ಮಹಾಶಿವರಾತ್ರಿ

ಭಾರತದ ಹನ್ನೆರೆಡು ಜ್ಯೋತಿರ್ಲಿಂಗ ಕ್ಷೇತ್ರಗಳು

Vishwanath S

ಭಾರತದಲ್ಲಿನ ಪ್ರಮುಖ ಶಿವಸ್ಥಾನಗಳೆಂದರೆ ಹನ್ನೆರಡು ಜ್ಯೋತಿರ್ಲಿಂಗಗಳು. ಅವು ತೇಜಸ್ವಿ ರೂಪದಲ್ಲಿ ಉತ್ಪನ್ನವಾದವು. ಹೀಗೆ ಶಿವ ಭಕ್ತರು ಭಾರತದ ಎಲ್ಲಾ ಕಡೆ ಇದ್ದಾರೆ. ಉತ್ತರದಿಂದ ದಕ್ಷಿಣದವರೆಗೆ ಶಿವನ ಅನೇಕ ದೇವಾಲಯಗಳಿವೆ.

ಗುಜರಾತಿನ ಕಾಠಿಯಾವಾಡದಲ್ಲಿರುವ ಸೋಮನಾಥ
12 ಜ್ಯೋತಿರ್ಲಿಂಗಗಳಲ್ಲಿ ಗುಜರಾತ್ ನ ಸೋಮನಾಥದಲ್ಲಿರುವ ದೇವಾಲಯವನ್ನು ಚಿರಂತನ, ಅಮರ ದೇಗುಲ' ಎಂದೂ ಕರೆಯಲ್ಪಡುತ್ತದೆ. ಈ ದೇವಸ್ಥಾನವು ನಾಶಗೊಳಿಸಲ್ಪಟ್ಟು ಮತ್ತೆ ಪುನಃ 7 ಬಾರಿ ಪುನರ್ನಿರ್ಮಾಣಗೊಂಡಿತು. ಈ ದೇವಸ್ಥಾನವು ಚಂದ್ರ ದೇವನಾದ ಸೋಮನಿಂದ ಚಿನ್ನದಲ್ಲಿ ಕಟ್ಟಲ್ಪಟ್ಟು, ಸೂರ್ಯ ದೇವನಾದ ರವಿಯಿಂದ ಬೆಳ್ಳಿಯಲ್ಲಿ ಕಟ್ಟಲ್ಪಟ್ಟು, ಭಗವಾನ್ ಕೃಷ್ಣನಿಂದ ಕಟ್ಟಿಗೆಯಲ್ಲಿ ಕಟ್ಟಲ್ಪಟ್ಟು, ತದನಂತರ ಸೋಲಂಕಿ ರಾಜಪೂತರಿಂದ ಶಿಲೆಯಲ್ಲಿ 11ನೇಯ ಶತಮಾನದಲ್ಲಿ ಕಟ್ಟಲ್ಪಟ್ಟಿತು.  ಕೊನೆಯ ಬಾರಿಯ ಪುನರ್ನಿರ್ಮಾಣವು 1951 ರಲ್ಲಿ ಆಯಿತು. ಈ ದೇವಸ್ಥಾನದ ಅಪಾರ ಶ್ರೀಮಂತಿಕೆ ಮತ್ತು ಉಜ್ವಲ ಕೀರ್ತಿಯು, ಈ ದೇವಸ್ಥಾನವು ಅನೇಕ ಬಾರಿ ದಾಳಿಗೊಳಗಾಗುವಂತೆ ಮಾಡಿತು.  ಈ ದೇವಸ್ಥಾನವು ಇಲ್ಲಿರುವ ಅದ್ಬುತವಾದ ಕೆತ್ತನೆ, ಬೆಳ್ಳಿಯ ಬಾಗಿಲುಗಳು, ನಂದಿಯ ಪ್ರತಿಮೆ, ಮತ್ತು ಕೇಂದ್ರ ಸ್ಥಾನದಲ್ಲಿರುವ ಶಿವಲಿಂಗಕ್ಕಾಗಿ ಬಹಳ ಪ್ರಸಿದ್ಧಿಯನ್ನು ಹೊಂದಿದೆ.  ಕಾರ್ತಿಕ್ ಪೂರ್ಣಿಮ ಹಬ್ಬವು, ದೇವಸ್ಥಾನವು ಜನಜಂಗುಳಿಯಿಂದ ತುಂಬಿರುವ ಒಂದು ಸಂದರ್ಭವಾಗಿದೆ. ಇದು ಹಿಂದೂ ಪಂಚಾಂಗದ ಪ್ರಕಾರ ಕಾರ್ತಿಕ್ ಸುದಾದ 14 ರಂದು ಆರಂಭಗೊಂಡು 4 ದಿನಗಳ ಪರ್ಯಂತ ನಡೆಯುತ್ತದೆ.

