ಕಡಲಾಳದ ಮೂಲಕ ಹಾರಿಸುವ ಕ್ಷಿಪಣಿ ಕೆ.5 ಪ್ರಯೋಗ ಯಶಸ್ವಿ
ಬಂಗಾಳಕೊಲ್ಲಿ: ಕಡಲಾಳದ ಮೂಲಕ ಹಾರಿಸಬಹುದಾದ ಕೆ.5 ಪ್ರಕ್ಷೇಪಣ ಕ್ಷಿಪಣಿಯನ್ನು ಬಂಗಾಳ ಕೊಲ್ಲಿಯಲ್ಲಿ ಭಾನುವಾರ ಯಶಸ್ವಿಯಾಗಿ ಪ್ರಯೋಗ ಮಾಡಲಾಯಿತು. ಸಬ್ಮೆರೀನ್ಗಳ ಮೂಲಕ ನೀರಿನಾಳದಿಂದಲೇ ಉಡಾಯಿಸಬಹುದಾದ ಭಾರತದ ಮೊದಲ ಮಧ್ಯಮ ವ್ಯಾಪ್ತಿಯ ಕ್ಷಿಪಣಿ ಇದಾಗಿದೆ. ಈ ಮೂಲಕ ನೆಲ, ಜಲ ಮತ್ತು ಆಕಾಶದ ಮೂಲಕ ಹಾರಿಸಬಲ್ಲ ಕ್ಷಿಪಣಿಗಳನ್ನು ಹೊಂದಿದ ದೇಶಗಳ ಸಾಲಿಗೆ ಭಾರತವೂ ಸೇರ್ಪಡೆಯಾಗಿದೆ. ಅಮೆರಿಕ, ಫ್ರಾನ್ಸ್, ರಷ್ಯಾ ಮತ್ತು ಚೀನಾದಂಥ ಕೆಲವೇ ಕೆಲವು ದೇಶಗಳು ಮಾತ್ರ ಈ ರೀತಿಯ ಕ್ಷಿಪಣಿಗಳನ್ನು ಹೊಂದಿದೆ.
ವಿಶೇಷ ಏನು?
ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯ ಬಲ್ಲುದು
1500 ಕಿ.ಮೀ. ದೂರದ ಗುರಿ ಭೇದಿಸುವ ಸಾಮರ್ಥ್ಯ
ಸಬ್ಮರೀನ್ಗಳಿಗೆ ಅದರಲ್ಲೂ ಐಎನ್ಎಸ್ ಅರಿಹಂತ್ಗೆ ಅಳವಡಿಸಲೆಂದೇ ಕ್ಷಿಪಣಿ ಅಭಿವೃದ್ಧಿ
ಡಿಆರ್ಡಿಒದ ಹೈದರಾಬಾದ್ನ ಡಿಫೆನ್ಸ್ ರಿಸರ್ಚ್ ಮತ್ತು ಡೆವಲಪ್ಮೆಂಟ್ ಲ್ಯಾಬೊರೇಟರಿ ಈ ಕ್ಷಿಪಣಿಯ ನಿರ್ಮಾಣ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.