ಸಂಗ್ರಹ ಚಿತ್ರ 
ಜೀವನಶೈಲಿ

ಕೊರೋನಾ ಆತಂಕದ ನಡುವೆ ಜನನಿಬಿಡ ಪ್ರದೇಶಗಳಲ್ಲಿ ವಾಕಿಂಗ್ ಮಾಡುವುದು ಹೇಗೆ? ಇಲ್ಲಿದೆ ಕೆಲವು ಟಿಪ್ಸ್!

ದೇಶದಲ್ಲಿ ಲಾಕ್ಡೌನ್ ನಿಯಮಗಳು ಸಡಿಲಗೊಳ್ಳುತ್ತಿದ್ದು, ಈಗಾಗಲೇ ಉದ್ಯಾನವನಗಳು, ಜಿಮ್, ಜಿಮ್'ಗಳು ಪುನರಾರಂಭಗೊಂಡಿವೆ. ಲಾಕ್ಡೌನ್ ನಿಯಮ ಸಡಿಲಗೊಂಡ ಮಾತ್ರಕ್ಕೆ ದೇಶದಲ್ಲಿ ಕೊರೋನಾ ಅಬ್ಬರ ಕಡಿಮೆಯಾಗಿದೆ ಎಂದು ತಿಳಿಯದಿರಿ. 

ದೇಶದಲ್ಲಿ ಲಾಕ್ಡೌನ್ ನಿಯಮಗಳು ಸಡಿಲಗೊಳ್ಳುತ್ತಿದ್ದು, ಈಗಾಗಲೇ ಉದ್ಯಾನವನಗಳು, ಜಿಮ್, ಜಿಮ್'ಗಳು ಪುನರಾರಂಭಗೊಂಡಿವೆ. ಲಾಕ್ಡೌನ್ ನಿಯಮ ಸಡಿಲಗೊಂಡ ಮಾತ್ರಕ್ಕೆ ದೇಶದಲ್ಲಿ ಕೊರೋನಾ ಅಬ್ಬರ ಕಡಿಮೆಯಾಗಿದೆ ಎಂದು ತಿಳಿಯದಿರಿ. 

ದೇಶದಲ್ಲಿನ್ನೂ ಮಹಾಮಾರಿ ಕೊರೋನಾ ವೈರಸ್ ಆರ್ಭಟ ಕಡಿಮೆಯಾಗಿಲ್ಲ. ಪ್ರತೀನಿತ್ಯ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಮಾಸ್ಕ್ ಧರಿಸದೇ ಹೊರಗೆ ಓಡಾಡುವುದು ಅತ್ಯಂತ ಅಪಾಯಕಾರಿಯಾಗಿದೆ. ಹಾಗೆಂದು ಕೊರೋನಾ ಸೋಂಕಿಗೆ ಹೆದರಿ ದಿನನಿತ್ಯದ ಚಟುವಟಿಕೆಗಳನ್ನು ನಡೆಸದೆ ಸುಮ್ಮನೆ ಕೂರುವುದೂ ಕೂಡ ಅಪಾಯಕಾರಿಯೇ ಆಗಿದ್ದು, ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯವಾಗಿದೆ. ದೇಹದ ಆರೋಗ್ಯ ಉತ್ತಮವಾಗಿರಲು ವಾಕಿಂಗ್ ಮಾಡುವುದು, ವ್ಯಾಯಾಮ ಮಾಡುವುದು ಮುಖ್ಯವಾಗಿದ್ದು, ಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಜನರ ಮಧ್ಯೆಯೂ ವಾಕಿಂಗ್, ವ್ಯಾಯಾಮ ಮಾಡುವುದು ಹೇಗೆ ಎಂಬುದರ ಕುರಿತು ಕೆಲ ಟಿಪ್ಸ್ ಇಂತಿವೆ...

