ಹಣ ಮಾಡುವ ಉದ್ದೇಶವೇ ನಮ್ಮಲ್ಲಿ ಭ್ರಷ್ಟಾಚಾರಕ್ಕೆ ಕಾರಣವಾದರೆ, ಚೀನಾದಲ್ಲಿ 'ಆಕೆ' ಬಗೆಗಿನ ಹುಚ್ಚೇ ಭ್ರಷ್ಟಾಚಾರಕ್ಕೆ ಕಾರಣವಂತೆ. ಹೀಗಂತ ಅಲ್ಲಿನ ಪತ್ರಿಕೆಯೊಂದು ವರದಿ ಮಾಡಿದೆ. ಇತ್ತೀಚೆಗೆ ಅಧಿಕಾರಿಗಳು ದೊಡ್ಡ ಪ್ರಮಾಣದ ಭ್ರಷ್ಟಾಚಾರದಲ್ಲಿ ತೊಡಗುತ್ತಿದ್ದಾರಂತೆ. ಇದಕ್ಕೆ ಕಾರಣವೇನು ಎಂಬ ಬಗ್ಗೆ ಹುಡುಕಾಟ ನಡೆಸಿದಾಗ ಸೆಕ್ಸ್ ಆ್ಯಂಡ್ ಮನಿ ಕಂಡು ಬಂದಿತು ಎಂದು ಪತ್ರಿಕೆ ಹೇಳಿದೆ.
ಕಟ್ಟಿಕೊಂಡವಳಿಗಿಂತ, ಇಟ್ಟು ಕೊಂಡವಳ ಬಗ್ಗೆಯೇ ಬಹಳಷ್ಟು ಅಧಿಕಾರಿಗಳಿಗೆ ಪ್ರೀತಿಯಂತೆ. ಇವರಿಗಾಗಿ ಏನು ಮಾಡಲು ಬೇಕಾದರೂ ಅವರು ತಯಾರಿರುತ್ತಾರಂತೆ. ಅವರನ್ನು ತೃಪ್ತಿ ಪಡಿಸುವ ಸಂಬಂಧವೇ ಈ ಮಟ್ಟದ ಭ್ರಷ್ಟಾಚಾರ ನಡೆಸುತ್ತಾರೆ. ಆದರೆ ಇದನ್ನು ನಿಯಂತ್ರಿಸುವುದು ಹೇಗೆ ಎಂಬುದು ಮಾತ್ರ ಅವರಿಗೆ ದೊಡ್ಡ ಕಷ್ಟದ ಸಂಗತಿಯಾಗಿದೆ ಎಂದು ಪತ್ರಿಕೆ ಹೇಳಿದೆ.
ಇತ್ತೀಚೆಗಷ್ಟೇ ಹಲವಾರು ಅಧಿಕಾರಿಗಳು ಇದೇ ಸಂಬಂಧ ಮನೆಗೆ ಕಳುಹಿಸಲಾಗಿದೆ. ಆದರೂ ಕೂಡ ಅಧಿಕಾರಿಗಳ ಈ ಚಾಳಿ ನಿಂತಿಲ್ಲ ಎಂದು ತಿಳಿಸಿದೆ.