ಜೀವನಶೈಲಿ

ಲೈಂಗಿಕ ಕ್ರಿಯೆಯಲ್ಲಿ ತೊಡಗಿದಷ್ಟೂ ಪುರುಷರಿಗೆ ದೈವಭಕ್ತಿ, ದೇವರಲ್ಲಿ ನಂಬಿಕೆ ಹೆಚ್ಚು!

Srinivas Rao BV
ಸಂಕಟ ಬಂದಾಗ ವೆಂಕಟರಮಣ ಎಂಬ ಮಾತಿದೆ, ಅಂದರೆ ಸಂಕಷ್ಟ ಬಂದಾಗ ದೈವ ಭಕ್ತಿ, ದೇವರಲ್ಲಿ ನಂಬಿಕೆ ಹೆಚ್ಚಾಗುತ್ತದೆ ಎನ್ನುವುದು ಸಾಮಾನ್ಯ ನುಡಿ. ಆದರೆ ಇಲ್ಲೊಂದು ವರದಿಯ ಪ್ರಕಾರ ಸಂಭೋಗದಲ್ಲಿ ಹೆಚ್ಚು ತೊಡಗಿಸಿಕೊಂಡವರಿಗೂ ಹೆಚ್ಚು ದೈವ ಭಕ್ತಿ ಇರುತ್ತಂತೆ! 
ಉತ್ತರ ಕೆರೊಲಿನಾದ ಡ್ಯೂಕ್ ವಿಶ್ವವಿದ್ಯಾಲಯ ಸಂಶೋಧಕರ ಪ್ರಕಾರ ಲೈಂಗಿಕ ಕ್ರಿಯೆಯ ವೇಳೆ ಬಿಡುಗಡೆಯಾಗುವ  ಆಕ್ಸಿಟೋಸಿನ್ ಹಾರ್ಮೋನ್ (ಲವ್ ಹಾರ್ಮೋನ್) ಕೇವಲ ಸಾಮಾಜಿಕ ಬಂಧಗಳು ಬೆಸೆಯುವಂತೆ ಮಾಡುವುದಿಲ್ಲ, ಬದಲಾಗಿ, ದೈವತ್ವದ ಭಾವನೆಯನ್ನೂ ಉತ್ತೇಜಿಸುತ್ತದೆ, ಪ್ರಮುಖವಾಗಿ ಪುರುಷರಲ್ಲಿ ಈ ರೀತಿಯಾಗುತ್ತದೆ.
ಹೆಚ್ಚು ಲೈಂಗಿಕ ಕ್ರಿಯೆಯಲ್ಲಿ ತೊಡಗುವುದರಿಂದ ಅಧ್ಯಾತ್ಮಕ್ಕೆ ಪ್ರೇರಣೆ ಸಿಗುತ್ತದೆ, ಆಕ್ಸಿಟೋಸಿನ್ ಹಾರ್ಮೋನ್ ಇದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸಂಶೋಧಕರು ಅಭಿಪ್ರಾಯಪಟ್ತಿದ್ದಾರೆ. 
ಈ ಸಂಶೋಧನೆಗೆ ಸಂಬಂಧಪಟ್ಟ ರಾಸಾಯನಿಕ ಕ್ರಿಯೆಯನ್ನು ಕೆಲವು ಪುರುಷರ ಮೇಲೆ ಪ್ರಯೋಗಿಸಲಾಗಿದ್ದು, ಲವ್ ಹಾರ್ಮೋನ್ ಪ್ರಯೋಗಕ್ಕೆ ಒಳಪಟ್ಟ ಪುರುಷರೆಲ್ಲರೂ ಅಧ್ಯಾತ್ಮ ತಮ್ಮ ಜೀವನದ ಭಾಗ ಎಂದು ಹೇಳಿದ್ದಾರೆ. ಈ ಪೈಕಿ ಸಂಶೋಧನೆಗೆ ಒಳಪಡುವುದಕ್ಕೂ ಮುನ್ನ ಹಲವು ಅಧ್ಯಾತ್ಮವನ್ನು ತಮ್ಮ ಜೀವನದ ಭಾಗ ಎಂದು ಸಂಪೂರ್ಣವಾಗಿ ಒಪ್ಪಿರಲಿಲ್ಲ. ಆದ್ದರಿಂದ ಲೈಂಗಿಕ ಕ್ರಿಯೆಯಲ್ಲಿ ತೊಡಗಿದಷ್ಟೂ ಪುರುಷರಿಗೆ ದೈವಭಕ್ತಿ, ದೇವರಲ್ಲಿ ನಂಬಿಕೆ ಹೆಚ್ಚುತ್ತದೆ ಎಂದು ಹೇಳಿದ್ದಾರೆ.  
SCROLL FOR NEXT