ಜೀವನಶೈಲಿ

ಮತ್ತೆಮತ್ತೆ ಕೋವಿಡ್ ಸೋಂಕು ಆಗುವುದರಿಂದ ಅಂಗಾಂಗ ವೈಫಲ್ಯ, ಸಾವಿನ ಅಪಾಯ ಹೆಚ್ಚು!

Srinivas Rao BV

ನೆವದೆಹಲಿ: ಕೋವಿಡ್ ಸೋಂಕು ಮರುಕಳಿಸುವುದರಿಂದ ಅಂಗಾಂಗ ವೈಫಲ್ಯ, ಸಾವಿನ ಅಪಾಯ ಇದೆ ಎಂದು ಹೊಸ ಅಧ್ಯಯನ ವರದಿಯೊಂದು ಹೇಮ್ಳರುದೆ.
 
ಈ ಹಿನ್ನೆಲೆಯಲ್ಲಿ ಜನತೆ ಸೋಂಕು ಮರುಕಳಿಸದಂತೆ ಎಚ್ಚರ ವಹಿಸುವುದು ಸೂಕ್ತ ಎಂದು ಅಧ್ಯಯನ ವರದಿ ಸಲಹೆ ನೀಡಿದೆ. 

ನೇಚರ್ ಮೆಡಿಸನ್ ಎಂಬ ಜರ್ನಲ್ ನಲ್ಲಿ ಈ ಅಧ್ಯಯನ ವರದಿ ಪ್ರಕಟವಾಗಿದ್ದು,  ಸೋಂಕು ಮರುಕಳಿಸಿದರೆ, ಶ್ವಾಸಕೋಶ, ಹೃದಯ, ಮೆದುಳು, ರಕ್ತ, ಮಸ್ಕ್ಯುಲೋಸ್ಕೆಲಿಟಲ್ ಮತ್ತು ಜೀರ್ಣಾಂಗವ್ಯೂಹದ ವ್ಯವಸ್ಥೆಗಳ ಮೇಲೆ ಪರಿಣಾಮ ಉಂಟಾಗಲಿದ್ದು, ಸಾವು ಸಂಭವಿಸುವ ಸಾಧ್ಯತೆಗಳಿವೆ ಎಂದು ಸಂಶೋಧಕರು ಹೇಳಿದ್ದಾರೆ.
 
ಇದಷ್ಟೇ ಅಲ್ಲದೇ ಸೋಂಕು ಮರುಕಳಿಸಿದರೆ, ಅದರಿಂದ ಮಧುಮೇಹ, ಕಿಡ್ನಿ ಸಮಸ್ಯೆ, ಮಾನಸಿಕ ಆರೋಗ್ಯ ಸಮಸ್ಯೆಗಳು ಉಂಟಾಗಲಿವೆ. ಈಗಾಗಲೇ ಕೋವಿಡ್-19 ನ್ನು ಎದುರಿಸುತ್ತಿರುವ ಮಂದಿ ಹಾಗೂ ಕೋವಿಡ್-19 ಗೆ ಲಸಿಕೆ ಪಡೆದುಕೊಳ್ಳುತ್ತಿರುವವರು, ಕೋವಿಡ್-19 ಸೋಂಕು ತಗುಲಿ ನಂತರ ಲಸಿಕೆ ಪಡೆದವರ ಪೈಕಿ ಹಲವು ಮಂದಿಗೆ ತಮಗೇನು ಆಗುವುದಿಲ್ಲ ಎಂಬ ಭಾವನೆ ಇದ್ದು ಇಂಥವರನ್ನು ಸೂಪರ್ ಇಮ್ಯುನಿಟಿ ಹೊಂದಿರುವ ಮಂದಿ ಎಂದು ಜನರೂ ಭಾವಿಸಲು ಆರಂಭಿಸಿದ್ದಾರೆ ಎಂದು ಅಮೇರಿಕಾದ ವಾಷಿಂಗ್ಟನ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ ನ ಹಿರಿಯ ಅಧ್ಯಯನ ಲೇಖಕ ಜಿಯಾದ್ ಅಲ್-ಅಲಿ ತಿಳಿಸಿದ್ದಾರೆ. 
 

SCROLL FOR NEXT