ಜೀವನಶೈಲಿ

ದೈಹಿಕ ಆಯಾಸದಂತೆ ಮಿದುಳಿನ ಬಳಲುವಿಕೆಯನ್ನು ತಡೆಯುವುದು ಹೇಗೆ, ಇಲ್ಲಿವೆ ಕೆಲವು ಸಲಹೆಗಳು

Ramyashree GN

ದೈಹಿಕ ಆಯಾಸದಿಂದ ಚೇತರಿಸಿಕೊಳ್ಳುವುದು ಸಾಧ್ಯ. ಆದರೆ, ನಿಮ್ಮ ಮಿದುಳಿನಲ್ಲಿ ಕ್ರಿಯಾತ್ಮಕ ಬದಲಾವಣೆಯನ್ನು ಉಂಟುಮಾಡುವ ಮಾನಸಿಕ ಬಳಲಿಕೆಯನ್ನು ಜಯಿಸುವುದು ಹೇಗೆ?, ಅದು ಪ್ರಿಫ್ರಂಟಲ್ ಕಾರ್ಟೆಕ್ಸ್‌ನಲ್ಲಿ ವಿಷಕಾರಿ ಉಪಉತ್ಪನ್ನಗಳ ತ್ವರಿತ ಶೇಖರಣೆಗೆ ಕಾರಣವಾಗುತ್ತದೆ. ಇದು ಸ್ಪಷ್ಟವಾಗಿ ಯೋಚಿಸುವ ನಿಮ್ಮ ಸಾಮರ್ಥ್ಯವನ್ನು ಬದಲಾಯಿಸುವುದಿಲ್ಲ. ಆದರೆ, ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಹೀಗಾಗಿ, ಗುರುಗ್ರಾಮ ಮೂಲದ ಕಾಗ್ನಿಟಿವ್ ಬಿಹೇವಿಯರಲ್ ಥೆರಪಿಸ್ಟ್ ಪ್ರೀತಿ ಸೂದ್ ಮಾನಸಿಕ ಬಳಲಿಕೆಯಿಂದ ಚೇತರಿಸಿಕೊಳ್ಳುವ ಮೂರು ಪರಿಣಾಮಕಾರಿ ಮಾರ್ಗಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದಾರೆ.

ಮಿದುಳಿನ ಬಳಲುವಿಕೆ (ಬ್ರೈನ್ ಬರ್ನೌಟ್) ಎಂದರೆ ದೀರ್ಘಕಾಲದ ಒತ್ತಡದಿಂದ ಉಂಟಾಗುವ ಭಾವನಾತ್ಮಕ, ದೈಹಿಕ ಮತ್ತು ಮಾನಸಿಕ ಬಳಲಿಕೆಯ ಸ್ಥಿತಿ.

ದಿನದಲ್ಲಿ ನಿಮಗೆ ಅತ್ಯಂತ ಶಕ್ತಿಯುತ ಸಮಯ ಯಾವುದೆಂದು ಗುರುತಿಸಿ. ಇದು ಬೆಳಗಿನ ಸಮಯ ಎಂದು ಭಾವಿಸಬೇಡಿ. ಏಕೆಂದರೆ, ಅದು ಎಲ್ಲರಿಗೂ ಭಿನ್ನವಾಗಿರುತ್ತದೆ. ಉದಾಹರಣೆಗೆ, ಕೆಲವು ಜನರು ಮಧ್ಯಾಹ್ನದ ಸಮಯದಲ್ಲಿ ಹೆಚ್ಚು ಲವಲವಿಕೆಯಿಂದ ಕೂಡಿದ್ದರೆ, ಬಹುಪಾಲು ಜನರು ಲವಲವಿಕೆಯಿಂದಿರುವುದಿಲ್ಲ. ಹೀಗೆ ನಿಮ್ಮ ಸಮಯ ಯಾವುದೆಂದು ನೀವು ಕಂಡುಕೊಂಡ ಬಳಿಕ, ನಿಮಗೆ ಕಷ್ಟ ಎನಿಸುವ ಕೆಲಸಗಳತ್ತ ಗಮನಹರಿಸಿ. ಅಲ್ಲದೆ, ನೀವು ಆ ಕೆಲಸಕ್ಕೆ ಕುಳಿತಾಗ, ಅದನ್ನು ಸಣ್ಣ ಭಾಗಗಳನ್ನಾಗಿ ಮಾಡಿಕೊಳ್ಳಿ ಮತ್ತು ಒಂದು ಸಣ್ಣ ಭಾಗ ಪೂರ್ಣಗೊಂಡ ಬಳಿಕ ಎದ್ದೇಳಿ.

ತ್ವರಿತ ವರ್ಕೌಟ್ ಮಾಡಿ. ಅದು ಮೆಟ್ಟಿಲುಗಳನ್ನು ಹತ್ತಿ ಇಳಿಯುವುದು ಅಥವಾ ಸ್ಕ್ವಾಟ್ಸ್‌ಗಳನ್ನು ಮಾಡುತ್ತಿರಲಿ, ಸ್ಥಳದಲ್ಲೇ ಜಾಗಿಂಗ್ ಅಥವಾ ಸ್ಟ್ರೆಚಿಂಗ್ ಮಾಡುತ್ತಿರಲಿ. ಹೀಗೆ ಯಾವುದೇ ರೀತಿಯ ದೈಹಿಕ ಚಟುವಟಿಕೆಯು ಮೆದುಳಿನಿಂದ ಉತ್ಪತ್ತಿಯಾಗುವ ಎಂಡಾರ್ಫಿನ್‌ಗಳನ್ನು ಅಥವಾ ಉತ್ತಮ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ. ನೋವು ಅಥವಾ ಒತ್ತಡವನ್ನು ನಿಭಾಯಿಸಲು ಮತ್ತು ನಿಮ್ಮ ಯೋಗಕ್ಷೇಮದ ಪ್ರಜ್ಞೆಯನ್ನು ಸುಧಾರಿಸಲು ಇವು ನಿಮಗೆ ಸಹಾಯ ಮಾಡುತ್ತವೆ.

ದೀರ್ಘಕಾಲದ ವಿರಾಮಗಳನ್ನು ತೆಗೆದುಕೊಳ್ಳದಿರಿ. ಆದರೆ, ಆಗಾಗ್ಗೆ ಸಣ್ಣ ವಿರಾಮಗಳನ್ನು ತೆಗೆದುಕೊಳ್ಳಿ. ಕೆಲಸಕ್ಕೆ ಕುಳಿತುಕೊಳ್ಳುವ ಪ್ರತಿ 90 ನಿಮಿಷಗಳಿಗೊಮ್ಮೆ 20 ನಿಮಿಷಗಳ ವಿರಾಮ ತೆಗೆದುಕೊಳ್ಳುವುದು ಉತ್ತಮ ಅಭ್ಯಾಸ. ಆದಾಗ್ಯೂ, ಪ್ರತಿ 20 ನಿಮಿಷಗಳಿಗೊಮ್ಮೆ ಐದು ನಿಮಿಷಗಳ ವಿರಾಮವು ಮಿದುಳಿನ ಬಳಲುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ. ಈ ಕಡಿಮೆ ಸಮಯದಲ್ಲಿ ಸ್ವಲ್ಪ ನೈಸರ್ಗಿಕ ಬೆಳಕನ್ನು ಪಡೆಯಲು ಪ್ರಯತ್ನಿಸಿ.

SCROLL FOR NEXT