ಉಗ್ರ ಹೆಡ್ಲಿ ಶಿಕ್ಷೆ ಸಮರ್ಥಿಸಿಕೊಂಡ ಅಮೆರಿಕ
ವಾಷಿಂಗ್ಟನ್: 26/11ರ ಸಂಚುಕೋರ ಪಾಕಿಸ್ತಾನಿ-ಅಮೆರಿಕನ್ ಉಗ್ರ ಡೇವಿಡ್ ಹೆಡ್ಲಿಗೆ ಮರಣದಂಡನೆಯೇ ಸೂಕ್ತ ಎಂಬ ಭಾರತ ಒತ್ತಾಯಿಸುತ್ತಿದ್ದರೆ, ಅಮೆರಿಕ ಮಾತ್ರ ಹೆಡ್ಲಿಗೆ ನೀಡಿರುವ 35 ವರ್ಷಗಳ ಜೈಲುಶಿಕ್ಷೆಯನ್ನು ಸಮರ್ಥಿಸಿಕೊಂಡಿದೆ.
ಉಗ್ರ ಹೆಡ್ಲಿಗೆ ಶಿಕ್ಷೆ ವಿಧಿಸಿರುವುದು ಭಯೋತ್ಪಾದನಾ ನಿಗ್ರಹಕ್ಕೆ ಸಂಬಂಧಿಸಿ ಭಾರತ ಮತ್ತು ಅಮೆರಿಕದ ನಡುವಿನ ಸಹಕಾರದ ಧನಾತ್ಮಕ ಉದಾಹರಣೆ ಎಂದು ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರ ವಿಕ್ಟೋರಿಯಾ ನೂಲ್ಯಾಂಡ್ ತಿಳಿಸಿದ್ದಾರೆ.
ಮುಂಬೈ ದಾಳಿಕೋರರಿಗೆ ಸೂಕ್ತ ಶಿಕ್ಷೆಯನ್ನು ವಿಧಿಸಲಾಗುತ್ತದೆ. ದಾಳಿಯ ಬಲಿಪಶುಗಳಿಗೆ ಖಂಡಿತಾ ನ್ಯಾಯ ಒದಗಿಸಲಾಗುತ್ತದೆ ಎಂದು ನಾವು ಭರವಸೆ ನೀಡಿದ್ದೆವು. ಅಂತೆಯೇ ಅದನ್ನು ಪೂರೈಸಿದ್ದೇವೆ ಎಂದೂ ನೂಲ್ಯಾಂಡ್ ಹೇಳಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.