  • ಸಾಮಾನ್ಯವಾಗಿ ನಡೆಯುವಾಗ ಅಥವಾ ಓಡುವಾಗ ಉಸಿರಾಟ ಹೆಚ್ಚಾಗಲಿದ್ದು, ಉದ್ಯಾನವನಗಳಲ್ಲಿ ವಾಕಿಂಗ್ ಮಾಡುವಾಗ 12-20 ಅಡಿಗಳಷ್ಟು ಅಂತರವನ್ನು ಕಾಯ್ದುಕೊಳ್ಳಿ. 
  • ಹೆಚ್ಚು ಜನರಿರುವ ಪ್ರದೇಶಗಳಿಗೆ ತೆರಳುವುದನ್ನು ಸಾಧ್ಯವಾದಷ್ಟು ನಿಯಂತ್ರಿಸಿ, ಕಡಿಮೆ ಜನರಿರುವ ಪ್ರದೇಶಗಳಿಗೆ ತೆರಳಿ ವಾಕಿಂಗ್ ಮಾಡಿ. 
  • ವಾಕಿಂಗ್ ಮಾಡುವಾಗ ಸಾಧ್ಯವಾದಷ್ಟು ಮಾತನಾಡುವುದನ್ನು ನಿಯಂತ್ರಿಸಿ. ಲಾಫ್ಟರ್ ಥೆರಪಿಗಳಿಂದ ದೂರವಿರಿ. ಗುಂಪಿನಲ್ಲಿ ವಾಕಿಂಗ್ ಮಾಡುವುದು ಉತ್ತಮವಲ್ಲ. ಸ್ವತಂತ್ರವಾಗಿ ವಾಕಿಂಗ್ ಮಾಡುವುದು ಉತ್ತಮ. 
  • ಉದ್ಯಾನವನಗಳಲ್ಲಿ ವಸ್ತು, ಗಿಡಗಳನ್ನು ಮುಟ್ಟುವುದನ್ನು ನಿಯಂತ್ರಿಸಿ. ನಿಮ್ಮೊಂದಿಗೆ ಸದಾಕಾಲ ಒಂದು ಸ್ಯಾನಿಟೈಸರ್ ಬಾಟಲಿ ಇಟ್ಟುಕೊಂಡಿರಿ. 
  • ಹೆಚ್ಚೆಚ್ಚು ಜನರು ಸೇರುವ ಶೌಚಾಲಯಗಳಲ್ಲಿ ಗಾಳಿಯ ಸಮಸ್ಯೆಯಿರುತ್ತದೆ. ಶೌಚಾಲಯದಲ್ಲಿ ಹೆಚ್ಚು ಜನರಿರುವ ಪ್ರದೇಶಗಳಲ್ಲಿ ಕೊರೋನಾ ಅತೀ ವೇಗವಾಗಿ ಹರಡುತ್ತದೆ. ಗಾಳಿ ಕಡಿಮೆಯಿರುವಂತಹ ಪ್ರದೇಶಗಳಲ್ಲಿ ವೈರಸ್ ಹೆಚ್ಚು ಸಕ್ರಿಯವಾಗಿರುತ್ತವೆ. ಇಂತಹ ಪ್ರದೇಶಗಳಿಗೆ ತೆರಳುವುದಕ್ಕೂ ಮುನ್ನ ಆಲೋಚಿಸಿ. 
  • ಸಾಮಾನ್ಯ ಗಾಳಿಯಲ್ಲಿ ಶೇ.21ರಷ್ಟು ಆಮ್ಲಜನಕವಿರುತ್ತದೆ. N95 ಮಾಸ್ಕ್ ಧರಿಸಿದಾಗ ಸಾಮಾನ್ಯ ಕೆಲಸ ಮಾಡುವ ವೇಳೆ ಯಾವುದೇ ಸಮಸ್ಯೆಗಳೂ ಆಗುವುದಿಲ್ಲ. ಆದರೆ, ಓಡುವಾಗ, ವೇಗವಾಗಿ ನಡೆಯುವಾಗ ಈ ಮಾಸ್ಕ್ ಧರಿಸಿದ್ದ ಸಂದರ್ಭದಲ್ಲಿ ಆಮ್ಲಜನಕ ಸಮಸ್ಯೆ ಎದುರಾಗುತ್ತದೆ. ಈ ವೇಳೆ ಆಮ್ಲಜನಕ ಪ್ರಮಾಣ ಶೇ. 17.5ಕ್ಕೆ ಅಥವಾ 18ಕ್ಕೆ ಇಳಿಯಬಹುದು. ಇಂಗಾಲದ ಡೈ ಆಕ್ಸೈಡ್ ಹೆಚ್ಚಾಗಬಹುದು. ಇದರಿಂದ ಉಸಿರಾಟ ಸಮಸ್ಯೆ ಎದುರಾಗಿ ಮರಣವನ್ನಪ್ಪುವ ಸಾಧ್ಯತೆಗಳಿರುತ್ತವೆ. 
