ಜೀವನಶೈಲಿ

ಪುರುಷರೇ ಹುಷಾರ್... ವಿಪರೀತ ಜಿಮ್ ವ್ಯಾಯಾಮ ಬಂಜೆತನಕ್ಕೆ ಕಾರಣ!

Sumana Upadhyaya
ಜಿಮ್ ಗೆ ಹೋಗಿ ಸಿಕ್ಸ್ ಪ್ಯಾಕ್, ಬೀಫಿ ಬೈಸಪ್ಸ್ ಮಾಡಿಕೊಂಡರೆ ದೇಹ ಫಿಟ್ ಆಗಿರುತ್ತದೆ ಎಂಬ ಭಾವನೆ ಪುರುಷರಲ್ಲಿ ಬಹುತೇಕವಾಗಿದೆ. ದೇಹ ಫಿಟ್ ಆಗಿರಬೇಕೆಂದು ನಿರಂತರವಾಗಿ ಜಿಮ್ ಗೆ ಹೋಗಿ ಬೆವರಿಳಿಸಿಕೊಳ್ಳುತ್ತಾರೆ, ಇದರಿಂದ ಅನೇಕ ಅಡ್ಡ ಪರಿಣಾಮಗಳು ಇತ್ತೀಚೆಗೆ ಪುರುಷರಲ್ಲಿ ಕಾಣಿಸಿಕೊಳ್ಳುತ್ತದೆ.
ಇತ್ತೀಚೆಗೆ 32 ವರ್ಷದ ಯುವಕ ಜಿಮ್ ಇನ್ಸ್ಟ್ರಕ್ಟರ್ ಗೆ ಆಂಜೊಸ್ಪೆರ್ಮಿಯಾ ಎನ್ನುವ ಸಮಸ್ಯೆ ಕಾಡಿತ್ತು. ಅಂದರೆ ಪುರುಷರಲ್ಲಿ ಬಂಜೆತನ, ಇದಕ್ಕೆ ಕಾರಣ ಪುರುಷರು ದೀರ್ಘ ಕಾಲ ಜಿಮ್ ನಲ್ಲಿ ಕಳೆಯುವುದು ಮತ್ತು ಸಿಕ್ಸ್ ಪ್ಯಾಕ್, ಬೈಸಪ್ಸ್ ಎಂದು ಅಧಿಕ ಸ್ಟಿರಾಯ್ಡ್ ತೆಗೆದುಕೊಳ್ಳುವುದು.
ಮೋಹನ್ (ಹೆಸರು ಬದಲಿಸಲಾಗಿದೆ) ಎಂಬುವವರ 28 ವರ್ಷದ ಪತ್ನಿ ಮದುವೆಯಾಗಿ ಮೂರು ವರ್ಷಗಳಾದರೂ ಗರ್ಭಿಣಿಯಾಗದಾಗ ಬಂಜೆತನ ನಿವಾರಣೆ ಕ್ಲಿನಿಕ್ ಗೆ ಭೇಟಿ ನೀಡಿ ವೈದ್ಯರ ಸಲಹೆ ಪಡೆದರು. ಆಗ ಗೊತ್ತಾಗಿದ್ದು ಮೋಹನ್ ದೇಹದ ಮಾಂಸಖಂಡಗಳನ್ನು ಬೆಳೆಸಲು ಅಧಿಕ ಸ್ಟಿರಾಯ್ಡ್ ತೆಗೆದುಕೊಳ್ಳುವುದು, ಪ್ರೊಟೀನ್ ಶೇಕ್ ಗಳ ಸೇವನೆ, ಜಿಮ್ ನಲ್ಲಿ ಅತಿಯಾಗಿ ವರ್ಕೌಟ್ ಮಾಡುವುದರಿಂದ ಹಾರ್ಮೊನ್ ಅಸಮತೋಲನವಾಗಿ ಅವರ ವೀರ್ಯದಲ್ಲಿ ವೀರ್ಯಾಣುಗಳೇ ಬಿಡುಗಡೆಯಾಗುತ್ತಿಲ್ಲವೆಂದು. ಅಧಿಕ ಸಮಯ ವ್ಯಾಯಾಮ ಮಾಡುವುದರಲ್ಲಿ ಮತ್ತು ಜಿಮ್ ನಲ್ಲಿ ಬೇರೆಯವರಿಗೆ ಹೇಳಿಕೊಡುವುದರಲ್ಲಿಯೇ ಮೋಹನ್ ನಿರತರಾಗಿರುತ್ತಾರೆ.
ಕೃತಕ ಪುಡಿಗಳು ಮತ್ತು ಪ್ರೊಟೀನ್ ಶೇಕ್ ಗಳನ್ನು ಬಳಸುವುದರಿಂದ ದೇಹದಲ್ಲಿ ಹಾರ್ಮೊನ್ ಗಳನ್ನು ಕುಗ್ಗಿಸುತ್ತದೆ. ಇದರಿಂದ ಮೋಹನ್ ಅವರ ವೀರ್ಯ ಬಿಡುಗಡೆ ಮೇಲೆ ತೀವ್ರ ಪರಿಣಾಮ ಬೀರುತ್ತವೆ. ಅಧಿಕವಾಗಿ ದೇಹಕ್ಕೆ ವ್ಯಾಯಾಮ ನೀಡುವುದರಿಂದ ಮರುಉತ್ಪಾದನೆ ವ್ಯವಸ್ಥೆಯಲ್ಲಿ ಅಸಮತೋಲನವುಂಟಾಗುತ್ತದೆ. ಇದಕ್ಕಾಗಿ ಮೋಹನ್ ಗೆ ವೈದ್ಯರು ಸ್ಟಿರಾಯ್ಡ್ ತೆಗೆದುಕೊಳ್ಳುವುದನ್ನು ನಿಲ್ಲಿಸುವಂತೆ ಮತ್ತು ಅಧಿಕ ವ್ಯಾಯಾಮ ಮಾಡದಂತೆ ಸೂಚಿಸಿದರು.
SCROLL FOR NEXT