ಜೀವನಶೈಲಿ

ಸಂಕಷ್ಟದ ಸಂದರ್ಭದಲ್ಲಿ ಸಾಕುನಾಯಿಗಳಿಂದ ಸಿಗುತ್ತದೆ ಭಾವನಾತ್ಮಕ ಬೆಂಬಲ!

Shilpa D

ಬೆಂಗಳೂರು: ಸಂಕಷ್ಟದಲ್ಲಿ ಸಾಕು ನಾಯಿಗಳು ಮನುಷ್ಯನಿಗೆ ಉತ್ತಮ ಸಂಗಾತಿಗಳಾಗುತ್ತವೆ ಎಂದು ಪೆಟ್ ಕೊನೆಕ್ಟ್ ಸಿಇಓ ದೇವಾಂಶಿ ಶಾ ಹೇಳಿದ್ದಾರೆ,

ಕಚೇರಿ ಹೋಗುವವರಿಗೆ ಸಮಸ್ಯೆ ದೈನಂದಿನ ಜೀವನದಲ್ಲಿ ಸಮಯವಿರುವುದಿಲ್ಲ,  ನೀವು ಒಂದು ಸಾಕು ನಾಯಿಯನ್ನು ಸಾಕಿದ್ದರೇ ಅದು ಕೇವಲ ನಿಮ್ಮ ಜವಾಬ್ದಾರಿ ಮಾತ್ರವಲ್ಲ, ಅದು ನಿಮಗೆ ಭಾವನಾತ್ಮಕವಾಗಿ ಬೆಂಬಲ ಸ್ಥೈರ್ಯ ನೀಡುತ್ತದೆ ಎಂದು ತಿಳಿಸಿದ್ದಾರೆ.

ಸಾಕುಪ್ರಾಣಿಗಳನ್ನು ಹೊಂದಿರುವ ಜನರು ಪ್ರಾಣಿಗಳ ಬಗ್ಗೆ ಕಾಳಜಿ ವಹಿಸದವರಿಗಿಂತ ಭಾವನಾತ್ಮಕವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ.

ಇದಕ್ಕಾಗಿಯೇ ಸಾಕುಪ್ರಾಣಿಗಳೊಂದಿಗೆ ಮನೆಯಲ್ಲಿರುವುದು ನಿಮ್ಮದೇ ಆದ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳುವ ಸ್ಥಿತಿಯಲ್ಲಿ ಉತ್ತಮವಾಗಿರುತ್ತದೆ. ಟಿವಿ, ಇಂಟರ್ನೆಟ್ ಮತ್ತು ಮೊಬೈಲ್ ಫೋನ್‌ಗಳು ನಮ್ಮನ್ನು ಕಡಿಮೆ ಗ್ರಹಿಸುತ್ತವೆ. ಇದಕ್ಕೆ ಸರಿಯಾದ ಪರಿಹಾರ ಎಂದರೆ ಸಾಕು ನಾಯಿಗಳು, 

ನಾಯಿಗಳು ಬುದ್ಧಿವಂತ ಜೀವಿಗಳು ಮತ್ತು ನಿಮ್ಮ  ಮಿದುಳಿಗೆ ಉತ್ತಮವಾದ ಎಲ್ಲಾ ರೀತಿಯ ಮಾನಸಿಕ ಚಟುವಟಿಕೆಯನ್ನು  ಸಾಕು ನಾಯಿಯಿಂದ ಸುಧಾರಿಸಬಹುದಾಗಿದೆ.

ಸಾಕು ನಾಯಿ ಜೊತೆಯಲ್ಲಿರುವುದರಿಂದ ಮನುಷ್ಯನಿಗೆ ಉತ್ತಮ ಭದ್ರತೆಯಿರುತ್ತದೆ. ಅನಾರೋಗ್ಯ ಪೀಡಿತರಿಗೆ ನಾಯಿಗಳು ಉತ್ತಮ ಸೇವೆ ಮಾಡುತ್ತವೆ. ಸಾಕು ನಾಯಿಗಳಿಗೆ ತರಬೇತಿ ನೀಡಿದರೇ ಅವುಳಿಂದ ಉತ್ತಮ ಸೇವೆ ಪಡೆಯಬಹುದಾಗಿದೆ.

ನಾಯಿಗಳು ಮತ್ತು ಬೆಕ್ಕುಗಳನ್ನು ಹೊಂದಿರುವ ಮಾನವರು ಕ್ವಾರಂಟೈನ್ ಟೈಮ್ ನಲ್ಲಿ ಉತ್ತಮ ಸಾಂಗತ್ಯ ಪಡೆಯಬಹುದಾಗಿದೆ. 

SCROLL FOR NEXT