ಆಂಧ್ರ ಪ್ರದೇಶದ ಶ್ರೀಶೈಲದಲ್ಲಿರುವ ಮಲ್ಲಿಕಾರ್ಜುನ
ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯ ನಂದಿಕೊಟಕೂರು ತಾಲೂಕಿನ ನಲ್ಲಮಲೈ ಪರ್ವತ ಶ್ರೇಣಿಯ ದಟ್ಟ ಕಾನನದ ಮಧ್ಯದಲ್ಲಿ ಕೃಷ್ಣಾನದಿಯ ದಕ್ಷಿಣ ಭಾಗದಲ್ಲಿರುವ ಪ್ರಸಿದ್ಧ ಶೈವ ಕ್ಷೇತ್ರವೇ ಶ್ರೀಶೈಲ ಮಲ್ಲಿಕಾರ್ಜುನ. ಇಲ್ಲಿ ಹರಿಯುವ ಕೃಷ್ಣಾ ನದಿಯು ಆಳವಾದ ಕಮರಿಯಲ್ಲಿ ಹರಿದು ಬರುವುದರಿಂದ ತುಂಬಾ ರುದ್ರ ಭಯಾನಕವಾಗಿದೆ. ಇದನ್ನೇ ಪಾತಾಳ ಗಂಗೆ ಎಂದು ಕರೆಯುತ್ತಿದ್ದರು. ಈ ಕ್ಷೇತ್ರದ ಅಧಿದೇವತೆಗಳು ಶ್ರೀ ಮಲ್ಲಿಕಾರ್ಜುನ, ಭ್ರಮರಾಂಬೆಯರು. ಮಲ್ಲಿಕಾರ್ಜುನ ಭ್ರಮರಾಂಬ ದೇವಸ್ಥಾನಗಳಿವೆ. ಪ್ರಾಚೀನ ಕಾಲದಿಂದಲೂ ಶ್ರೀಶೈಲ ಯಾತ್ರೆಯು ಮೋಕ್ಷದಾಯಕವೆಂದು ಭಕ್ತರ ನಂಬಿಕೆ. ಉತ್ತರದಲ್ಲಿ ಕಾಶಿಯಂತೆಯೇ ದಕ್ಷಿಣದಲ್ಲಿ ಶ್ರೀಶೈಲವು ಪವಿತ್ರವೆಂದು ಭಾರತೀಯರ ನಂಬಿಕೆ.

ಮಧ್ಯಪ್ರದೇಶದಲ್ಲಿ ಉಜ್ಜಯನಿಯಲ್ಲಿರುವ ಮಹಾಕಾಳೇಶ್ವರ
ಶ್ರೀ ಮಹಾಕಾಳೇಶ್ವರ ಜ್ಯೋತಿರ್ಲಿಂಗವು ಮಧ್ಯಪ್ರದೇಶ ದ ಉಜ್ಜಯಿನಿ ಜಿಲ್ಲೆಯಯಲ್ಲಿದೆ. ಉಜ್ಜಯನಿ ಬಹಳ ಪುರಾತನವಾದ ಐತಿಹಾಸಿಕ ಮಹತ್ವ ಉಳ್ಳ ನಗರ. ಅದು ಕ್ಷಿಪ್ರಾನದಿಯ ದಡದ ಮೇಲಿದೆ. ಮಂದಿರದ ಒಳಗಡೆ ಅನೇಕ ದೇವ ದೇವಿಯರ ಮೂರ್ತಿಗಳಿವೆ. ದುರ್ಗ, ಅನ್ನಪೂರ್ಣೇಶ್ವರಿ, ಗಣಪತಿ, ಕಾರ್ತಿಕೇಯ ಮೊದಲಾದವು.

