ಸಂಗ್ರಹ ಚಿತ್ರ 
ಜೀವನಶೈಲಿ

ಮಹಿಳೆಯರ ಋತುಚಕ್ರದ ಮೇಲೆ ಕೊರೋನಾ ಪರಿಣಾಮ! ಇಲ್ಲಿದೆ ಮಾಹಿತಿ...

ಋತುಸ್ರಾವ ಅಥವಾ ಪೀರಿಯಡ್ಸ್ ಆದಾಗ ಒಬ್ಬೊಬ್ಬ ಹೆಣ್ಣುಮಕ್ಕಳಿಗೆ ಒಂದೊಂದು ರೀತಿ ಸಮಸ್ಯೆ ಕಾಣಿಸಿಕೊಂಡು, ತೊಂದರೆಯುಂಟಾಗುವುದು ಸಾಮಾನ್ಯ. ಅದರಲ್ಲೂ ಹಾರ್ಮೋನುಗಳ ಅಸಮತೋಲನ, ಅಧಿಕ ತೂಕ ಅಥವಾ ಕಡಿಮೆ ತೂಕ ಮತ್ತು ಜಡ ಜೀವನಶೈಲಿಯಿಂದ ಅನಿಯಮಿತ ಋತುಸ್ರಾವವಾಗುತ್ತದೆ.

ಋತುಸ್ರಾವ ಅಥವಾ ಪೀರಿಯಡ್ಸ್ ಆದಾಗ ಒಬ್ಬೊಬ್ಬ ಹೆಣ್ಣುಮಕ್ಕಳಿಗೆ ಒಂದೊಂದು ರೀತಿ ಸಮಸ್ಯೆ ಕಾಣಿಸಿಕೊಂಡು, ತೊಂದರೆಯುಂಟಾಗುವುದು ಸಾಮಾನ್ಯ. ಅದರಲ್ಲೂ ಹಾರ್ಮೋನುಗಳ ಅಸಮತೋಲನ, ಅಧಿಕ ತೂಕ ಅಥವಾ ಕಡಿಮೆ ತೂಕ ಮತ್ತು ಜಡ ಜೀವನಶೈಲಿಯಿಂದ ಅನಿಯಮಿತ ಋತುಸ್ರಾವವಾಗುತ್ತದೆ. ಇದರಿಂದಾಗಿ ದೇಹ ತೂಕ ಹೆಚ್ಚಾಗಬಹುದು. ಈ ಸಮಸ್ಯೆಯಿಂದ ಪಾರಾಗಲು ಜೀವನಶೈಲಿಯನ್ನು ಸುಧಾರಿಸುವುದು, ತೂಕ ಇಳಿಸುವುದು, ಆರೋಗ್ಯಕರ ಆಹಾರ ಸೇವನೆ ಮತ್ತು ಅನಿಯಮಿತ ಪಿರೆಡ್ಸ್ ಎದುರಿಸಲು ನಿಯಮಿತವಾಗಿ ವ್ಯಾಯಾಮ ಮಾಡುವುದು ಮುಖ್ಯವಾಗುತ್ತದೆ. 

ಕೊರೋನಾ ಸಾಂಕ್ರಾಮಿಕ ರೋಗ ದೇಶದ ಬೆನ್ನು ಬಿಡದಂತೆ ಕಾಡುತ್ತಿದ್ದು, ಈ ಸಂದರ್ಭದಲ್ಲಿ ಮಹಿಳೆಯರಲ್ಲಿ ಅನಿಯಮಿತ ಮುಟ್ಟಿನ ಸಮಸ್ಯೆಗಳು ಹೆಚ್ಚಾಗುತ್ತಿರುವ ಬೆಳವಣಿಗೆಗಳು ಕಂಡು ಬರುತ್ತಿವೆ. ಅನಿಯಮಿತ ಋತುಸ್ರಾವ, ಅಧಿಕ ರಕ್ತಸ್ರಾವ, ಅನಿಯಂತ್ರಿತ ರಕ್ತಸ್ರಾವ ಸಮಸ್ಯೆಗಳು ಕಂಡುಬಂದ ಕೂಡಲೇ ಮಹಿಳೆಯರು ತಜ್ಞ ವೈದ್ಯರನ್ನು ಕಾಣುವುದು ಉತ್ತಮ. 

ಭಾರತದಲ್ಲಿ 355 ಮಿಲಿಯನ್ ರಷ್ಟು ಮಹಿಳೆಯರು ಮುಟ್ಟಾಗುತ್ತಿದ್ದು. ಇದರಲ್ಲಿ ಶೇ.60ರಷ್ಟು ಮಹಿಳೆಯರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವರಿಗೆ ವೈದ್ಯಕೀಯ ಸಹಾಯದ ಅಗತ್ಯವಿದೆ. 

