ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಕಾಟ್ಜು, ಜೇಟ್ಲಿ ವಾಕ್ಸಮರ

Parashurama
Updated On : 17 Feb 2013, 10:30 am

ನವದೆಹಲಿ: ಬಿಜೆಪಿ ನಾಯಕ ಅರುಣ್ ಜೇಟ್ಲಿ ಹಾಗೂ ಪತ್ರಿಕಾ ಮಂಡಳಿ ಅಧ್ಯಕ್ಷ ಮಾರ್ಕಂಡೇಯ ಕಾಟ್ಜು ನಡುವೆ ತೀವ್ರ ವಾಕ್ಸಮರ ನಡೆದಿದೆ. ಗುಜರಾತ್ ಸಿಎಂ ನರೇಂದ್ರ ಮೋದಿ ಅವರ ಬಗ್ಗೆ ಕಾಟ್ಜು ಬರೆದ ಲೇಖನವೇ ಈ ವಾಗ್ಯುದ್ಧಕ್ಕೆ ಕಾರಣ.
ಕಾಂಗ್ರೆಸ್‌ಗಿಂತಲೂ ಹೆಚ್ಚು ಕಾಂಗ್ರೆಸ್ಸಿಗ: ಭಾನುವಾರ ದಿಢೀರನೆ ಕಾಟ್ಜು ವಿರುದ್ಧ ಹರಿಹಾಯ್ದ ಜೇಟ್ಲಿ, ಕಾಟ್ಜು ಅವರು 'ಕಾಂಗ್ರೆಸ್ ಪಕ್ಷಕ್ಕಿಂತಲೂ ಹೆಚ್ಚು ಕಾಂಗ್ರೆಸಿಗರಾಗಿದ್ದಾರೆ'. ಮೋದಿ ವಿರುದ್ಧ ಅವರು ಬರೆದ ಲೇಖನ ವೈಯಕ್ತಿಕ ದ್ವೇಷವನ್ನು ಬಿಂಬಿಸುತ್ತದೆ ಎಂದಿದ್ದಾರೆ. ಜತೆಗೆ, ಕಾಂಗ್ರೆಸ್ಸೇತರ ಸರ್ಕಾರಗಳನ್ನು ಕಾಟ್ಜು ಟೀಕಿಸುವುದನ್ನು ನೋಡಿದರೆ, ನಿವೃತ್ತಿ ನಂತರವೂ ಹುದ್ದೆ ಕೊಟ್ಟಿರುವವರಿಗೆ ಅವರು ಧನ್ಯವಾದ ಅರ್ಪಿಸುವಂತಿದೆ ಎಂದೂ ಜೇಟ್ಲಿ ಆರೋಪಿಸಿದ್ದಾರೆ. ಕಾಟ್ಜು ಅವರು ಸಕ್ರಿಯ ರಾಜಕೀಯ ಸೇರುವುದಕ್ಕೆ ಮುಂಚೆ ರಾಜಿನಾಮೆ ನೀಡಲಿ ಅಥವಾ ಅವರನ್ನು ಸರ್ಕಾರವೇ ಕಿತ್ತು ಹಾಕಲಿ ಎಂದೂ ಖಾರವಾಗಿ ನುಡಿದಿದ್ದಾರೆ.
ಸತ್ಯ ತಿರುಚುವ ಜೇಟ್ಲಿ: ಜೇಟ್ಲಿ ಮಾತಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಕಾಟ್ಜು, ಜೇಟ್ಲಿ ಅವರು ಸತ್ಯವನ್ನು ತಿರುಚುವಲ್ಲಿ ನಿಪುಣರು. ಫೇಸ್‌ಬುಕ್ ವಿವಾದ ಆದಾಗ ಕಾಂಗ್ರೆಸ್ ಆಡಳಿತದಲ್ಲಿರುವ ಮಹಾರಾಷ್ಟ್ರ ಸರ್ಕಾರಕ್ಕೂ, ಮಾಧ್ಯಮದವರಿಗೆ ಬೆದರಿಕೆ ಹಾಕಿದಾಗ ಹಿಮಾಚಲ ಪ್ರದೇಶ ಸರ್ಕಾರದ ವಿರುದ್ಧ ಕಠಿಣ ಪತ್ರ ಬರೆದಿದ್ದೆ. ಅದೆಲ್ಲವೂ ಜೇಟ್ಲಿಗೆ ಗೊತ್ತಿಲ್ಲ ಎಂದಿದ್ದಾರೆ. ಜತೆಗೆ, ಸತ್ಯ ತಿರುಟುವ ಜೇಟ್ಲಿ ಅವರು ಮೊದಲು ರಾಜಕೀಯ ತೊರೆಯಲಿ ಎಂದೂ ಕಾಟ್ಜು ಹೇಳಿದ್ದಾರೆ.
 ಇತ್ತೀಚೆಗಷ್ಟೇ ಪತ್ರಿಕೆಯೊಂದಕ್ಕೆ ಬರೆದ ಲೇಖನದಲ್ಲಿ ಕಾಟ್ಜು ಅವರು, 'ಗೋಧ್ರಾದಲ್ಲಿ ನಡೆದ ಘಟನೆ ಇನ್ನೂ ನಿಗೂಢವಾಗಿದೆ. ಅದರ ಜತೆಗೇ, 2002ರ ಗಲಭೆಯಲ್ಲಿ ಮೋದಿ ಕೈವಾಡವಿಲ್ಲ ಎಂದು ನಂಬುವುದೇ ಕಷ್ಟ' ಎಂದಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement