ರಾಜಧಾನಿ, ಶತಾಬ್ದಿ ಪ್ರಯಾಣ ತುಟ್ಟಿ?
ನವದೆಹಲಿ: ರಾಜಧಾನಿ, ಶತಾಬ್ದಿ, ತುರಂತೋ ಸೇರಿದಂತೆ ಪ್ರಮುಖ ರೈಲುಗಳ ಪ್ರಯಾಣ ದರಗಳಲ್ಲಿ ಮತ್ತೊಂದು ಸುತ್ತಿನ ಏರಿಕೆಯಾಗುವ ಸಾಧ್ಯತೆಯಿದೆ.
ರೈಲುಗಳ ಆಹಾರ ದರಗಳ ಪರಿಷ್ಕರಣೆಗೆ ರೇಲ್ವೆ ಇಲಾಖೆ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಟಿಕೆಟ್ ದರ 15ರಿಂದ 20ರಷ್ಟು ಏರಿಕೆಯಾಗಲಿದೆ. ಶೀಘ್ರದಲ್ಲೇ ದರ ಏರಿಕೆ ಬಗ್ಗೆ ಘೋಷಣೆಯಾಗಲಿದೆ.
ಅದರಂತೆ ಸಾಫ್ಟ್ವೇರ್ ಅಪ್ಡೇಟ್ ಆದ ಬಳಿಕ ಪರಿಷ್ಕೃತ ದರ ಜಾರಿಯಾಗಲಿದೆ ಎಂದು ರೇಲ್ವೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ತಿಂಗಳಷ್ಟೇ ಮೇಲ್ ಮತ್ತು ಎಕ್ಸ್ಪ್ರೆಸ್ ರೈಲುಗಳ ಕ್ಯಾಟರಿಂಗ್ ಶುಲ್ಕ ಏರಿಕೆಯಾಗಿತ್ತು. ಆದರೆ, ರಾಜಧಾನಿ, ಶತಾಬ್ದಿ, ತುರಂತೋ ರೈಲುಗಳ ಕ್ಯಾಟರಿಂಗ್ ಶುಲ್ಕ ಏರಿಕೆಯಾಗಿರಲಿಲ್ಲ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.