ಲಂಡನ್: ಸದ್ಯದಲ್ಲೇ ಗೂಗಲ್ ಪಾಸ್‌ವರ್ಡ್ ಸಂಸ್ಕೃತಿಯಿಂದ ಹೊರಬರಲಿದೆ. ಈಗಾಗಲೇ ಯುಎಸ್‌ಬಿ ಕೀಯನ್ನು ಶೋಧಿಸಿರುವ ಅದು, ಸದ್ಯದಲ್ಲೇ ಎಲ್ಲಾ ಅಕೌಂಟ್‌ಗಳಿಗೆ ಇದೇ ನೀತಿ ಜಾರಿಗೆ ಬರಲಿದೆ ಎಂದು ಡೇಲಿ ಮೇಲ್ ವರದಿ ಮಾಡಿದೆ.
ಇದಕ್ಕೆ ಯುಬಿಕೀ ಎಂದು ಕರೆಯಲಾಗಿದ್ದು, ಅದನ್ನು ಲ್ಯಾಪ್‌ಟಾಪ್‌ಗೆ ಸಂಪರ್ಕಿಸಿದ ತಕ್ಷಣವೇ ಗೂಗಲ್ ಅಕೌಂಟ್ ಓಪನ್ ಆಗುತ್ತದೆ. ಇದನ್ನು ತೆಗೆದ ನಂತರ ಎಲ್ಲಾ ಅಕೌಂಟ್ ಲಾಗ್‌ಔಟ್ ಆಗಲಿವೆ. ಇದೊಂದು ರೀತಿ ಪಾಸ್‌ವರ್ಡ್ ರೀತಿಯಲ್ಲೇ ಕಾರ್ಯ ನಿರ್ವಹಿಸಲಿದೆ ಎಂದೂ ಗೂಗಲ್ ಹೇಳಿದೆ.
ಸ್ಮಾರ್ಟ್ ಕಾರ್ಡ್ ಅನ್ನು ಬಳಸಿಯೂ ಗೂಗಲ್ ಅಕೌಂಟ್ ಲಾಗ್ ಇನ್ ಮತ್ತು ಲಾಗ್‌ಔಟ್ ಮಾಡಬಹುದು. ಇದೊಂದು ರೀತಿ ಬೆರಳ ಉಂಗುರ ಇದ್ದ ಹಾಗೆ ಇರುತ್ತದೆ.