ಸಾಮಾನ್ಯ ಋತುಸ್ರಾವ ಎಂದರೇನು? 
ಋತುಚಕ್ರದ ಮೊದಲ ದಿನದಿಂದ ಮುಂದಿನ ಋತುಚಕ್ರದ ಮೊದಲ ದಿನದವರೆಗೆ, ಋತುಸ್ರಾವದ ನಡುವಿನ ಸಮಯವನ್ನು ಋತುಚಕ್ರ ಎಂದು ಕರೆಯಲಾಗುತ್ತದೆ ಮತ್ತು ಸಾಮಾನ್ಯವಾಗಿ ಇವು 21-35 ದಿನಗಳ ಅವಧಿಯಲ್ಲಿ ನಡೆಯುತ್ತವೆ.  ಮುಟ್ಟಾದ ಬಳಿಕ ಕೆಲವು ಮಹಿಳೆಯರಲ್ಲಿ 2-7 ದಿನಗಳ ಕಾರ ರಕ್ತಸ್ರಾವವಾಗುತ್ತದೆ. ಈ ಸಮಯದಲ್ಲಿ ಕೆಲವು ಮಹಿಳೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಕೆಲವರಲ್ಲಿ ನೋವು ಕಾಣಿಸಿಕೊಳ್ಳುವುದಿಲ್ಲ. ಗರ್ಭಧಾರಣೆಗೆ ಮಹಿಳೆಯರನ್ನು ಸಿದ್ಧಪಡಿಸುವಂತಹ ವಿಧಾನ ಇದಾಗಿದೆ. ಅಂಡಾಣುಗಳು ಫಲವತ್ತತೆ ಆಗದೆ ಇದ್ದರೆ ಆಗ ರಕ್ತಸ್ರಾವದ ಮೂಲಕವಾಗಿ ಇದು ಹೊರಗೆ ಹೋಗುತ್ತದೆ.

ಮಹಿಳೆಯರ ಋತುಚಕ್ರದ ಮೇಲೆ ಸಾಂಕ್ರಾಮಿಕ ರೋಗ ಹೇಗೆ ಪರಿಣಾಮ ಬೀರುತ್ತಿದೆ?
ಕೇವಲ ಭಾರತದಲ್ಲಷ್ಟೇ ಅಲ್ಲದೆ ವಿವಿಧ ಸಾಕಷ್ಟು ರಾಷ್ಟ್ರಗಳಲ್ಲಿಯೂ ಮಹಿಳೆಯರಲ್ಲಿ ಅನಿಯಮಿತ ಮುಟ್ಟಿನ ಸಮಸ್ಯೆ ಕಾಣಿಸಿಕೊಂಡಿರುವುದನ್ನು ಸಮೀಕ್ಷೆ ಹಾಗೂ ಆಧ್ಯಯನಗಳು ತಿಳಿಸಿವೆ. 

ಎವರ್ಟೀನ್ 2021 ರ 6 ನೇ ವಾರ್ಷಿಕ ಮುಟ್ಟಿನ ನೈರ್ಮಲ್ಯ ಸಮೀಕ್ಷೆಯು 41 ಪ್ರತಿಶತ ಮಹಿಳೆಯರು ಅನಿಯಮಿತ ಮುಟ್ಟಿನ ಸಮಸ್ಯೆಯಿಂದ ಬಳಲುತ್ತಿದ್ದಾರೆಂದು ತಿಳಿಸಿದೆ. ಈ ಪೈಕಿ ಶೇ.13.7 ರಷ್ಟು ಮಹಿಳೆಯರು ಮಾತ್ರ ಕೊರೋನಾ ಸೋಂಕಿಗೊಳಗಾಗಿದ್ದಾರೆಂದು ತಿಳಿಸಿದೆ. 

ಸಾಂಕ್ರಾಮಿಕ ರೋಗ ಕಾರಣದಿಂದಾಗಿ ಸಾಕಷ್ಟು ಮಹಿಳೆಯರು ಸೂಕ್ತ ಸಮಯಕ್ಕೆ ವೈದ್ಯಕೀಯ ಚಿಕಿತ್ಸೆಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಇದರಿಂದ ಸಮಸ್ಯೆಗಳು ಹೆಚ್ಚಾಗುತ್ತಿದೆ ಎಂದು ಹೇಳಲಾಗುತ್ತಿದೆ. ಮಹಿಳೆಯರಲ್ಲಿ ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್ (ಪಿಎಂಎಸ್) ಸಮಸ್ಯೆ ಹೆಚ್ಚಾಗುತ್ತಿದ್ದು, ಇದರಿಂದ ದೈಹಿಕ ಮತ್ತು ಭಾವನಾತ್ಮಕ ಸಾಮರ್ಥ್ಯ ಕಡಿಮೆಯಾಗುತ್ತಿದೆ ಎಂದು ಅಧ್ಯಯನಗಳು ವರದಿ ಮಾಡಿವೆ. 

