ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಅಪಾಯವಿಲ್ಲದೇ ಸಾಗಿತು ಕ್ಷುದ್ರಗ್ರಹ!

ಲಂಡನ್‌ನಷ್ಟು ದೊಡ್ಡ ನಗರವನ್ನು ಛಿದ್ರ ಛಿದ್ರವಾಗಿಸುವ ಶಕ್ತಿ ಹೊಂದಿದ್ದ ಕ್ಷುದ್ರಗ್ರಹ ಭೂಮಿಗೆ ಯಾವುದೇ...

Parashurama
Updated On : 17 Feb 2013, 1:39 am

ಬೋಸ್ಟನ್: ಲಂಡನ್‌ನಷ್ಟು ದೊಡ್ಡ ನಗರವನ್ನು ಛಿದ್ರ ಛಿದ್ರವಾಗಿಸುವ ಶಕ್ತಿ ಹೊಂದಿದ್ದ ಕ್ಷುದ್ರಗ್ರಹ ಭೂಮಿಗೆ ಯಾವುದೇ ಅಪಾಯ ಉಂಟುಮಾಡದೇ ಹಾದುಹೋಗಿದೆ. ಶುಕ್ರವಾರ ತಡರಾತ್ರಿ 1 ಗಂಟೆಯ ವೇಳೆಗೆ ಭೂಮಿಗೆ ಅತಿ ಸಮೀಪದಲ್ಲಿ ಅಂದರೆ 27,357 ಕಿ.ಮೀ. ದೂರದಿಂದ '2012 ಡಿಎ 14' ಕ್ಷುದ್ರಗ್ರಹ ಹಾದುಹೋಯಿತು. ಏಷ್ಯಾ, ಆಸ್ಟ್ರೇಲಿಯಾ, ಪೂರ್ವ ಯುರೋಪ್‌ನಲ್ಲಿ ಖಗೋಳವೀಕ್ಷಕರು ಬೈನಾಕ್ಯುಲರ್, ದೂರದರ್ಶಕಗಳ ಮೂಲಕ ಕ್ಷುದ್ರಗ್ರಹವನ್ನು ವೀಕ್ಷ್ನಿದರು. ಆಸ್ಟ್ರೇಲಿಯಾದಲ್ಲಿ ಅನೇಕ ಮಂದಿ ಬರಿಗಣ್ಣಿನಲ್ಲಿ ಈ ಖಗೋಳ ವಿಸ್ಮಯವನ್ನು ಸವಿದರು. ಆದರೆ, ಭಾರತದ ಆಗಸದಲ್ಲಿ ಮೋಡ ಕವಿದಿದ್ದ ಕಾರಣ, ನವದೆಹಲಿ, ಉತ್ತರ ಮತ್ತು ಪಶ್ಚಿಮ ಭಾರತದ ಅನೇಕ ಕಡೆಗಳಲ್ಲಿ ಕ್ಷುದ್ರಗ್ರಹವನ್ನು ವೀಕ್ಷಿಸಲು ಸಾಧ್ಯವಾಗಲಿಲ್ಲ.

ಭೂಮಿ ಸಮೀಪದಲ್ಲೇ
ಭೂಮಿಯಿಂದ 17 ಸಾವಿರ ಮೈಲುಗಳ ದೂರದಿಂದ ಕ್ಷುದ್ರಗ್ರಹ ಹಾದುಹೋಗಿದೆ. ಹವಾಮಾನ ಮಾಹಿತಿ ನೀಡುವಂತಹ ಹಾಗೂ ದೂರಸಂಪರ್ಕ ಉಪಗ್ರಹಗಳ ಸಮೀಪದಲ್ಲೇ ಅದು ಸಾಗಿದೆ. ಇದು 150 ಅಡಿ, 1,30,000 ಟನ್ ತೂಕವಿತ್ತು.

ಅಪ್ಪಳ್ನಿದರೆ ಏನಾಗುತ್ತಿತ್ತು?
ಒಂದು ವೇಳೆ ಈ ಕ್ಷುದ್ರಗ್ರಹ ಭೂಮಿಗೆ ಅಪ್ಪಳ್ನಿದ್ದರೆ, ಭಾರಿ ಅಪಾಯ ಆಗುತ್ತಿತ್ತು. ಹಿರೋಶಿಮಾದ ಮೇಲೆ ಅಣುಬಾಂಬ್ ಹಾಕಿದಾಗ ಆದ ಹಾನಿಗಿಂತ ಒಂದು ಸಾವಿರ ಪಟ್ಟು ಅಧಿಕ ಹಾನಿ ಸಂಭವಿಸುತ್ತಿತ್ತು. 65 ಕೋಟಿ ವರ್ಷಗಳ ಹಿಂದೆ ಇಂತಹುದೇ ಕ್ಷುದ್ರಗ್ರಹವೊಂದು ಡೈನೋಸರ್‌ಗಳನ್ನು ಸರ್ವನಾಶ ಮಾಡಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement