3 ದಿನಕ್ಕೊಬ್ಬನಿಗೆ ಮರಣದಂಡನೆ
ಭಾರತದಲ್ಲಿ ಪ್ರತಿ ಮೂರು ದಿನಕ್ಕೊಬ್ಬ ಅಪರಾಧಿಗೆ ಮರಣದಂಡನೆ ಶಿಕ್ಷೆ...
ನವದೆಹಲಿ: ಭಾರತದಲ್ಲಿ ಪ್ರತಿ ಮೂರು ದಿನಕ್ಕೊಬ್ಬ ಅಪರಾಧಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗುತ್ತದೆ! ಕರ್ನಾಟಕದ ನ್ಯಾಯಾಲಯವು 2001ರಿಂದ 11ರ ವರೆಗೆ 95 ಮಂದಿಗೆ ಮರಣದಂಡನೆ ಶಿಕ್ಷೆ ವಿಧ್ನಿದೆ.
ಹೌದು. ಏಷ್ಯನ್ ಸೆಂಟರ್ ಫಾರ್ ಹ್ಯೂಮನ್ ರೈಟ್ಸ್(ಎ್ನಎಚ್‌ಆರ್) ಬಿಡುಗಡೆ ಮಾಡಿದ ವರದಿ ಪ್ರಕಾರ, 2001ರಿಂದ 11ರ ವರೆಗೆ ದೇಶದಲ್ಲಿ 1455 ಮಂದಿಗೆ ಮರಣದಂಡನೆ ವಿಧಿಸಲಾಗಿದೆ. ಅಂದರೆ ಪ್ರತಿವರ್ಷ ಸರಾಸರಿ 132.27 ಮಂದಿ ದೇಶದಲ್ಲಿ ಮರಣದಂಡನೆಗೆ ಗುರಿಯಾಗುತ್ತಿದ್ದಾರೆ.
ದೇಶದ ಇತರೆ ರಾಜ್ಯಗಳಿಗೆ ಹೋಲ್ನಿದರೆ ಮರಣದಂಡನೆ ವಿಧಿಸುವ ರಾಜ್ಯಗಳ ಪಟ್ಟಿಯಲ್ಲಿ ಉತ್ತರಪ್ರದೇಶ ಮೊದಲ ಸ್ಥಾನದಲ್ಲಿದೆ. ಅಲ್ಲಿ 370 ಮಂದಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಇದೇ ಅವಧಿಯಲ್ಲಿ 4321 ಮಂದಿಯ ಗಲ್ಲುಶಿಕ್ಷೆಯನ್ನು ಜೀವಾವಧಿಗೆ ಇಳಿಸಲಾಗಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ.
2001-11ರವರೆಗೆ ಎಷ್ಟು ಮರಣದಂಡನೆ?
ಉತ್ತರ ಪ್ರದೇಶ..............370
ಬಿಹಾರ........................132
ಮಹಾರಾಷ್ಟ್ರ.................125
ಕರ್ನಾಟಕ.......................95
ತಮಿಳುನಾಡು..................95
ಮಧ್ಯಪ್ರದೇಶ...................87
ಜಾರ್ಖಂಡ್....................81
ಪಶ್ಟಿಮ ಬಂಗಾಳ...............79
ದೆಹಲಿ.............................71
ಗುಜರಾತ್.......................57