ಕ್ರಾಸಿಂಗ್ ರದ್ದು
ನವದೆಹಲಿ: ದೇಶಾದ್ಯಂತ ಸುಮಾರು 3 ಸಾವಿರ ಕಿ.ಮೀ. ರೈಲು ಮಾರ್ಗದಲ್ಲಿನ 902 ಲೆವೆಲ್ ಕ್ರಾಸಿಂಗ್ ಅನ್ನು ತೆಗೆದುಹಾಕಲು ರೇಲ್ವೆ ಇಲಾಖೆ ನಿರ್ಧರಿಸಿದೆ. ಸರಕು ಸಾಗಣೆ ರೈಲುಗಳ ವೇಗ ಹೆಚ್ಚಿಸುವ ಹಾಗೂ ಅಪಘಾತಗಳನ್ನು ತಡೆಯುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದೆ.