರತಿಕ್ರಿಯೆಗಳಿಗೆ ಹೆಚ್ಚು ಮಹತ್ವ ನೀಡುತ್ತಾರೆ. ಪ್ರತಿಕ್ರಿಯೆಗಳು ಎಂದಿಗೂ ಜನರನ್ನು ಹೆಚ್ಚು ಆತ್ಮವಿಶ್ವಾಸಿಯಾಗುವಂತೆ ಮಾಡುತ್ತವೆ ಎನ್ನುತ್ತಿದೆ  ಸಂಶೋಧನೆಯ ಫಲಿತಾಂಶ. 
ಸಕಾರಾತ್ಮಕ ಹಾಗೂ ನಕಾರಾತ್ಮಕ ಪ್ರತಿಕ್ರಿಯೆಗಳಿಂದ ಜನರ ನಂಬಿಕೆಗಳು ರೂಪುಗೊಳ್ಳುತ್ತವೆ. ಯಾವುದೋ ವಿಷಯದ ಬಗ್ಗೆ ನಿಮಗೆ ತಿಳಿಯದೇ ಇದ್ದರೂ ಸಾಕಷ್ಟು ತಿಳಿದಿದೆ ಎಂದುಕೊಳ್ಳುತ್ತೀರಿ, ಆ ನಂತರವೂ ಅದೇ ವಿಷಯದ ಬಗ್ಗೆ ಹೆಚ್ಚು ಹೆಚ್ಚು  ಅನ್ವೇಷಿಸಲು ಸಾಕಷ್ಟು ಕುತೂಹಲ ತೋರಿಸುತ್ತೀರ, ಆದರೆ ನೀವು ನಿಮಗೆ ಆ ವಿಷಯದ ಬಗ್ಗೆ ಕಡಿಮೆ ತಿಳಿದಿದೆ ಎಂಬುದನ್ನು ಒಪ್ಪಿಕೊಳ್ಳುವುದಕ್ಕೆ ವಿಫಲರಾಗುತ್ತೀರಿ ಎಂದು ಸಂಶೋಧನಾ ಬರಹಗಾರ್ತಿ ಲೂಯಿಸ್ ಮಾರ್ಟಿ ಹೇಳಿದ್ದಾರೆ. 
ಕಂಪ್ಯೂಟರ್ ಪರದೆ ಮೇಲೆ ವಿವಿಧ ಬಣ್ಣಗಳಿಂದ ಕೂಡಿದ್ದ ವಿವಿಧ ಸಂಯೋಜನೆಗಳನ್ನು 500 ಕ್ಕೂ ಹೆಚ್ಚು ವಯಸ್ಕರರಿಗೆ ತೋರಿಸಲಾಗಿತ್ತು. ನಂತರ ಸಂಶೋಧಕರೇ ಸೃಷ್ಟಿಸಿದ್ದ ವಸ್ತುವಿನ ಮಾದರಿಯಲ್ಲಿ ಕಾಣುವ ಆಕಾರ ಯಾವ ಬಣ್ಣದಲ್ಲಿ ಕಾಣಿಸುತ್ತದೆ ಎಂಬುದನ್ನು ತಿಳಿಸುವುದಕ್ಕೆ  ಸೂಚಿಸಿದರು. ಈ ಪೈಕಿ ಹಲವರು ನೀಡಿದ ಉತ್ತರದಿಂದ ಸಂಶೋಧಕರು ಜನರು ಸುಳ್ಳು ನಂಬಿಕೆಗಳಿಗೇಕೆ ಜೋತು ಬೀಳುತ್ತಾರೆ ಎಂಬುದಕ್ಕೆ ಕಾರಣ ತಿಳಿದುಕೊಳ್ಳಲು ಯತ್ನಿಸಿದ್ದಾರೆ.
SCROLL FOR NEXT