ಬಿಲ್ಡರ್ ಹತ್ಯೆ: ನಿವೃತ್ತ ಎನ್ಕೌಂಟರ್ ಸ್ಪೆಷಲಿಸ್ಟ್ ಬಂಧನ
ಮುಂಬೈ: ಶನಿವಾರವಷ್ಟೇ ಮುಂಬೈನಲ್ಲಿ ನಡೆದ ಬಿಲ್ಡರ್ ಸುನೀಲ್ ಕುಮಾರ್ ಲೊಹಾರಿಯಾ ಹತ್ಯೆಗೆ ಸಂಬಂಧಿಸಿ ಭಾನುವಾರ ಮುಂಬೈ ಪೊಲೀಸರು ನಿವೃತ್ತ ಎನ್ಕೌಂಟರ್ ಸ್ಪೆಷಲಿಸ್ಟ್ ಪೊಲೀಸರೊಬ್ಬರನ್ನು ಬಂಧಿಸಿದ್ದಾರೆ. ಎನ್ಕೌಂಟರ್ ಸ್ಪೆಷಲಿಸ್ಟ್ ಆಗಿದ್ದ ಸ್ಯಾಮ್ಯುವೆಲ್ ಅಮೋಲಿಕ್ 3 ವರ್ಷಗಳ ಹಿಂದೆ ನಿವೃತ್ತಿ ಹೊಂದಿದ್ದರು. ಸುನೀಲ್ ಅವರನ್ನು ಕೊಂದ ಶೂಟರ್ಗಳೊಂದಿಗೆ ಅಮೋಲಿಕ್ ನಿರಂತರ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಮೋಲಿಕ್ರನ್ನು ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಸುನೀಲ್ ಅವರನ್ನು ಶನಿವಾರ ಹಾಡಹಗಲೇ ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಅದರಲ್ಲಿ ಒಬ್ಬ ತಪ್ಪಿಸಿಕೊಂಡರೆ, ವೆಂಕಟೇಶ್ ಶೆಟ್ಟಿಯಾರ್ ಎಂಬಾತನನ್ನು ಸ್ಥಳೀಯರು ಪೊಲೀಸರಿಗೊಪ್ಪಿಸಿದ್ದಾರೆ.