ಮಹಾರಾಷ್ಟ್ರದ ಓಂಕಾರೇಶ್ವರ
ಶ್ರೀ ಓಂಕಾರೇಶ್ವರ ಜ್ಯೋತಿರ್ಲಿಂಗ ದೇವಾಲಯ ಮಧ್ಯಪ್ರದೇಶದಲ್ಲಿ ನರ್ಮದಾ ನದಿಯ ದಡದ ಹತ್ತಿರದ ದ್ವೀಪದ ಮೇಲಿದೆ . ಇಲ್ಲಿ ನರ್ಮದಾ ನದಿಯು ತನ್ನ ಇನ್ನೊಂದು ಸಣ್ಣ ಉಪನದಿಯೊಡನೆ ಸಂಗಮವಾಗುವ ಸ್ಥಳ. ದೇವಾಲಯವು ಮಧ್ಯದಲ್ಲಿರುವ ಮಾಂಧಾತ ಅಥವಾ ಶಿವಪುರಿ ಎಂದು ಕರೆಯಲ್ಪಡುವ ದ್ವೀಪದಲ್ಲಿದೆ. ಈ ದ್ವೀಪವು ಓಂ (ಸಂಸ್ಕೃತ) ಕಾರದ ರೂಪದಲ್ಲಿರುವುದರಿಂದ ಈ ಹೆಸರು ಬಂದಿದೆ. ಓಂ ಕಾರದ ಅಧಿದೇವತೆ ಎಂದು ಅರ್ಥ. ಇದು ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದು.

ಮಹಾರಾಷ್ಟ್ರದ ಭೀಮಾಶಂಕರ
ಭೀಮಾಶಂಕರ ಇದು ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದು. ಈ ಜ್ಯೋತಿರ್ಲಿಂಗವು ಮಹಾರಾಷ್ಟ್ರ ರಾಜ್ಯದ ಪುಣೆ ಜಿಲ್ಲೆಯ ಖೇಡ್ ತಾಲೂಕಿನ ಸಹ್ಯಾದ್ರಿ ಪರ್ವತ ಶ್ರೇಣಿಯ ಘಟ್ಟ ಪ್ರದೇಶದಲ್ಲಿದೆ. ಭೀಮಾಶಂಕರ ಇದು ಭೀಮಾ ನದಿಯ ಉಗಮ ಸ್ಥಾನವಾಗಿದೆ, ಈ ನದಿಯು ಕೃಷ್ಣಾ ನದಿಯ ಉಪನದಿಯಾಗಿದ್ದು, ಕೃಷ್ಣೆಯನ್ನು ರಾಯಚೂರಿನ ಬಳಿ ಸೇರುತ್ತದೆ.

ಮಹಾರಾಷ್ಟ್ರದ ಅವುನ್ಧ ನಾಗೇಶ್ವರ
ಮಹಾರಾಷ್ತ್ರದ 'ಅವುನ್ಧ'ದಲ್ಲಿರುವ ನಾಗನಾಥ ಜ್ಯೋತಿರ್ಲಿಂಗಗಳಲ್ಲಿ ಹತ್ತನೆಯದ್ದಾಗಿದೆ.

ಮಹಾರಾಷ್ಟ್ರದ ನಾಶಿಕದ ತ್ರ್ಯಂಬಕೇಶ್ವರ
ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯ ತ್ರಿಂಬಕ್ ಪಟ್ಟಣದಲ್ಲಿರುವ ತ್ರ್ಯಂಬಕೇಶ್ವರವು ದೇವಾಲಯ 12 ಜ್ಯೋತಿರ್ಲಿಂಗಗಳಲ್ಲಿ ಒಂದು. ಇದು ನಾಶಿಕ್ ನಗರದಿಂದ ೨೮ ಕಿ.ಮೀ. ದೂರದಲ್ಲಿ ಗೋದಾವರಿ ನದಿಯ ಉಗಮಸ್ಥಾನದ ಬಳಿಯಲ್ಲಿದೆ. ಶಿವದೇವಾಲಯವಿರುವ ಈ ಕ್ಷೇತ್ರವು ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದು. ಸಮೀಪದಲ್ಲಿನ ಬ್ರಹ್ಮಗಿರಿ ಬೆಟ್ಟಸಾಲಿನಲ್ಲಿ ಉದ್ಗಮಿಸುವ ಗೋದಾವರಿ ನದಿಯು ಭಾರತ ಜಂಬೂದ್ವೀಪದ ಅತಿ ಉದ್ದದ ನದಿಯಾಗಿದೆ. ತ್ರ್ಯಂಬಕೇಶ್ವರದ ಕುಶಾವರ್ತ ಎಂಬ ಕುಂಡದಿಂದ ಮುಂದೆ ಗೋದಾವರಿಯ ಹರಿವು ಸ್ಪಷ್ಟವಾಗುವುದರಿಂದ ಈ ಸ್ಥಾನವನ್ನು ಹಿಂದೂ ಶ್ರದ್ಧಾಳುಗಳು ಪವಿತ್ರವೆಂದು ಭಾವಿಸಿ ಪುಣ್ಯಸ್ನಾನ ಕೈಗೊಳ್ಳುವರು. ತ್ರ್ಯಂಬಕೇಶ್ವರದದ ವೈಶಿಷ್ಟ್ಯವೆಂದರೆ ಇಲ್ಲಿನ ಜ್ಯೋತಿರ್ಲಿಂಗವು ಮೂರು ಮುಖಗಳನ್ನು ಹೊಂದಿದ್ದು ಈ ಮುಖಗಳು ಬ್ರಹ್ಮ, ವಿಷ್ಣು ಮತ್ತು ಶಿವನ ಪ್ರತೀಕವಾಗಿವೆ.

