ನವದೆಹಲಿ: ಇನ್ನು ಮುಂದೆ ಮತ ಹಾಕಿದ ತಕ್ಷಣವೇ ನಿಮಗೆ ರಸೀದಿ ಬರಲಿದೆ. ಈ ಸಂಬಂಧ ಕೇಂದ್ರ ಚುನಾವಣಾ ಆಯೋಗ ಸಿದ್ಧತೆ ನಡೆಸುತ್ತಿದೆ. ಈ ಕುರಿತಂತೆ ಸುಪ್ರೀಂಕೋರ್ಟ್‌ಗೆ ಅದು ವಿವರಣೆ ನೀಡಿದೆ. ಈಗಾಗಲೇ ಪ್ರಯೋಗ ಶುರು ಮಾಡಿದ್ದೇವೆ. ಮುಂಬರುವ ಉಪ ಚುನಾವಣೆಗಳ ಸಂದರ್ಭದಲ್ಲಿ ಇದನ್ನು ಜಾರಿ ಮಾಡಿ ಪರಿಶೀಲನೆ ನಡೆಸಲಿದ್ದೇವೆ ಎಂದಿದೆ.