ಜೀವನಶೈಲಿ

ಕ್ಯಾರೆಟ್ ಮತ್ತು ಅದರ ಜ್ಯೂಸ್‌ ಸೇವನೆಯ ಉಪಯೋಗಗಳು! ಚರ್ಮದ ಹೊಳಪಿಗೆ ಸಹಕಾರಿ!

Vishwanath S

ಚಳಿಗಾಲ ಪ್ರಾರಂಭವಾದ ತಕ್ಷಣ ಕ್ಯಾರೆಟ್ ಕೂಡ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಇದು ಶಾಖಾಹಾರಿಗಳಿಗೆ ಹೇಳಿ ಮಾಡಿಸಿದ ಆಹಾರವಾಗಿದೆ. ಇದು ವರ್ಷವಿಡಿ ಸುಲಭವಾಗಿ ದೊರೆಯುತ್ತದೆ. ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಬಿ ನಂತಹ ಮಿಟಮಿನ್‌ಗಳಿವೆ.

ಪ್ರತಿದಿನ ಕ್ಯಾರೆಟ್ ಅಥವಾ ಅದರ ಜ್ಯೂಸ್​ನನ್ನು ಸೇವಿಸುವುದರಿಂದ ಹಲವಾರು ಆರೋಗ್ಯಕಾರಿ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಇದರಿಂದ ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಸಮಸ್ಯೆಗಳನ್ನು ನಿವಾರಿಸಬಹುದಂತೆ.

1. ಪ್ರತಿದಿನ ಕ್ಯಾರೆಟ್ ತಿನ್ನುವುದರಿಂದ ಅಥವಾ ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ಹೊಳೆಯುವ ಚರ್ಮ ನಿಮ್ಮದಾಗುತ್ತದೆ. ಏಕೆಂದರೆ ಕ್ಯಾರೆಟ್‌ ಟಾಕ್ಸಿನ್‌ಗಳನ್ನು ಕಡಿಮೆ ಮಾಡುತ್ತದೆ ಮತ್ತು ಜೀವಕೋಶಗಳು ಸಾಯುವುದನ್ನು ತಡೆಯುತ್ತದೆ. ಇದರಿಂದಾಗಿ ಚರ್ಮವು ಆರೋಗ್ಯಕರವಾಗಿ ಕಾಣುತ್ತದೆ.

2. ಕ್ಯಾರೆಟ್​​ನಲ್ಲಿ ಶೇ. 10ರಷ್ಟು ಕಾರ್ಬೊಹೈಡ್ರೇಟ್ ಇದೆ. ಅಷ್ಟೇ ಅಲ್ಲದೇ ವಿಟಮಿನ್ ಎ, ಡಿ, ಇ, ಕೆ, ಪಿಪಿ, ಆಸ್ಕಾರ್ಬಿಕ್ ಆಸಿಡ್, ಸ್ಟೆರಾಲ್ ಮತ್ತು ಲೆಸಿತಿನ್ ಅಂಶವಿದೆ.

3. ಕ್ಯಾರೆಟ್‌ನಲ್ಲಿ ವಿಟಮಿನ್ ಎ ಅಧಿಕವಾಗಿರುವುದರಿಂದ ಇದನ್ನು ನಿಯಮಿತವಾಗಿ ಸೇವಿಸುವುದರಿಂದ ದೃಷ್ಟಿ ಸುಧಾರಿಸುತ್ತದೆ.

4. ಕ್ಯಾರೆಟ್​​ನಲ್ಲಿ ಫೈಬರ್ ಹೇರಳವಾಗಿದ್ದು, ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಿದೆ. ಇದು ದೇಹದ ಜೀರ್ಣಕ್ರಿಯೆಯ ಆರೋಗ್ಯವನ್ನು ಕಾಪಾಡುತ್ತದೆ.

5. ಪ್ರತಿನಿತ್ಯ ಕ್ಯಾರೆಟ್ ತಿನ್ನುವುದರಿಂದ ವಸಡಿನ ರಕ್ತಸ್ರಾವವನ್ನು ನಿಲ್ಲಿಸಬಹುದು ಮತ್ತು ಇದರಿಂದ ನೀವು ಹೊಳೆಯುವ ಹಲ್ಲುಗಳನ್ನು ಪಡೆಯಬಹುದು.

6. ಕ್ಯಾರೆಟ್ ಜ್ಯೂಸ್‌ಗೆ ಸಕ್ಕರೆ ಮತ್ತು ಕಾಳುಮೆಣಸು ಬೆರೆಸಿ ಕುಡಿಯುವುದರಿಂದ ಕೆಮ್ಮು ನಿವಾರಣೆಯಾಗುತ್ತದೆ ಮತ್ತು ಕಫದಿಂದಲೂ ಪರಿಹಾರ ಸಿಗುತ್ತದೆ.

7. ಬೀಟ್ ಕ್ಯಾರೋಟೀನ್ ಕೇವಲ ಕಣ್ಣಿನ ದೃಷ್ಟಿಗೆ ಮಾತ್ರವಲ್ಲ, ಮೆದುಳಿನ ಕ್ಷಮತೆ ಹೆಚ್ಚಿಸಲೂ ನೆರವಾಗುತ್ತದೆ. ವಯಸ್ಸಾದಂತೆ ಎದುರಾಗುವ ಸ್ಮರಣ ಶಕ್ತಿ ಕುಂದುವುದು, ಮರೆಗುಳಿತನ, ಅಲ್ಜೀಮರ್ಸ್ ಕಾಯಿಲೆ ಮೊದಲಾದವುಗಳು ಎದುರಾಗುವ ಸಾಧ್ಯತೆಯನ್ನು ಕ್ಯಾರೆಟ್ ಸೇವನೆಯಿಂದ ತಗ್ಗಿಸಬಹುದು.

SCROLL FOR NEXT