ತಮಿಳುನಾಡಿನ ರಾಮೇಶ್ವರ
ತಮಿಳುನಾಡಿನ ರಾಮೇಶ್ವರಮ್ ನಲ್ಲಿರುವ ರಾಮನಾಥೇಶ್ವರ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದು. ಶಿವನನ್ನು ಇಲ್ಲಿ ರಾಮನಾಥೇಶ್ವರನಾಗಿ ಪೂಜಿಸಲಾಗುತ್ತಿದೆ. ರಾಮೇಶ್ವರಮ್ ದ ರಾಮನಾಥೇಶ್ವರ ಮತ್ತು ಕಾಶಿಯ ವಿಶ್ವನಾಥರನ್ನು ಜೀವನದಲ್ಲಿ ಒಮ್ಮೆಯಾದರೂ ದರ್ಶನ ಮಾಡಬೇಕೆಂದು ಹೇಳಲಾಗುತ್ತದೆ. ಇವೆರಡೂ ಹಿಂದುಗಳಿಗೆ ಅತಿ ಪವಿತ್ರ ಸ್ಥಳಗಳು. ರಾಮನಾಥೇಶ್ವರನ ಮಂದಿರವನ್ನು ಪಾಂಡ್ಯ ರಾಜರು ನಿರ್ಮಿಸಿದರೆನ್ನುತ್ತಾರೆ. ಸೇತುಪತಿ ಸಾಮ್ರಾಜ್ಯದ ರಾಜರ ಮಂದಿರದ ಸೇವೆಯನ್ನು ಕೂಡ ತುಂಬ ಶ್ರದ್ಧೆಯಿಂದ ಮಾಡಿದರೆನ್ನುತ್ತಾರೆ.

ಮಾಹಾರಾಷ್ಟ್ರದ ಘೃಶ್ನೇಶ್ವರ ದೇವಾಲಯ
ಮಹಾರಾಷ್ಟ್ರದ ಶ್ರೀ ಘೃಶ್ನೇಶ್ವರ ಜ್ಯೋತಿರ್ಲಿಂಗವು ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದು . ಇದು ಮಹಾರಾಷ್ಟ್ರದ ಔರಂಗಾಬಾದಿನಿಂದ ೩೦ ಕಿ.ಮೀ., ವೆರೂಲಿನಿಂದ ೧೧ ಕಿ.ಮೀ.ದೂರದಲ್ಲಿದೆ. ಎಲ್ಲೋರಾ ಗುಹೆಗಳ ಅರ್ಧ ಕಿ.ಮೀ. ನಷ್ಟು ಸಮೀಪದಲ್ಲಿದೆ. ದೇವಾಲಯ ಬಹಳ ವಿಶಾಲವಾಗಿ ಭವ್ಯವಾಗಿದೆ. ಪುರಾತನ ಶೈಲಿಯ ಕೆತ್ತನೆಯಿಂದ ಕೂಡಿದೆ. ಪ್ರತಿಯೊಂದು ಕಲ್ಲೂ ಕೆತ್ತನೆಯಿಂದ ಕೂಡಿದೆ. ಆವರಣದಲ್ಲಿ ಸುಂದರವಾದ ಕೊಳವಿದೆ. ಕೆಂಪು ಕಲ್ಲಿನಿಂದ ನಿರ್ಮಿತವಾದ ದೇವಾಲಯ, ಐದು ಅಂತಸ್ತುಗಳುಳ್ಳ ಶಿಖರಹೊಂದಿದೆ.

