ಶಾರುಖ್ಗೆ ಉಗ್ರ ಸಯೀದ್ ಆಹ್ವಾನ
ಲಾಹೋರ್: ಭಾರತದಲ್ಲಿ ಅಭದ್ರತೆ ಇದ್ದರೆ ಪಾಕಿಸ್ತಾನಕ್ಕೆ ಬಂದು ನೆಲೆಸಿ ಎಂದು ಖ್ಯಾತ ಬಾಲಿವುಡ್ ನಟ ಶಾರುಖ್ಖಾನ್ಗೆ ಜಮಾತ್ ಉದ್ ದಾವಾ ಉಗ್ರ ಹಫೀಜ್ ಸಯೀದ್ ಆಹ್ವಾನ ನೀಡಿದ್ದಾನೆ. ಅಲ್ಲದೆ, ಬಾಲಿವುಡ್ ಬಾದ್ಷಾನಿಗೆ ಪಾಕಿಸ್ತಾನದಲ್ಲಿ ಯಾವುತ್ತೂ ಸ್ವಾಗತ ಇದೆ. ಭಾರತದಲ್ಲಿ ತಾವು ಸುರಕ್ಷಿತವಾಗಿಲ್ಲ ಅಂತೆನಿಸಿದರೆ ಶಾರುಖ್ ಯಾವತ್ತು ಬೇಕಾದರೂ ಪಾಕಿಸ್ತಾನದಲ್ಲಿ ಬಂದು ನೆಲೆಸಬಹುದು ಎಂದು ಸಯೀದ್ ಹೇಳಿದ್ದಾನೆ. ಒಬ್ಬ ಮುಸ್ಲಿಮನಾದ ಮಾತ್ರಕ್ಕೆ ತಮ್ಮ ದೇಶಪ್ರೇಮವನ್ನು ಪ್ರಶ್ನಿಸುವ ರಾಜಕಾರಣಿಗಳ ಕುರಿತು ಶಾರುಖ್ಖಾನ್ ಬೇಸರ ವ್ಯಕ್ತಪಡಿಸಿದ ಬೆನ್ನಲ್ಲೇ ಸಯೀದ್ನಿಂದ ಇಂಥ ಆಹ್ವಾನ ಬಂದಿದೆ.
ಹಫೀಜ್ ಸಯೀದ್ ವಿರುದ್ಧ ಮುಂಬೈ ಬಾಂಬ್ ಸ್ಫೋಟಕ್ಕೆ ಷಡ್ಯಂತ್ರ ರಚಿಸಿದ ಆರೋಪ ಇದೆ. ಹಿಂದೂ ಭಯೋತ್ಪಾದಕರ ತರಬೇತಿ ಶಿಬಿರಗಳ ಕುರಿತು ಭಾರತದ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಶನಿವಾರವಷ್ಟೇ ಸಯೀದ್ ಅಮೆರಿಕವನ್ನು ಒತ್ತಾಯಿಸಿದ್ದ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.