ಮುಂಬೈ: ಹಿಜ್ಬುಲ್ ಮುಜಾಹಿದೀನ್‌ಗೆ ಸೇರಿದ ಇಬ್ಬರು ಉಗ್ರರನ್ನು ಇಲ್ಲಿ ಬಂಧಿಸಲಾಗಿದೆ. ಫಾರೂಕ್ ನಾಯ್ಕು ಮತ್ತು ಮಹಮ್ಮದ್ ತಾಲೂಕ್‌ದಾರ್ ಎಂಬುವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಇವರು ಜಮ್ಮು ಮತ್ತು ಕಾಶ್ಮೀರದಲ್ಲಿ ಖೋಟಾನೋಟು ಚಲಾವಣೆ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಇವರಿಬ್ಬರು ಹಿಜ್ಬುಲ್ ಮುಜಾಹೀದ್ದೀನ್ ಸಂಘಟನೆಗೆ ಸೇರಿದ ಉಗ್ರರು ಎಂದು ಅವರು ಹೇಳಿದ್ದಾರೆ.