ಉತ್ತರಪ್ರದೇಶದ ಕಾಶಿ ವಿಶ್ವೇಶ್ವರ
ವಾರಣಾಸಿಯ ಅಥವಾ ಕಾಶಿಯ ಶ್ರೀ ವಿಶ್ವನಾಥ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದು. ಭಾರತದ ಪುಣ್ಯ ಕ್ಷೇತ್ರಗಳಲ್ಲಿ ಅತ್ಯಂತ ಪ್ರಸಿದ್ಧವಾದುದು. ಬಹಳ ಪ್ರಾಚೀನ ಮತ್ತು ಶ್ರೀಮಂತ ದೇವಾಲಯ. ಇಲ್ಲಿಯ ಕಾಶೀವಿಶ್ವನಾಥ ಜ್ಯೋತಿರ್ಲಿಂಗ ಪ್ರಸಿದ್ಧವೋ ಹಾಗೇ ಕಾಶಿಯು ಭಾರತ ಸಂಸ್ಕೃತಿ ಯ ಪ್ರತೀಕವೂ ಆಗಿದೆ. ಈ ಕಾಶಿಯಲ್ಲಿ ಅತ್ಯಂತ ಪವಿತ್ರ ಗಂಗಾ ನದಿ ಹರಿಯುವುದರಿಂದ ಭಕ್ತರು ಗಂಗೆಯಲ್ಲಿ ಸ್ನಾನ ಮಾಡಿ ದೇವರ ದರ್ಶನ ಪಡೆಯಬಹುದು.

ಜಾರ್ಖಂಡ್ ಶ್ರೀ ವೈದ್ಯನಾಥ
ಶ್ರೀ ವೈದ್ಯನಾಥ ಜ್ಯೋತಿರ್ಲಿಂಗವು ಜಾರ್ಖಂಡ್ ನ ಸಂಥಾಲ್ ಜಿಲ್ಲೆಯಲ್ಲಿದೆ. ದೇವಾಲಯದ ಸುತ್ತಲೂ ಅನೇಕ ಚಿಕ್ಕ ಚಿಕ್ಕ ಮಂದಿರಗಳಿವೆ. ಶ್ರೀ ಗೌರೀ ಮಾತಾ ಮಂದಿರ ಮುಖ್ಯವಾದುದು. ಒಂದೇಪೀಠದ ಮೇಲೆ ಶ್ರೀದುರ್ಗಾ ಮತ್ತು ತ್ರಿಪುರಸುಂದರಿ ಎಂದು ಕರೆಯಲ್ಪಡುವ ಎರಡು ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದಾರೆ. ಈ ದುರ್ಗಾ ತ್ರಿಪುರಸುಂದರಿ ಮೂರ್ತಿಗಳು ಬಹಳ ಸುಂದರವಾಗಿವೆ. ಶ್ರೀ ವೈದ್ಯನಾಥ ಜ್ಯೋತಿರ್ಲಿಲಿಂಗ ದರ್ಶನದಿಂದ ಸಂಸಾರಿಕ ಕಷ್ಟ-ಕೋಟೆಲೆಗಳೆಲ್ಲಾ ತಪ್ಪಿ , ಮಾನಸಿಕ ಶಾಂತಿ ದೊರೆಯುವುದೆಂದು ಭಕ್ತರ ನಂಬುಗೆ.

ಉತ್ತರಪ್ರದೇಶದ ಕೇದಾರನಾಥ
ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಕೇದಾರನಾಥ ಇದು ಹಿಂದುಗಳಿಗೆ ಪವಿತ್ರವಾದ ದೇವಾಲಯ. ಇದು ಹಿಮಾಲಯ ಪರ್ವತ ಶ್ರೇಣಿಯಲ್ಲಿ ಉತ್ತರಾಖಂಡ ರಾಜ್ಯದ ಚಮೋಲಿ (ಉತ್ತರಕಾಶಿ) ಜಿಲ್ಲೆಯಲ್ಲಿ ಮಂದಾಕಿನಿ ನದಿಯ ದಂಡೆಯ ಮೇಲಿರುವ ಶಿವನ ದೇವಾಲಯ. ಕೇದಾರನಾಥದಲ್ಲಿ ಮೂಲ ದೇವಾಲಯವು ಕಲ್ಲಿನ ಸುಂದರ ಶಿಲ್ಪವಾಗಿದ್ದು ಇದನ್ನು ಸುಮಾರು ೮ನೇ ಶತಮಾನದಲ್ಲಿ ಆದಿ ಗುರು ಶಂಕರಾಚಾರ್ಯರು ಸ್ಥಾಪಿಸಿದರೆಂದು ಹೇಳಲಾಗುತ್ತಿದೆ. ಇದು ಶಿವನ ಹನ್ನೆರಡು ಜ್ಯೋತಿರ್ಲಿಂಗಗಳಲ್ಲೊಂದು.

- ಎಸ್. ವಿಶ್ವನಾಥ್

SCROLL FOR NEXT