  • ಇಂಗಾಲದ ಡೈ ಆಕ್ಸೈಡ್ನಲ್ಲಿರುವ ವಿಷತ್ವವು ತಲೆನೋವು, ದೃಷ್ಟಿ ಸಮಸ್ಯೆ, ನಿಶಕ್ತಿ, ಮಂಕಾಗವಂತಹ ಸಮಸ್ಯೆಗಳನ್ನುಂಟು ಮಾಡುತ್ತದೆ. ಧೂಮಪಾನ ಮಾಡುವವರು, ಅಸ್ತಮಾ, ಶ್ವಾಸಕೋಶ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಈ ಸಮಸ್ಯೆ ಹೆಚ್ಚಾಗಿ ಕಾಣಿಸುತ್ತದೆ. 
  • ವಾಕಿಂಗ್ ಮಾಡುವಾಗ, ಓಡುವಾಗ ಎನ್95 ಮಾಸ್ಕ್ ಧರಿವುದನ್ನು ನಿಯಂತ್ರಿಸುವುದು ಉತ್ತಮ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಎನ್95 ಮಾಸ್ಕ್ ಗಳಿಗೆ ಬದಲಾಗಿ ಸರ್ಜಿಕಲ್ ಮಾಸ್ಕ್ ಗಳನ್ನು ಬಳಕೆ ಮಾಡಬಹುದಾಗಿದೆ. 5-6 ಎಂಪಿಹೆಚ್ ವೇಗದಲ್ಲಿ ಓಡುವುದು ಉತ್ತಮ. ಮಧ್ಯೆ ಮಧ್ಯೆ ವಿಶ್ರಾಂತಿ ಪಡೆಯುವುದನ್ನು ಮರೆಯದಿರಿ. ಓಡುವಾಗ ಎಲ್ಲಿಯಾದರೂ ತಲೆತಿರುಗುವುದು, ತಲೆನೋವು ಕಾಣಿಸಿಕೊಂಡ ಕೂಡಲೇ ಕುಳಿತುಕೊಳ್ಳಿ. ಮಾಸ್ಕ್ ತೆರೆದು, ಆರಾಮವಾಗಿ ಉಸಿರಾಡಿ. 
  • ಮಧುಮೇಹಿಗಳು, ಹೃದಯ, ಶ್ವಾಸಕೋಶ ಸಮಸ್ಯೆ ಇರುವವರು ಈ ಸಂದರ್ಭದಲ್ಲಿ ಹೊರಗೆ ಬಾರದೇ ಇರುವುದು ಉತ್ತಮ. 
  • ಮಳೆ ಬರುವ ಸಂದರ್ಭದಲ್ಲಿ, ನೀರಿನ ಕೊಳಗಳಲ್ಲಿ ಸೊಳ್ಳೆಗಳು ಹೆಚ್ಚಾಗಿ ಇರಲಿದ್ದು, ಈ ಸಂದರ್ಭದಲ್ಲಿ ಮಲೇರಿಯಾ, ಡೆಂಗ್ಯೂ ಹೆಚ್ಚಾಗಬಹುದು. ವಾಕಿಂಗ್ ಮಾಡುವಾಗ ಉತ್ತಮ ವಾತಾವರಣ ಇರುವ ಕುರಿತು ಒಮ್ಮೆ ಪರಿಶೀಲನೆ ನಡೆಸುವುದು ಉತ್ತಮವಾಗಿರುತ್ತದೆ.
  • ಗಾಳಿ ಹೆಚ್ಚಾಗಿರುವ ಪ್ರದೇಶಗಳಲ್ಲಿ ವೈರಸ್ ಹರಡುವ ಪ್ರಮಾಣ ಕಡಿಮೆ ಇರುತ್ತದೆ ಎಂದು ಸಾಕಷ್ಟು ಅಧ್ಯಯನಗಳು ಹೇಳಿದ್ದು, ಜಿಮ್'ಗೆ ತೆರಳುವ ವೇಳೆ ಹೆಚ್ಚು ಗಾಳಿಯಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ. 
  • ಜಿಮ್‌ನಲ್ಲಿರುವ ಉಪಕರಣಗಳನ್ನು ನಿಯಮಿತ ಅಂತರದಲ್ಲಿ ಅಥವಾ ಒಬ್ಬರು ಬಳಸಿದ ಬಳಸಿದ ಬಳಿಕ ಸೋಂಕುರಹಿತದೊಂದಿಗೆ ಸ್ವಚ್ಛಗೊಳಿಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸುವುದು ಮುಖ್ಯ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT