ಗೋಪೀಶ್ವರ ದೇವಾಲಯ 
ಮಹಾಶಿವರಾತ್ರಿ

ಶಿವರಾತ್ರಿಯಂದು ವೈಷ್ಣವರೂ ಶಿವನಿಗೆ ಪೂಜೆ ಸಲ್ಲಿಸುತ್ತಾರೆ

ಶಿವರಾತ್ರಿ ಎಂದರೆ ಕೇವಲ ಶೈವರು ಮಾತ್ರ ಹೆಚ್ಚು ಆಚರಣೆ ಮಾಡುವ ಹಬ್ಬವಲ್ಲ, ವೈಷ್ಣವ ಸೇರಿದಂತೆ ಹಲವು ಪಂಥದವರು ಶಿವನಿಗೆ ಶಿವರಾತ್ರಿಯಂದು ವಿಶೇಷ ಪೂಜೆ ಸಲ್ಲಿಸುತ್ತಾರೆ.

ಮಹಾಶಿವರಾತ್ರಿ ಎಂದರೆ ಕೇವಲ ಒಂದು ವರ್ಗ ಮಾತ್ರ ಹೆಚ್ಚು ಆಚರಣೆ ಮಾಡುವ ಹಬ್ಬವಲ್ಲ, ಶೈವ, ವೈಷ್ಣವ ಸೇರಿದಂತೆ ಹಲವು ಪಂಥದವರು ಶಿವನಿಗೆ ಶಿವರಾತ್ರಿಯಂದು ವಿಶೇಷ ಪೂಜೆ ಸಲ್ಲಿಸುತ್ತಾರೆ. ಶಿವರಾತ್ರಿಯಂದು ಬೃಂದಾವನದಲ್ಲಿರುವ ಗೋಪಿಶ್ವರ ಮಹಾದೇವನ ದೇವಾಲಯಕ್ಕೆ ತೆರಳುವ ನೀಡುವ ಗೌಡಿಯಾ ವೈಷ್ಣವರು ಅಲ್ಲಿರುವ ಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ರಾತ್ರಿ ಇಡಿ ಶಿವನ ಧ್ಯಾನದಲ್ಲಿ ಭಜನೆ ಮಾಡುತ್ತಾ ಜಾಗರಣೆ ಆಚರಿಸುತ್ತಾರೆ.

ಇದು ಉತ್ತರ ಭಾರತದ ನಿದರ್ಶನವಾದರೆ ದಕ್ಷಿಣ ಭಾರತದಲ್ಲೂ ಇಂತಹ ಕೆಲವು ಉದಾಹರಣೆಗಳು ಕಾಣಸಿಗುತ್ತವೆ. ಯತಿರಾಜ ಮಠದ ಪೀಠಾಧಿಪತಿಗಳಾಗಿದ್ದ ಅಸುರಿ ಶ್ರೀನಿವಾಸ ಅಯ್ಯಂಗಾರ್ ಅವರು ಯತಿರಾಜ ಮಠ, ಪೀಠಾಧಿಕಾರ ಸ್ವೀಕಾರ ಮಾಡುವುದಕ್ಕಿಂತ ಮುಂಚೆ ಶಿವಾಲಯದ ಬಗ್ಗೆಯೇ ಒಂದು ಪುಸ್ತಕ ಬರೆದಿದ್ದರು. ದ್ವೈತ ಸಿದ್ಧಾಂತದ ವೈಷ್ಣವ ಪಂಥದ ವ್ಯಾಸರಾಜ ಪೀಠದ ವಿದ್ಯಾಪಯೋನಿಧಿ ತೀರ್ಥರು, ಆ ಮಠದಲ್ಲಿರುವ ಸ್ಪಟಿಕ ಲಿಂಗಕ್ಕೆ ಶಿವರಾತ್ರಿ ದಿನದಂದು ಇಡಿ ರಾತ್ರಿಯಲ್ಲಿ ಏಕವಾರು ರುದ್ರಾಭಿಷೇಕ ಮಾಡುತ್ತಿದ್ದರು ಎಂಬುದಕ್ಕೆ ಉಲ್ಲೇಖವಿದೆ.
ಸನಾತನ ಧರ್ಮದ ಪ್ರಕಾರ ಮೋಕ್ಷ ಪಡೆಯುವುದಕ್ಕೆ ಶಿವನ ಅನುಗ್ರಹ ಅತ್ಯಗತ್ಯ.  ಆದ್ದರಿಂದ ಶಿವರಾತ್ರಿಯಂದು ವೈಷ್ಣವರು ಸೇರಿದಂತೆ ಹಲವು ಪಂಥದವರೂ ಶಿವನನ್ನು ಆರಾಧಿಸುವ ಅನೇಕ ಉದಾಹರಣೆಗಳು ಸಿಗುತ್ತವೆ.   

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬೆಳಗಾವಿ: ಬೀದಿ ನಾಯಿಗಳ ಅಟ್ಟಹಾಸ, 2 ವರ್ಷದ ಬಾಲಕಿ ಮೇಲೆ ಭೀಕರ ದಾಳಿ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

SCROLL FOR NEXT