ಸೆಹ್ವಾಗ್, ಜಹೀರ್ ಖಾನ್, ಕುಮಾರ ಸಂಗಕ್ಕಾರ
ಐಸಿಸಿ ವಿಶ್ವಕಪ್ 2015ರ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಘಟಾನುಗಟಿ ಆಟಗಾರರು ವಿದಾಯ ಘೋಷಿಸಿದ್ದಾರೆ.
2015ರ ವಿಶ್ವಕಪ್ ನ್ನು ಆಸ್ಟ್ರೇಲಿಯಾ ಗೆದ್ದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಹಾಗೂ ವೇಗಿ ಜಹೀರ್ ಖಾನ್, ಆಸ್ಟ್ರೇಲಿಯಾದ ವೇಗಿ ಮಿಚೆಲ್ ಕ್ಲಾರ್ಕ್, ಶ್ರೀಲಂಕಾ ಬ್ಯಾಟ್ಸ್ ಮನ್ ಕುಮಾರ್ ಸಂಗಾಕ್ಕಾರ ವಿದಾಯ ಘೋಷಿಸಿದ್ದರು.
ವೀರೇಂದ್ರ ಸೆಹ್ವಾಗ್ ತಮ್ಮ 16 ವರ್ಷಗಳ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದರು. ಟೀಂ ಇಂಡಿಯಾ ಎರಡನೇ ಬಾರಿಗೆ 2011ರಲ್ಲಿ ವಿಶ್ವಕಪ್ ಗೆದ್ದ ತಂಡದಲ್ಲಿದ್ದ ಸೆಹ್ವಾಗ್ ಇದ್ದರು. ಇಂದು ಟ್ವಿಟರ್ ನಲ್ಲಿ ಸೆಹ್ವಾಗ್ ವಿದಾಯ ಘೋಷಿಸಿದ್ದರು. 251 ಏಕದಿನ ಪಂದ್ಯಗಳನ್ನು ಆಡಿದ್ದ ಸೆಹ್ವಾಗ್ 35.05 ಸರಾಸರಿಯಲ್ಲಿ 8273 ರನ್ ಗಳನ್ನು ಸಿಡಿಸಿದ್ದಾರೆ. ಇದರಲ್ಲಿ 15 ಶತಕ ಹಾಗೂ 38 ಅರ್ಧಶತಕ ಕೂಡಿವೆ. 104 ಟೆಸ್ಟ್ ಪಂದ್ಯಗಳನ್ನು ಆಡಿದ್ದ ಸೆಹ್ವಾಗ್ 8586 ರನ್ ಗಳನ್ನು ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ಎರಡು ಬಾರಿ ತ್ರಿಶತಕ ಸಿಡಿಸಿದ ಹೆಗ್ಗಳಿಕೆ ಸೆಹ್ವಾಗ್ ಗಿದೆ. 23 ಶತಕ. 32 ಅರ್ಧಶತಕ ಸಿಡಿಸಿದ್ದಾರೆ. 19 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದ ಸೆಹ್ವಾಗ್ 394 ರನ್ ಗಳಿಸಿದ್ದು, ಎರಡು ಅರ್ಧ ಶತಕ ಸಿಡಿಸಿದ್ದರು.
ಇಂಗ್ಲೆಂಡ್ ವಿರುದ್ಧದ ಆಶಸ್ ಟೆಸ್ಟ್ ಸರಣಿ ಸೋಲಿನ ಬೆನ್ನಲ್ಲೇ ಆಸ್ಟ್ರೇಲಿಯಾ ನಾಯಕ ಮೈಕಲ್ ಕ್ಲಾರ್ಕ್ ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದರು. ಆಶಸ್ ಟೆಸ್ಟ್ ಸರಣಿಯ ಕೊನೆಯ ಹಾಗೂ 5 ನೇ ಪಂದ್ಯದ ಬಳಿಕ ಕ್ಲಾರ್ಕ್ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಆ ಮೂಲಕ ಕ್ರಿಕೆಟ್‌ನ ಎಲ್ಲ ಆವೃತ್ತಿಗಳಿಗೂ ಕ್ಲಾರ್ಕ್ ವಿದಾಯ ಹೇಳಿದಂತಾಗಲಿದೆ. ಈಗಾಗಲೇ ಕ್ಲಾರ್ಕ್ ಏಕದಿನ ಹಾಗೂ ಟಿ-20 ಕ್ರಿಕೆಟ್ ಜೀವನಕ್ಕೆ ಗುಡ್‌ಬೈ ಹೇಳಿದ್ದರು. ಆಸ್ಟ್ರೇಲಿಯಾದ ನಾಯಕನಾಗಿ ಮೈಕಲ್ ಕ್ಲಾಕ್ ತಂಡವನ್ನು ಮುನ್ನಡೆಸಿದ್ದರು. 114 ಟೆಸ್ಟ್ ಹಾಗೂ 245 ಏಕದಿನ ಪಂದ್ಯಗಳಲ್ಲಿ ಕ್ಲಾಕ್ ಆಡಿದ್ದಾರೆ.
ಜಹೀರ್ ಖಾನ್ ಟೀಂ ಇಂಡಿಯಾ ಪರ 92 ಟೆಸ್ಟ್, 200 ಏಕದಿನ ಹಾಗೂ 17 ಟಿ20 ಪಂದ್ಯವಾಡಿದ್ದಾರೆ. 2014ರ ಫೆಬ್ರವರಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ಬಳಿಕ ಸಂಪೂರ್ಣವಾಗಿ ರಾಷ್ಟ್ರೀಯ ತಂಡದಿಂದ ಹೊರಬಿದ್ದಿದ್ದರು. ಟೆಸ್ಟ್ನಲ್ಲಿ 311 ವಿಕೆಟ್ ಉರುಳಿಸಿರುವ ಜಹೀರ್, ಗರಿಷ್ಠ ವಿಕೆಟ್ ಉರುಳಿಸಿದ ಭಾರತದ 4ನೇ ಬೌಲರ್ ಎನ್ನುವ ಶ್ರೇಯ ಹೊಂದಿದ್ದಾರೆ. 2011ರಲ್ಲಿ ಭಾರತದ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜಹೀರ್ ಟೂರ್ನಿಯಲ್ಲಿ 21 ವಿಕೆಟ್ ಉರುಳಿಸಿದ್ದರು.
ಆಸ್ಟ್ರೇಲಿಯಾದ ವೇಗಿ ಮಿಚೆಲ್ ಜಾನ್ಸನ್ ಆಗಸ್ಟ್ 23ರ 2015ರಲ್ಲಿ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳುವ ಮೂಲಕ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಅಂತ್ಯವಾಡಿದರು. 153 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನಾಡಿರುವ ಜಾನ್ಸನ್ 239 ವಿಕೆಟ್ ಸಂಪಾದಿಸಿದ್ದು, 951 ರನ್ ಸಿಡಿಸಿದ್ದಾರೆ. 72 ಟೆಸ್ಟ್ ಪಂದ್ಯಗಳನ್ನಾಡಿರುವ ಮಿಚೆಲ್ ಜಾನ್ಸನ್ 310 ವಿಕೆಟ್ ಸಂಪಾದಿಸಿ, 2034 ರನ್ ಗಳಿಸಿದ್ದಾರೆ.