ಒತ್ತಡ ಸಮಸ್ಯೆಗಳು ಋತುಚಕ್ರದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಜನರು ಉದ್ಯೋಗ ಕಳೆದುಕೊಳ್ಳುತ್ತಿದ್ದು, ಆರ್ಥಿಕ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಇದಲ್ಲದೆ, ಸೋಂಕು ತಗುಲುವ ಚಿಂತೆ ಹಾಗೂ ಕುಟುಂಬ ಸದಸ್ಯರನ್ನು ಕಳೆದುಕೊಳ್ಳುತ್ತಿರುವುದು ಒತ್ತಡವನ್ನು ಹೆಚ್ಚು ಮಾಡುತ್ತಿದೆ. ಗ್ರಾಮೀಣ ಭಾಗಗಳಲ್ಲಿ ಮಕ್ಕಳಿಗೆ ಜಾಗೃತಿ ಮೂಡಿಸುವುದರ ಜೊತೆಗೆ ಸ್ಯಾನಿಟರಿ ಸ್ಯಾಪ್ಕಿನ್ ಗಳನ್ನು ನೀಡಲಾಗುತ್ತಿತ್ತು. ಆದರೆ, ಸಾಂಕ್ರಾಮಿಕ ರೋಗ ಪರಿಣಾಮ ಆ ಕಾರ್ಯಕ್ರಮಗಳೆಲ್ಲಾ ಸ್ಥಗಿತಗೊಂಡಿವೆ. ಪರಿಣಾಮ ಮಕ್ಕಳು ಹಿಂದಿನ ಸಂಪ್ರದಾಯದಂತೆ ಬಟ್ಟೆ ಬಳಕೆ ಮುಂದುವರೆಸಿದ್ದಾರೆ. ಇನ್ನು ಮಹಿಳಾ ಆರೋಗ್ಯ ಕಾರ್ಯಕರ್ತರು ಮುಟ್ಟು ಸಮಯದಲ್ಲಿ ನ್ಯಾಪ್ಕಿನ್ ಗಳನ್ನು ಬದಲಾಯಿಸಲು ಸಾಧ್ಯವಾಗದೆ ಸಮಸ್ಯೆ ಅನುಭವಿಸುತ್ತಿದ್ದಾರೆ. 

ಸಮಸ್ಯೆಯನ್ನು ಯಾವ ರೀತಿ ಪರಿಹರಿಸಿಕೊಳ್ಳಬಹುದು? 
ಸಾಂಕ್ರಾಮಿಕ ರೋಗ ಸವಾಲಿನ ಸಮಯವಾಗಿದ್ದು, ಇಂತಹ ಸಮಯದಲ್ಲಿ ಒತ್ತಡದಿಂದ ಮುಟ್ಟಿನ ಸಮಸ್ಯೆ ಎದುರಾಗುವುದು ಸಾಮಾನ್ಯವಾಗಿದೆ. ಆದರೆ, ಈ ಸಮಸ್ಯೆ ಗಂಭೀರವಾಗಿದ್ದರೆ, ಮಹಿಳೆಯರು ಕೂಡಲೇ ತಜ್ಞ ವೈದ್ಯರನ್ನು ಸಂಪರ್ಕಿಸಬೇಕು. ಕೆಲವು ಪ್ರದೇಶಗಳಲ್ಲಿ ಆರೋಗ್ಯ ವ್ಯವಸ್ಥೆಗಳಿಲ್ಲದೇ ಇರಬಹುದು ಆದರೆ, ಈ ಸಮಯದಲ್ಲಿ ವಿಳಂಬ ಮಾಡದೆ ದೂರವಾಣಿ ಮೂಲಕ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳುವ ಪ್ರಯತ್ನಗಳನ್ನು ಮಾಡಬೇಕು. ಇಂಟರ್ನೆಟ್ ಬಳಕೆ ವ್ಯವಸ್ಥೆ ಹೊಂದಿರುವವರು ಆನ್'ಲೈನ್ ಮೂಲಕವೂ ವೈದ್ಯರನ್ನು ಸಂಪರ್ಕಿಸಬಹುದು. ಸೂಕ್ತ ಸಮಯದಲ್ಲಿ ವೈದ್ಯರ ಸಂಪರ್ಕ ಮಾಡುವುದರಿಂದ ಗಂಭೀರ ಸಮಸ್ಯೆಗಳಾಗುವುದನ್ನು ತಡೆಯಬಹುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

SCROLL FOR NEXT